ಶುಕ್ರವಾರ, ಮೇ 20, 2022
19 °C

ವಿಶಿಷ್ಟ ಆಚರಣೆ ಮೂಲಕ ವರುಣನಿಗೆ ಮೊರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಇದು ವರ್ಷಗಳಿಂದ ನಡೆಸಿ ಕೊಂಡು ಬಂದಿರುವ ಆಚರಣೆ. ಮಳೆ ರಾಯನ ಆಗಮನವಾದರೆ ಈ ಆಚರಣೆಯಲ್ಲಿ ಪಾಲ್ಗೊಂಡವರಿಗೆ ಸಂತಸ. ಮಳೆಯಾಗದಿದ್ದರೆ ವರುಣ ದೇವನ ಆಗಮನಕ್ಕಾಗಿ ಮೊರೆ ಇಡುವುದೇ ಆಚರಣೆಯ ಪ್ರಮುಖ ಉದ್ದೇಶ.

ಈ ಬಾರಿ ಮಳೆ ಇನ್ನೂ ಸರಿಯಾಗಿ ಆರಂಭವಾಗಲಿಲ್ಲ. ಹೀಗಾಗಿ ಸೋಮ ವಾರ ನಡೆದ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದ ಎಲ್ಲರ ಮನದಲ್ಲೂ ಮಳೆಯದ್ದೇ ನೆನಪು; ಅವರ ಪ್ರಾರ್ಥನೆಯಲ್ಲಿ ಸುಭಿಕ್ಷದ ಕುರಿತ ಕಾತರವೇ ತುಂಬಿತ್ತು.

ಇಂಥ ವಿಶೇಷ ಆಚರಣೆ ನಡೆದದ್ದು ಹಳೇಹುಬ್ಬಳ್ಳಿಯ ಜಂಗ್ಲಿಪೇಟೆಯಲ್ಲಿ ರುವ ಬಸವೇಶ್ವರ ದೇವಸ್ಥಾನದ ಆವ ರಣದಲ್ಲಿ. ಕಳೆದ ಏಳು ದಶಕಗಳಿಂದ ನಡೆಸಿಕೊಂಡು ಬರಲಾಗುತ್ತಿದೆ ಎಂದು ಹೇಳಲಾಗುವ ಆಚರಣೆಯಲ್ಲಿ ಸೋಮವಾರ ಗಮನ ಸೆಳೆದದ್ದು ಅಡ್ಡ ಪಲ್ಲಕ್ಕಿ.

ಜಂಗ್ಲಿಪೇಟೆ, ಅಕ್ಕಿಹೊಂಡ, ಕುರು ಬರ ಓಣಿ, ಸಂಗಮೇಶ್ವರ ನಗರ, ಹಳೇಹುಬ್ಬಳ್ಳಿ ಮುಂತಾದ ಪ್ರದೇಶ ಗಳಿಂದ ಆಗಮಿಸಿದ್ದ ನೂರಾರು ಮಂದಿಯ ಸಮಕ್ಷಮದಲ್ಲಿ ಬೆಳಿಗ್ಗೆ ನಡೆದ ಕಾರ್ಯಕ್ರಮ ಮಧ್ಯಾಹ್ನ ಅನ್ನಸಂತರ್ಪಣೆಯ ಮೂಲಕ ಮುಕ್ತಾಯಗೊಂಡಿತು.

ಬಸವೇಶ್ವರ ದೇವಸ್ಥಾನದಿಂದ ಹೊರಟ ಅಡ್ಡಪಲ್ಲಕ್ಕಿಯನ್ನು ಈಶ್ವರ ನಗರದ ಈಶ್ವರ ದೇವಸ್ಥಾನದಲ್ಲಿ ಇರಿಸಿ ಅಭಿಷೇಕ ಮಾಡಲಾಯಿತು. ಸಮರ್ಪಕ ವಾದ ಮಳೆಯಾದ ನಂತರವೇ ಪಲ್ಲಕ್ಕಿಯನ್ನು ಅಲ್ಲಿಂದ ವಾಪಸ್ ತೆಗೆದುಕೊಂಡು ಬರಲಾಗುವುದು ಎಂದು ಮುಖಂಡರು ತಿಳಿಸಿದರು.

ರಂಗಾಬದ್ದಿ, ಶೇಖಣ್ಣ ಕಳ್ಳಿಮಠ, ಶಿವಾನಂದ ಹೊಸೂರ, ಮಂಜುನಾಥ, ಬಸವರಾಜ ಹೊಸೂರ ಮತ್ತಿತರರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.