ಬ್ಯಾಕ್ ಪೋಶ್ಚರ್ ಬ್ರಾ: ಸಪೋರ್ಟ್ ಬ್ರಾ, ಕಂಟ್ರೋಲ್ ಬ್ರಾ ಎಂದೂ ಕರೆಯತ್ತಾರೆ ಇದನ್ನು. ಆಸ್ಟಿಯೊಪೋರೊಸಿಸ್ ಅಥವಾ ಇನ್ನಾವುದೇ ಕಾಯಿಲೆಯಿಂದಾಗಿ, ಇಲ್ಲವೇ ವಯಸ್ಸಾದಂತೆ ಕಂಡುಬರುವ ನಿಶ್ಯಕ್ತಿಯಿಂದಾಗಿ ಸರಿಯಾದ ಭಂಗಿಯಲ್ಲಿ ಕೂರಲು, ನಿಲ್ಲಲು ಸಾಧ್ಯವಾಗದವರಿಗೆ ಇದು ನೆರವಾಗುತ್ತದೆ.

ಭುಜ, ಬೆನ್ನನ್ನು ಆರೋಗ್ಯಕರ ಭಂಗಿಯಲ್ಲಿ ಇರಿಸಲು ಬೆನ್ನ ಹಿಂದಿನ ಅಗಲ ಕತ್ರಿಯಾಕಾರದ ಪಟ್ಟಿಗಳು ಸಹಾಯ ಮಾಡುತ್ತವೆ. ಕೆಲವೊಂದು ವಿಧದಲ್ಲಿ ಆಯಸ್ಕಾಂತೀಯ ಗುಣಗಳಿರುವ ಚೌಕಾಕಾರದ ಬೆನ್ನ ಪಟ್ಟಿ ಇದ್ದು ಇದು ಬೆವರನ್ನು ಹೀರಿಕೊಳ್ಳುತ್ತದೆ.

ಮೆಟರ್ನಿಟಿ ಬ್ರಾ: ಗರ್ಭಾವಸ್ಥೆಯಲ್ಲಿ ಮಗು ಬೆಳೆದಂತೆ ಬರೀ ಕಿಬ್ಬೊಟ್ಟೆಯ ಭಾಗ ಹಿಗ್ಗುವುದಿಲ್ಲ. ಮಗು ಹುಟ್ಟಿದ ನಂತರ ಅಗತ್ಯವಾಗಿ ಸ್ಫುರಿಸಬೇಕಾದ ಎದೆಹಾಲಿಗಾಗಿ ಸ್ತನಗಳ ಗಾತ್ರವೂ ಹೆಚ್ಚ್ಚುತ್ತದೆ. ಇದು ಗರ್ಭ ಧರಿಸಿದ 16 ವಾರಗಳಿಂದಲೇ ಶುರುವಾಗು ಪ್ರಕ್ರಿಯೆ. ಮೊದಲಿರುವುದಕ್ಕಿಂತ ಒಂದೊ ಎರಡೊ ಅಳತೆ ಹೆಚ್ಚಿನ ಬ್ರಾ ಕೊಂಡರೆ ಸಾಕು ಎನಿಸಬಹುದು. ಆದರೆ ಅದು ಸೂಕ್ತವಾಗುವುದಿಲ್ಲ.

ಮುಚ್ಚಲೇನೊ ಆಯಿತು, ಆಧಾರ ಸಾಕಾಗುವುದಿಲ್ಲ. ಪೂರ್ತಿ ಆಧಾರ ಸರಿಯಾದ ಅಳತೆಯ ಮೆಟರ್ನಿಟಿ ಬ್ರಾದಿಂದಲೇ ದೊರೆಯುತ್ತದೆ. ಹಾಗಂತ ಅಂಡರ್ವೈರ್ಡ್ ಧರಿಸಕೂಡದು. ಇದರಿಂದ ಹಾಲು ಪೂರೈಕೆಯಾಗುವ ನಾಳಗಳು ಬ್ಲಾಕ್ ಆಗುವ ಅಪಾಯ ಇರುತ್ತದೆ. ಹೆರಿಗೆಯ ಸಮಯ ಹತ್ತಿರವಾದಂತೆ ಮತ್ತೆ ಅಳತೆ ಬದಲಿಸಬೇಕಾಗುತ್ತದೆ.

