ಬೆಂಗಳೂರು: ಯುವ ಜನತೆಯ ಅಭ್ಯುದಯಕ್ಕಾಗಿ ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಪ್ರತ್ಯೇಕ ನಿಗಮ ಸ್ಥಾಪಿಸುವ ಉದ್ದೇಶ ಇದೆ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಗುರುವಾರ ಇಲ್ಲಿ ಪ್ರಕಟಿಸಿದರು.

ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಜ್ಞಾನ ಆಯೋಗದ ಸಹಯೋಗದಲ್ಲಿ ಸಿದ್ಧಪಡಿಸಿರುವ ರಾಜ್ಯ ಯುವ ನೀತಿಯ ಕರಡು ಬಿಡುಗಡೆ ಮಾಡಿದ ನಂತರ ಅವರು ಮಾತನಾಡಿದರು.
`ಯುವ ಜನತೆ ದೇಶದ ದೊಡ್ಡ ಸಂಪತ್ತು. ಅವರನ್ನು ರಚನಾತ್ಮಕ ಕೆಲಸಗಳಲ್ಲಿ ತೊಡಗಿಸುವ ಅಗತ್ಯ ಇದೆ. ಇದಕ್ಕೆ ಈ ಯುವ ನೀತಿ ಪೂರಕವಾಗಲಿದೆ~ ಎಂದು ಹೇಳಿದರು.

`ದೇಶದಲ್ಲಿ ಯುವಕರ ಸಂಖ್ಯೆಯೇ ಹೆಚ್ಚು. ಕರ್ನಾಟಕದಲ್ಲಿ 1.9 ಕೋಟಿ ಮಂದಿ ಯುವಕರಿದ್ದಾರೆ. ಇವರನ್ನು ಕ್ರಿಯಾಶೀಲಗೊಳಿಸುವ ಅಗತ್ಯ ಇದೆ. ಹೀಗಾಗಿ ಯುವ ಜನತೆಗಾಗಿ ಪ್ರತ್ಯೇಕ ನೀತಿ ರೂಪಿಸಲಾಗಿದೆ. ಕರಡು ಪ್ರತಿ ಓದಿದ ಬಳಿಕ ಏನಾದರೂ ಸಲಹೆ- ಸೂಚನೆಗಳು ಇದ್ದಲ್ಲಿ ಅವುಗಳನ್ನು ಸೂಚಿಸಬಹುದು~ ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.

`ಐಟಿ-ಬಿಟಿ, ಸೆಮಿಕಂಡಕ್ಟರ್ ನೀತಿ... ಹೀಗೆ ಹಲವು ನೀತಿಗಳು ನಮ್ಮಲ್ಲಿವೆ. ಪ್ರತ್ಯೇಕ ನೀತಿಗಳಿಂದ ಆಯಾ ಕ್ಷೇತ್ರಗಳಲ್ಲಿ ಸಾಕಷ್ಟು ಪ್ರಗತಿ ಆಗಿದೆ. ಈ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಯುವ ನೀತಿ ರೂಪಿಸಲಾಗಿದೆ. ದೇಶದ ಆಸ್ತಿಯಾದ ಯುವಕ-ಯುವತಿಯರನ್ನು ಸರಿಯಾದ ದಿಕ್ಕಿನಲ್ಲಿ ಕರೆದೊಯ್ಯುವ ಉದ್ದೇಶದಿಂದ ಈ ನೀತಿ ರೂಪಿಸಲಾಗಿದೆ~ ಎಂದು ವಿವರಿಸಿದರು.

