ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಸಿಂಡಿಕೇಟ್ಗೆ ನೇಮಕಗೊಂಡಿದ್ದ ಸದಸ್ಯರನ್ನು ಪದಚ್ಯುತಗೊಳಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.ಪ್ರತಿಯೊಂದು ವಿ.ವಿ.ಯ ಸಿಂಡಿಕೇಟ್ ಸದಸ್ಯರ ನೇಮಕಾತಿ ರದ್ದುಪಡಿಸಲು ಪ್ರತ್ಯೇಕ ಆದೇಶ ಹೊರಡಿಸಲಾಗುತ್ತದೆ.

ಬೆಂಗಳೂರು, ಮೈಸೂರು ವಿ.ವಿ. ಸೇರಿದಂತೆ ಕೆಲವು ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಸದಸ್ಯರನ್ನು ಈಗಾಗಲೇ ವಜಾ ಮಾಡಲಾಗಿದೆ. ಇನ್ನುಳಿದ ವಿ.ವಿ.ಗಳ ಸಿಂಡಿಕೇಟ್ ಸದಸ್ಯರ ನೇಮಕವನ್ನು ರದ್ದುಪಡಿಸುವ ಆದೇಶ ಒಂದೆರಡು ದಿನಗಳಲ್ಲಿ ಹೊರ ಬೀಳಲಿದೆ ಎಂದು ಉನ್ನತ ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

ಬಹುತೇಕ ಸದಸ್ಯರಿಗೆ ಇನ್ನೂ ಒಂದರಿಂದ ಎರಡು ವರ್ಷ ಅವಧಿ ಇತ್ತು. ಕೆಲವರ ಅವಧಿ ಒಂದು ವರ್ಷಕ್ಕಿಂತ ಕಡಿಮೆ ಇದೆ. ಬೆಂಗಳೂರು ವಿ.ವಿ. ಸದಸ್ಯರ ಅವಧಿ ಅಕ್ಟೋಬರ್ವರೆಗೂ ಇತ್ತು ಎಂದು ಮೂಲಗಳು ತಿಳಿಸಿವೆ.

ಸಿಂಡಿಕೇಟ್ ಸದಸ್ಯರ ಅವಧಿ ಮೂರು ವರ್ಷ. ಸಾಮಾನ್ಯವಾಗಿ ಅವಧಿ ಪೂರ್ಣಗೊಂಡ ನಂತರ ಹೊಸಬರನ್ನು ನೇಮಕ ಮಾಡಲಾಗುತ್ತದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಪಡದ ವ್ಯಕ್ತಿಗಳನ್ನೂ ಸಿಂಡಿಕೇಟ್ ಸದಸ್ಯರನ್ನಾಗಿ ನೇಮಕ ಮಾಡಲಾಗಿತ್ತು. ಸಂಘ ಪರಿವಾರದ ಹಿನ್ನೆಲೆಯುಳ್ಳವರು ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡಿದ್ದರು. ಹೀಗಾಗಿ ಸರ್ಕಾರ ಹಿಂದಿನ ನೇಮಕಾತಿಗಳನ್ನು ರದ್ದುಮಾಡಿದೆ ಎಂದು ಮೂಲಗಳು ತಿಳಿಸಿವೆ.

ವಿರೋಧ: ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಆಧರಿಸಿ ಸಿಂಡಿಕೇಟ್ ಸದಸ್ಯರನ್ನು ನೇಮಕ ಮಾಡಲಾಗುತ್ತದೆ. ಇದು ರಾಜಕೀಯ ಕ್ಷೇತ್ರದ ನೇಮಕಾತಿ ಅಲ್ಲ. ಸರ್ಕಾರ ಬದಲಾಗುತ್ತಿದ್ದಂತೆಯೇ ಸಿಂಡಿಕೇಟ್ ಸದಸ್ಯರನ್ನು ಬದಲಾಯಿಸುವುದು ಸರಿಯಲ್ಲ ಎಂದು ವಜಾಗೊಂಡಿರುವ ಸದಸ್ಯರೊಬ್ಬರು ಟೀಕಿಸಿದರು.

ಬೆಂಗಳೂರು ವಿವಿ: ಆರು ಮಂದಿ ಸದಸ್ಯತ್ವ ರದ್ದು
ಬೆಂಗಳೂರು:  ಬೆಂಗಳೂರು ವಿಶ್ವವಿದ್ಯಾಲಯದ ಆರು ಮಂದಿ ಸಿಂಡಿಕೇಟ್ ಸದಸ್ಯರನ್ನು ಸದಸ್ಯತ್ವದಿಂದ ಮುಕ್ತಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

`ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ- 2000'ಯ ಪ್ರಕರಣ 39 (1)ರಲ್ಲಿ ದತ್ತವಾದ ಅಧಿಕಾರ ಚಲಾಯಿಸಿ ಡಾ.ಕೆ.ವಿ. ಆಚಾರ್ಯ, ಟಿ.ಎಚ್.ಶ್ರೀನಿವಾಸಯ್ಯ, ಸಿ.ಕೆ.ಜಗದೀಶ್ ಪ್ರಸಾದ್, ಡಿ.ಎಸ್.ಕೃಷ್ಣ, ಡಾ.ಮಾನಸಾ ನಾಗಭೂಷಣ, ಜಹೀದಾ ಮುಲ್ಲಾ ಅವರ ಸದಸ್ಯತ್ವ ಹಿಂಪಡೆಯಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.