ನರ್ಸಿಂಗ್ ಬ್ರಾ: ಇದು ಮೆಟರ್ನಿಟಿ ಬ್ರಾದ ತಂಗಿಯಂತೆ. ಫೀಡಿಂಗ್ ಬ್ರಾ ಮಗುವಿಗೆ ಹಾಲೂಡಲು ಅನುಕೂಲವಾಗುವಂತೆ ತಯಾರಾಗಿರುತ್ತದೆ. ಸ್ತನದ ಮೇಲಿನ ಕಪ್ಗೆ ತೊಟ್ಟಿನ ಬಳಿ ವೃತ್ತಾಕಾರದ ತೂತಿರುತ್ತದೆ. ಇದರ ಮೇಲೊಂದು ಪದರದ ಕಪ್ ಭುಜದ ಬಳಿಯ ಹುಕ್ಗೆ ಸೇರಿಸುವಂತಿರುತ್ತದೆ. ಅಗತ್ಯ ಬಿದ್ದಾಗ ಹುಕ್ ತೆಗೆದರಾಯಿತು.

ದೊಡ್ಡ ಕಪ್, ಮೆತ್ತನೆ ಹತ್ತಿಯ ಬಟ್ಟೆ, ಅಗಲ ಪಟ್ಟಿಗಳು ಹೆಚ್ಚಿನ ಆಧಾರ ನೀಡುತ್ತವೆ. ಹಾಲೂಡುವ ಕೆಲಸ ಇದ್ದೇ ಇರುತ್ತದೆ ಎಂದು ಬ್ರಾ ಹಾಕದೇ ಇರುವ ತಪ್ಪನ್ನಂತೂ ಮಾಡಲೇಬಾರದು ಎನ್ನುತ್ತಾರೆ ಪ್ರಸೂತಿ ತಜ್ಞ ವೈದ್ಯರಾದ ಡಾ. ಸರ್ವಮಂಗಳಾ ದೇವರಾಜು. ಹಾಗೆ ಮಾಡಿದರೆ ಹಾಲು ತುಂಬಿ ಭಾರವಾದ ಸ್ತನಗಳು ತಮ್ಮ ಆಕಾರ ಕಳೆದುಕೊಳ್ಳುವ ಮತ್ತು ಜೋತುಬೀಳುವ ಅಪಾಯವಿರುತ್ತದೆ.

ಮ್ಯಾಸ್ಟೆಕ್ಟಮಿ ಬ್ರಾ: ಕ್ಯಾನ್ಸರ್ ಅಥವಾ ಬೇರಾವುದೇ ಆರೋಗ್ಯ ಸಮಸ್ಯೆಯಿಂದ ಶಸ್ತ್ರಚಿಕಿತ್ಸೆಯಲ್ಲಿ ಒಂದು ಅಥವಾ ಎರಡೂ ಸ್ತನ ಕಳೆದುಕೊಂಡವರಿಗೆ ಈ ಬ್ರಾ. ಕುತೂಹಲದ ನೋಟಗಳ ಮುಜುಗರದಿಂದ ಪಾರಾಗಲು ಕೃತಕ ಸ್ತನವಿರಿಸಿಕೊಂಡು ಧರಿಸಲು ಅವಕಾಶವಿರುತ್ತದೆ.