`ಯುವ ಜನತೆಯ ವಿವಿಧ ಕಾರ್ಯಕ್ರಮಗಳಿಗಾಗಿ ರಾಜ್ಯ ಸರ್ಕಾರ ಈ ಸಲದ ಬಜೆಟ್ನಲ್ಲಿ 4,534 ಕೋಟಿ ರೂಪಾಯಿ ಮೀಸಲಿಟ್ಟಿದೆ. ಕರಡು ನೀತಿ ರೂಪಿಸಲು ಮತ್ತು ಅದರ ಅನುಷ್ಠಾನಕ್ಕೆ 25 ಕೋಟಿ ರೂಪಾಯಿ ತೆಗೆದಿರಿಸಲಾಗಿದೆ~ ಎಂದು ಹೇಳಿದರು.

`ಕ್ರೀಡಾ ಕ್ಷೇತ್ರದಲ್ಲಿ ಯುವ ಜನತೆಯ ಸಾಧನೆ ಆಶಾದಾಯಕವಾಗಿ ಇಲ್ಲ. ಹೊಸ ನೀತಿ ಕ್ರೀಡೆಗೆ ಒತ್ತು ನೀಡುವುದಕ್ಕೂ ಅನುಕೂಲ ಕಲ್ಪಿಸಲಿದೆ~ ಎಂದು ಅಭಿಪ್ರಾಯಪಟ್ಟರು.ಯುವಜನ ಸೇವಾ ಮತ್ತು ಕ್ರೀಡಾ ಸಚಿವ ಅಪ್ಪಚ್ಚು ರಂಜನ್ ಮಾತನಾಡಿ, `ಯುವಕರಿಗೆ ಉತ್ತಮ ಶಿಕ್ಷಣ, ಉದ್ಯೋಗ ನೀಡುವುದರ ಜತೆಗೆ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಬೇಕು. ಈ ಸಲುವಾಗಿಯೇ ಯುವ ನೀತಿ. ಕರಡು ಪ್ರತಿ ಅಧ್ಯಯನ ಮಾಡಿ ಸಾರ್ವಜನಿಕರು ನೀಡುವ ಸಲಹೆಗಳಿಗೆ ಮುಕ್ತ ಅವಕಾಶ ಇದೆ. ಉತ್ತಮ ಎನ್ನುವ ಸಲಹೆಗಳನ್ನು ಯುವ ನೀತಿಯಲ್ಲಿ ಸೇರಿಸಲಾಗುವುದು~ ಎಂದು ಹೇಳಿದರು.

ಯುವ ನೀತಿಯ ಕರಡು ರಚನಾ ಸಮಿತಿ ಅಧ್ಯಕ್ಷ ಡಾ.ಸಂದೀಪ್ ಶಾಸ್ತ್ರಿ ಅವರು ಕರಡು ನೀತಿ ಕುರಿತು ವಿವರಣೆ ನೀಡಿದರು. ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಗಿರೀಶ್ ಪಟೇಲ್, ಯುವಜನ ಸೇವಾ ಇಲಾಖೆ ಕಾರ್ಯದರ್ಶಿ ಬಿ.ಬಸವರಾಜ್, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ನಿರ್ದೇಶಕ ಎಂ.ಕೆ.ಬಲದೇವಕೃಷ್ಣ, ಕರ್ನಾಟಕ ಜ್ಞಾನ ಆಯೋಗದ ಸದಸ್ಯ ಕಾರ್ಯದರ್ಶಿ ಪ್ರೊ.ಎಂ.ಕೆ.ಶ್ರೀಧರ, ಯುವಜನ ಸೇವಾ ಇಲಾಖೆ ಸಹಾಯಕ ನಿರ್ದೇಶಕ ಎಂ.ಸಿ.ರಮೇಶ್ ಈ ಸಂದರ್ಭದಲ್ಲಿ ಹಾಜರಿದ್ದರು.

ವೆಬ್ಸೈಟ್ ವಿಳಾಸ: ಕರಡು ಯುವ ನೀತಿಯಲ್ಲಿನ ಅಂಶಗಳನ್ನು ಈ ವೆಬ್ಸೈಟ್(ಡಿಡಿಡಿ.ಚ್ಟ್ಞಠಿಟ್ಠಠಿಟ್ಝಜ್ಚಿ.ಜ್ಞಿ)ನಲ್ಲಿ ಪಡೆಯಬಹುದು.

