ಮುದ್ದೇಬಿಹಾಳ: ಯುವಕರು ಸ್ವಾಮಿ ವಿವೇಕಾನಂದರ ತತ್ವ, ಆದರ್ಶ, ಮಾನವೀಯ ಸೇವಾಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಮಾಜ ಸೇವಕ ಶಾಂತಗೌಡ ಪಾಟೀಲ ಹೇಳಿದರು.

ತಾಲ್ಲೂಕಿನ ಕಾಳಗಿ ಗ್ರಾಮದಲ್ಲಿ ಜಯ ಕರ್ನಾಟಕ ಗ್ರಾಮ ಘಟಕ ಹಾಗೂ ಸ್ವಾಮಿ ವಿವೇಕಾನಂದ ವೃತ್ತದ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಯಾಗಿ ಮಾತನಾಡಿದರು.

ಎಲ್ಲೆಡೆ ನಾವು ಭ್ರಷ್ಟಾಚಾರವನ್ನು ಕಾಣುತ್ತಿದ್ದೇವೆ, ಸರ್ಕಾರದ ಯೋಜನೆಗಳು ಉಳ್ಳವರ ಪಾಲಾಗುತ್ತ ನಡೆದಿವೆ. ಇಂಥ ಪ್ರಕರಣಗಳ ಬಗ್ಗೆ ಯುವಕರು ಉದಾಸೀನ ಮಾಡದೇ, ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಮುಟ್ಟುವಂತೆ ಮಾಡಬೇಕು. ಈ ದಿಸೆಯಲ್ಲಿ ಯುವ ಸಂಘಟನೆಗಳ ಪಾತ್ರ ದೊಡ್ಡದು ಎಂದು ಹೇಳಿದರು.

ಕೃಷ್ಣಾ ಕಣಿವೆ ರೈತ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಬಸವರಾಜ ಕುಂಬಾರ ಮಾತನಾಡಿ, ಆಲಮಟ್ಟಿ ಎಡದಂಡೆ ಕಾಲುವೆ ನಿರ್ಮಾಣ ಬಹಳಷ್ಟು ಕಳಪೆಯಾಗಿದೆ. ರೈತರ ಹೊಲಗಳಿಗೆ ನೀರು ಹರಿಯದೇ ಫಲವತ್ತಾದ ಭೂಮಿಗಳು ಜೌಗಿನಿಂದ ಹಾಳಾಗುತ್ತಿವೆ. ಯುವ ಸಂಘಟನೆಗಳು ಇಂಥ ವಿಷಯದ ಮೇಲೆ ಹೋರಾಟ ಮಾಡಿ ರೈತರ ಹೊಲಗಳು ಹಸಿರು ಕಾಣುವಂತೆ ಮಾಡಬೇಕು ಎಂದು ಹೇಳಿದರು.

ಜೆ.ಡಿ.ಎಸ್. ಜಿಲ್ಲಾ ಯುವ ಘಟಕದ ಅಧ್ಯಕ್ಷ ಪ್ರಭುಗೌಡ ದೇಸಾಯಿ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಅಡಿವೆಪ್ಪ ಕಡಿ, ಡಾ.ಎ.ಎಂ. ಮುಲ್ಲಾ, ತಾಳಿಕೋಟಿ ಎಪಿಎಂಸಿ ಉಪಾಧ್ಯಕ್ಷ ವೈ.ಎಚ್. ವಿಜಯಕರ, ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ನಾರಾಯಣ ಮಾಯಾಚಾರಿ ಮಾತನಾಡಿದರು. ಕುಂಟೋಜಿ ಚನ್ನವೀರ ದೇವರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಅನ್ವರ್ ಶೇಖ, ತಾಲ್ಲೂಕು ಘಟಕದ ಅಧ್ಯಕ್ಷ ಪ್ರಕಾಶ ಸಂಗಮ, ಸಹಕಾರಿ ಅಭಿವೃದ್ಧಿ ಅಧಿಕಾರಿ ಪಿ.ಬಿ. ಕಾಳಗಿ, ಈಶ್ವರ ಪತ್ತಾರ, ಎಸ್.ಪಿ. ಅಂಗಡಿ, ಕಾಳಗಿ ಗ್ರಾ.ಪಂ. ಅಧ್ಯಕ್ಷ ರವಿ ಅಂಬಿಗೇರ, ರವಿ ಕಾಮತ, ಬಸಲಿಂಗಯ್ಯ ಹಿರೇಮಠ, ಡಾ.ರಂಗನಾಥ ವೈಧ್ಯ, ಬಿ.ಬಿ. ಇಂಗಳಗೇರಿ, ಜಿ.ಕೆ.ಜೋಶಿ, ರಾಜುಗೌಡ ತುಂಬಗಿ, ರವಿ ಜಗಲಿ ಉಪಸ್ಥಿತರಿದ್ದರು.
ಮಹಾಂತೇಶ ಗಂಜಿಹಾಳ ಸ್ವಾಗತಿಸಿದರು. ಬಸವರಾಜ ಅಂಗಡಿ ಕಾರ್ಯಕ್ರಮ ನಿರೂಪಿಸಿದರು. ಹುಸೇನ್ ಮುಲ್ಲಾ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.