ಸರ್ಜಿಕಲ್: ಅಪಘಾತ ಅಥವಾ ಕ್ಯಾನ್ಸರ್ನ ಕಾರಣದಿಂದ ಶಸ್ತ್ರಚಿಕಿತ್ಗೆ ಒಳಗಾದ ಸ್ತನಗಳಿಗೆ ಮಾಮೂಲಿ ಬ್ರಾ ಸೂಕ್ತವಲ್ಲ. ವೈದ್ಯರ ಶಿಫಾರಸಿನಂತೆ ಮೊದಲು ಕಂಪ್ರೆಶನ್ ಬ್ರಾ ನಂತರ ಸ್ಪೋರ್ಟ್ಸ್ ಧರಿಸಬಹುದು. ಸ್ತನಕ್ಕೆ ಮರುರೂಪ ಕೊಡುವ ಮತ್ತು ಸ್ತನದ ಗಾತ್ರ ಹೆಚ್ಚಿಸುವ ಉದ್ದೇಶದ ಶಸ್ತ್ರಕ್ರಿಯೆಯ ನಂತರವೂ ಧರಿಸಲು ನಿರ್ದಿಷ್ಟ ಸರ್ಜಿಕಲ್ ಬ್ರಾ ಲಭ್ಯ.

ನಲ್ವತ್ತರ ನಂತರ
ನಲ್ವವತ್ತರ ನಂತರ: ಆಧಾರ ನೀಡುವುದಕ್ಕಿಂತ, ಆದಷ್ಟು ದೇಹಭಾಗವನ್ನು ಮುಚ್ಚಿಡುವುದೇ 40 ದಾಟಿದವರು ಧರಿಸುವ ಬ್ರಾದ ಉದ್ದೇಶ. ಸೀರೆ ಬ್ಲೌಸ್ನ ಬೆನ್ನ ಮೇಲಿನ ಕೆಳಪಟ್ಟಿಯೀಚೆಯೂ ಇಣುಕುವ ಹೆಚ್ಚುವರಿ ಕೊಬ್ಬು ನೋಡಿದಾಗ ಸೆರಗು ಹೊದ್ದು ಇರುವುದೇ ಸುರಕ್ಷಿತ ಎನಿಸುತ್ತದೆ. ವಯಸ್ಸಂತೂ ಹೇಗೂ ಆಗುತ್ತದೆ. ಆದರೆ ವಯಸ್ಸಾಗದಂತೆ ಕಾಣುವುದು ಹೇಗೆ? ಶೇಪ್ ಬ್ರಾ ನೆರವಿಗೆ ಬರುವುದು ಆಗಲೇ.

ಕೆಜಿಗಟ್ಟಲೆ ಹೆಚ್ಚುವರಿ ಬೊಜ್ಜನ್ನು ಕೂಡ ಮರೆಮಾಚುವ ಅದ್ಭುತ ಕೆಲಸ ಮಾಡುತ್ತವೆ ಇವು. ಹೊಟ್ಟೆಯ ಭಾಗ, ಬೆನ್ನ ಭಾಗ, ತೋಳು ತೊಡೆಗಳಿಗೂ ಬಳಸಬಹುದಾದ ಶೇಪ್ ನೀಡುವ ಇನ್ನರ್ಗಳಿವೆ. ಹಿಂಜರಿಕೆ, ಕೀಳರಿಮೆ, ಕೊರಗು, ಮುಜುಗರಗಳನ್ನೆಲ್ಲ ಬಿಚ್ಚಾಕಿ ಆಧುನಿಕ ಡ್ರೆಸ್ ಧರಿಸಿ ಬೀಗಬಹುದು. ಒಳಗಿನಿಂದ ಈ ಆತ್ಮವಿಶ್ವಾಸ ಜತೆ ಸಾಗುವಂತಿದ್ದರೆ!

ಆನ್ ಲೈನ್ ಖರೀದಿಗೆ...
*http://meemee.in/for-mums/nursing-bra.html
*http://www.jockeyindia.com/140/women/collection/shapewear.aspx
*http://www.ebay.in/itm/silicon-bra-backless-strapless
*http://www.flipkart.com/my-bra-women
*http://www.jabong.com/women/clothing/women-lingerie/women-bras
*http://www.myntra.com/women-innerwear
*http://www.junglee.com/
www.victoriassecret.com/bras

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.