ನೀತಿಯ ನವರತ್ನಗಳು
* ನಂಬಿಕೆ, ಸಾಧನೆ, ಶಾಂತಿ, ಅಭಿವೃದ್ಧಿ ಮತ್ತು ಬದಲಾವಣೆಗಾಗಿ ಹಾತೊರೆಯುವ ಸಾಧನವಾಗಿ ಯುವಜನತೆ

* ಯುವಕರ ಕೌಶಲ, ಸಾಮರ್ಥ್ಯ ಮತ್ತು ಮೇಧಾಶಕ್ತಿಯನ್ನು ರಕ್ಷಿಸುವುದು

* ಕೌಟುಂಬಿಕ ಮತ್ತು ಸಾಮಾಜಿಕ ಬಾಂಧವ್ಯವನ್ನು ಬಲಗೊಳಿಸುವುದು

* ಕ್ರೀಡೆ ಮತ್ತು ಮನರಂಜನೆಯ ಅವಕಾಶಗಳು

* ಭಾಗವಹಿಸುವಿಕೆಗಾಗಿ ಪಾಲುದಾರಿಕೆ

* ಸಾಮಾಜಿಕ ನ್ಯಾಯ ಸಾಧನೆಗೆ ಉತ್ತೇಜನ

* ಗೌರವ ವೃದ್ಧಿ

* ಸರ್ಕಾರ ಮತ್ತು ಕಾರ್ಪೊರೇಟ್ ಕ್ಷೇತ್ರದಲ್ಲಿನ ಸಾಮಾಜಿಕ ಜವಾಬ್ದಾರಿ

* ಅತ್ಯುತ್ತಮ, ಸುಸಂಘಟಿತ ಪ್ರಯತ್ನದ ಭರವಸೆ

ಯುವ ನೀತಿಯಲ್ಲಿ ಏನಿದೆ?
ಯುವ ನೀತಿಯು ಐದು ಹಂತಗಳ ಕಾರ್ಯತಂತ್ರವನ್ನು ಒಳಗೊಂಡಿದೆ. `ತಲುಪುವುದು~, `ತೊಡಗಿಸುವುದು~,

`ಸಬಲೀಕರಿಸುವುದು~, `ಕೊಡುಗೆ~ ಮತ್ತು `ಅಭಿವೃದ್ಧಿ~

ಯುವಜನರ ನಿರೀಕ್ಷೆ- ಶಿಕ್ಷಣ, ಉದ್ಯೋಗ, ಕ್ರೀಡೆ ಮತ್ತು ಬದಲಾವಣೆಯ ಬಯಕೆ

ಭಾರತೀಯ ಸಂಸ್ಕೃತಿ, ದೇಶ, ನಂಬಿಕೆಗಳ ಬಗ್ಗೆ ಗೌರವ ಮತ್ತು ಹೆಮ್ಮೆ ಮೂಡಿಸುವುದು

ಸಮುದಾಯದ ಸಹಕಾರ

ಯುವ ನೀತಿಯು 16ರಿಂದ 30 ವರ್ಷದ ಒಳಗಿನವರನ್ನು ಯುವಕರೆಂದು ಪರಿಗಣಿಸಿದೆ

ಯುವ ನೀತಿಗೆ ಸುಮಾರು 10 ಸಾವಿರ ಅಭಿಪ್ರಾಯಗಳೇ ತಳಹದಿ. ರಾಜ್ಯದ ಎಲ್ಲ ವರ್ಗಗಳ, ಎಲ್ಲ ಭಾಗಗಳ ಜನರಿಂದ ಮಾಹಿತಿ ಸಂಗ್ರಹಿಸಿದ್ದು, ಆ ಪ್ರಕಾರ ಅದನ್ನು ರೂಪಿಸಲಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.