ಮಂಗಳೂರು: `ವಿಶೇಷ ಮಕ್ಕಳು ಹಾಗೂ ಅಂಗವಿಕಲರಿಗಾಗಿ ಈಗಾಗಲೇ ನಗರದಲ್ಲಿ ಉದ್ಯಾನವನವಿದ್ದು, ಪ್ರತ್ಯೇಕ ಕ್ರೀಡಾಂಗಣ ನಿರ್ಮಿಸಲಾಗುವುದು~ ಎಂದು ಮೇಯರ್ ಪ್ರವೀಣ್ ಅಂಚನ್ ತಿಳಿಸಿದರು.

ಅಶಕ್ತ ಮಕ್ಕಳ ಮತ್ತು ಪೋಷಕರ ವೇದಿಕೆ ಆಶಾ ಜ್ಯೋತಿ ಆಶ್ರಯದಲ್ಲಿ ನಗರದ ಡೊಂಗರಕೇರಿ ಕೆನರಾ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶಿಷ್ಟರಿಗಾಗಿ ವಿಶಿಷ್ಟ ಮೇಳ 2012~ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಕಾರ್ಪೊರೇಶನ್ ಬ್ಯಾಂಕ್ ಪ್ರಬಂಧ ನಿರ್ದೇಶಕ ಅಜಯ್ ಕುಮಾರ್ ಮಾತನಾಡಿ, `ಅಂಗವಿಕಲರಲ್ಲಿ ವಿಶೇಷ ಪ್ರತಿಭೆ ಇರುತ್ತದೆ. ಅವರಿಗೆ ಎಲ್ಲರಂತೆ ಬದುಕಲು ಅವಕಾಶ ಕಲ್ಪಿಸುವ ಹೊಣೆ ನಮ್ಮೆಲ್ಲರ ಮೇಲಿದೆ~ ಎಂದರು.

ದ.ಕ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಭಟ್ ಮಾತನಾಡಿ, `ವಿಶೇಷ ಮಕ್ಕಳಿಗೆ ಅನುಕಂಪದ ಬದಲು ಪ್ರೀತಿ ತೋರಿಸಬೇಕು~ ಎಂದರು. ಎರಡೂ ಕೈಗಳಿಲ್ಲದ ಹೊರತಾಗಿಯೂ ಶೈಕ್ಷ ಣಿಕವಾಗಿ ಉತ್ತಮ ಸಾಧನೆ ಮಾಡಿದ ಸಬಿತಾ ಮೋನಿಸ್ ಅವರನ್ನು ಸನ್ಮಾನಿಸ ಲಾಯಿತು. ಸನ್ಮಾನಿತರಿಗೆ ಕಾರ್ಪ್ ಬ್ಯಾಂಕ್ ವತಿಯಿಂದ ತಲಾ 5 ಸಾವಿರ ರೂಪಾಯಿ ನೀಡಲಾಯಿತು.

ವಿಶೇಷ ಮಕ್ಕಳ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದ ಧನ್ಯಾ ರಾವ್, ಅನಿಲ್ ಮೆಂಡೋನ್ಸ, ರಾಯ್ಸ ಪಿಂಟೊ, ಪ್ರಮೀಳಾ ಪಿಂಟೊ, ತರಬೇತುದಾರರಾದ ಮಹೇಶ್, ಲಕ್ಷ್ಮಿನಾರಾ ಯಣ, ನಾರಾಯಣ ಅವರನ್ನು ಸನ್ಮಾನಿಸಲಾಯಿತು.
ಮಹೇಶ್ ಬದಲು ಪುತ್ರಿ ಶರಣ್ಯಾ ಗೌರವ ಸ್ವೀಕರಿಸಿದರು.

ಇನ್ನರ್ವ್ಹೀಲ್ ಜಿಲ್ಲಾ ಘಟಕದ ಅಧ್ಯಕ್ಷೆ ಸ್ವರ್ಣಾ ಚಿತ್ತರಂಜನ್, ಸೇವಾಭಾರತಿ ವಿಶ್ವಸ್ಥ ಯು.ವಿ.ಶೆಣೈ, ಆಶಾ ಜ್ಯೋತಿ ಸಂಸ್ಥೆಯ ಅಧ್ಯಕ್ಷ ಡಿ.ಶ್ರೀನಿವಾಸ ರಾವ್ ಹಾಗೂ ಮುರಳೀಧರ ನಾಯಕ್ ಇದ್ದರು.

ಮೇಳಕ್ಕೆ ಸಚಿವರ ಭೇಟಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಿ.ಸಿ.ಪಾಟಿಲ್ ವಿಶೇಷ ಮಕ್ಕಳಿಗಾಗಿ ನಡೆದ ಮೇಳಕ್ಕೆ ಭೇಟಿ ನೀಡಿದರು. ವಿಧಾನಸಭಾ ಉಪಸಭಾಧ್ಯಕ್ಷ ಎನ್.ಯೋಗೀಶ್ ಭಟ್ ಜತೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.