ಸೋಮವಾರ, ಮೇ 17, 2021
30 °C

ವಿ.ವಿ.ಲಾಂಛನ ಬದಲಿಗೆ ವಿರೋಧಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ತುಮಕೂರು ವಿಶ್ವವಿದ್ಯಾನಿಯವು ಲಾಂಛನ ಬದಲಾವಣೆ ಮಾಡಿರುವುದನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.ವಿ.ವಿ ಎದುರು ಧರಣಿ ನಡೆಸಿದ ಬಳಿಕ ಡಾ.ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಕುಲಪತಿ ಪ್ರತಿಕೃತಿ ದಹಿಸಿದರು. ನಂತರ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆಯಲ್ಲಿ ಸಾಗಿದರು. ಜಿಲ್ಲಾಧಿಕಾರಿ ಕಚೇರಿ ಎದುರು ಕುಲಪತಿ ಪ್ರತಿಕೃತಿ ದಹಿಸಲು ಮುಂದಾದಾಗ ಪೊಲೀಸರು ತಡೆದರು.ಪ್ರೊ.ಎಸ್.ಸಿ.ಶರ್ಮಾ ಕುಲಪತಿಯಾಗಿ ನೇಮಕ ಆದಾಗಿನಿಂದಲೂ ಒಂದಲ್ಲ ಒಂದು ಸಾಂಸ್ಕೃತಿಕ ದೌರ್ಜನ್ಯವನ್ನು ಜಿಲ್ಲೆಯ ಜನತೆ ಮೇಲೆ ಹೇರುತ್ತಾ ಬಂದಿದ್ದಾರೆ. ಜಿಲ್ಲೆಯ ಐತಿಹಾಸಿಕ ಸಿರಿವಂತಿಕೆ ಪ್ರತಿಬಿಂಬಿಸುತ್ತಿದ್ದ ಲಾಂಛನ ಬದಲಾವಣೆ ಮಾಡಿರುವುದು ಜಿಲ್ಲೆಯ ಜನತೆಗೆ ಮಾಡಿದ ದ್ರೋಹ ಎಂದು ಕಿಡಿಕಾರಿದರು.ಹೊಸ ಲಾಂಛನಕ್ಕೆ ಅವಕಾಶ ಕೊಡದೆ ಹಳೆ ಲಾಂಛನವನ್ನೇ ಮುಂದುವರಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಆರ್.ಕೆ.ರಾಜು ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆ ನೇತೃತ್ವವನ್ನು ದಸಂಸ ಜಿಲ್ಲಾ ಸಂಚಾಲಕ ಎಂ.ಡಿ.ದೊಡ್ಡೇಗೌಡ, ವಿಭಾಗೀಯ ಸಂಚಾಲಕ ಗಾಂಧಿರಾಜು, ಮುಖಂಡರಾದ ಕೇಬಲ್ ರಘು, ಮರಳೂರು ಕೃಷ್ಣಮೂರ್ತಿ, ನಿಟ್ಟೂರು ರಂಗಸ್ವಾಮಿ ಇತರರು ಇದ್ದರು.ಖಂಡನೆ: ಲಾಂಛನವನ್ನು ದಿಢೀರ್ ಬದಲಾಯಿಸಿರುವುದು ಸರಿಯಲ್ಲ ಎಂದು ಚಿಂತನ ಬಳಗ ಆಕ್ಷೇಪ ವ್ಯಕ್ತಪಡಿಸಿದೆ.  ವಾಸ್ತುತಜ್ಞರ ಮಾತಿಗೆ ಕುಲಪತಿ ಮಣಿದಿರುವಂತೆ ತೋರುತ್ತದೆ ಎಂದು ಬಳಗದ ಅಧ್ಯಕ್ಷ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.