ಶ್ರೀಹರಿಕೋಟಾ (ಪಿಟಿಐ): ಮೂರು ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸುವ ಮೂಲಕ ಪಿಎಸ್ಎಲ್ವಿ ರಾಕೆಟ್ ಉಡಾವಣೆಯಲ್ಲಿ ಇಸ್ರೊ ಇಂದು ಹೊಸ ಮೈಲಿಗಲ್ಲನ್ನು ಸ್ಥಾಪಿಸಿತು. ಕಳೆದ ಡಿಸೆಂಬರ್ ತಿಂಗಳಲ್ಲಿ ಉಡಾವಣೆಗೊಂಡ ಜಿಎಸ್ಎಲ್ವಿ ವಿಫಲ ಪ್ರಯತ್ನನದ ನಂತರ ಸಾಕಷ್ಟು ಕುತೂಹ ಕೆರಳಿಸಿದ್ದ ಈ ಯೋಜನೆ ಯಶಸ್ವಿಯಾಗಿದ್ದು ಇಸ್ರೊ ವಿಜ್ಞಾನಿಗಳಲ್ಲಿ ಹೊಸ ಭರವಸೆ ಮೂಡಿದಂತಾಗಿದೆ.

ದೂರಸಂವೇದಿ ಉಪಗ್ರಹ ~ರೆಸೋರ್ಸ್ಸ್ಯಾಟ್-2~ ಅನ್ನು ಹೊತ್ತ ಪಿಎಸ್ಎಲ್ವಿ ಯಶಸ್ವಿಯಾಗಿ ಇಂದು ಕಕ್ಷೆಗೆ ಸೇರಿಸುವುದರ ಮೂಲಕ ಭಾರತ ಸತತವಾಗಿ 18ನೇ ಬಾರಿ ಸ್ವದೇಶಿ ನಿರ್ಮಿತ ರಾಕೇಟ್ ಉಡಾವಣೆಯಲ್ಲಿ ಯಶ ಸಾಧಿಸಿದಂತಾಗಿದೆ.

ಇಂದು ಬೆಳಿಗ್ಗೆ 10.12ಕ್ಕೆ ಸರಿಯಾಗಿ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಭಾಹ್ಯಾಕಾಶ ಕೇಂದ್ರದಿಂದ ಒಂದು ಬೃಹತ್ ಹಾಗೂ ಎರಡು ನ್ಯಾನೊ ಉಪಗ್ರಹ ಹೊತ್ತ ಪಿಎಸ್ಎಲ್ವಿ-ಸಿ16 ರಾಕೇಟ್ ಉಡಾಯಿಸುವುದರ ಮೂಲಕ ಬಹುಕೋಟಿ ಡಾಲರ್ ಮೊತ್ತದ ರಾಕೇಟ್ ಉಡಾವಣೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಭದ್ರಗೊಳಿಸಿಕೊಂಡಿತು.

ಉಡಾವಣೆಗೊಂಡ 18 ನಿಮಿಷಗಳಲ್ಲಿ 822 ಕಿ.ಮೀ ಕ್ರಮಿಸಿದ ಪಿಎಸ್ಎಲ್ವಿ ನಿರ್ಧಿಷ್ಟ ಕಕ್ಷೆಗೆ ಉಪಗ್ರಹಗಳನ್ನು ಸೇರಿಸುವಲ್ಲಿ ಯಶಸ್ವಿಯಾಯಿತು. ಸತೀಶ್ ಧವನ್ ಭಾಹ್ಯಾಕಾಶ ಕೇಂದ್ರದ ವಿಜ್ಞಾನಿಗಳು ಯೋಜನೆಯ ಪ್ರತಿಯೊಂದು ಹಂತವನ್ನೂ ಅತ್ಯಂತ ಕುತೂಹಲದಿಂದ ವೀಕ್ಷಿಸುತ್ತಾ ಸಂಭ್ರಮಪಟ್ಟರು.

ಉಪಗ್ರಹಗಳು ಕಕ್ಷೆಗೆ ಸೇರಿದ ನಂತರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಇಸ್ರೊ ಅಧ್ಯಕ್ಷ ~ಇದೊಂದು ಯಶಸ್ವಿ ~ಟೆಕ್ಸ್ಟ್ ಬುಕ್~~ ಉಡಾವಣೆ. ಉಡಾವಣೆಯ ಪ್ರತಿಯೊಂದು ಹಂತದಲ್ಲೂ ರಾಕೆಟ್ ತಾವು ಅಂದುಕೊಂಡಂತೆ ಸಾಗಿದೆ~ ಎಂದರು.

1206 ಕಿಲೋ ತೂಕದ ಅತ್ಯಾಧುನಿಕ ಭೂ ವೀಕ್ಷಣಾ ಉಪಗ್ರಹ ~ರಿಸೋರ್ಸ್ಸ್ಯಾಟ್-2~, ನಕ್ಷತ್ರ ಹಾಗೂ ವಾತಾವರಣ ಅಧ್ಯಯನಕ್ಕಾಗಿ ಇಂಡೊ-ರಷ್ಯಾ ಜಂಟಿಯಾಗಿ ಅಭಿವೃದ್ಧಿಪಡಿಸಿದ 92 ಕಿಲೋ ತೂಕದ ಯೂತ್ಸ್ಯಾಟ್ ಹಾಗೂ ಸ್ಪಷ್ಟ ಚಿತ್ರಗಳಿಗಾಗಿ ಸಿಂಗಪುರ ಮೂಲದ ನನ್ಯಾಂಗ್ ಟೆಕ್ನಾಲಜಿ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ 106 ಕಿಲೋ ತೂಕದ ಎಕ್ಸ್-ಸ್ಯಾಟ್ ಪಿಎಸ್ಎಲ್ವಿ-ಸಿ16 ರಾಕೆಟ್ ಮೂಲಕ ಕಕ್ಷೆ ಸೇರಿದವು.

2003ರಲ್ಲಿ ಉಡಾವಣೆಗೊಂಡ ರಿಸೋರ್ಸ್ಸ್ಯಾಟ್-1 ಉಪಗ್ರಹ ಯಶಸ್ವಿಯಾಗಿ ಐದು ವರ್ಷಗಳು ಪೂರ್ಣಗೊಳಿಸಿದ್ದು ರಿಸೋರ್ಸ್ಸ್ಯಾಟ್-2 ಅದರ ಸ್ಥಾನವನ್ನು ತುಂಬಲಿದೆ. ಜತೆಗೆ ನೈಸರ್ಗಿಕ ಸಂಪತ್ತು ಕುರಿತಂತೆ ನಿಖರ ಮಾಹಿತಿ ಹಾಗೂ ಮತ್ತಷ್ಟು ಅತ್ಯಾಧುನಿಕ ಸೌಕರ್ಯ ಈ ನೂತನ ಉಪಗ್ರಹ ಹೊಂದಿದೆ.

1993ರ ಸೆ. 23ರಂದು ಪಿಎಸ್ಎಲ್ವಿ-ಡಿ1 ಉಡಾವಣೆ ವಿಫಲಗೊಂಡಿತ್ತು. ಅಲ್ಲಿಂದ ನಂತರ ನಾಲ್ಕು ಹಂತಗಳ ಉಡ್ಡಾವಣಾ ವಾಹನದವರೆಗಿನ 17 ಯೋಜನೆಗಳೂ ಯಶಸ್ವಿಯಾದಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.