ಬುಧವಾರ, ಜೂನ್ 16, 2021
28 °C

ವಿಶ್ರಾಂತಿ ಇಲ್ಲದೇ ಸಾಕಾಗಿದೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ನಿರಂತರ ಓಡಾಟ. ಒಂದು ದಿನ ನವದೆಹಲಿ. ಮುಂದಿನ ದಿನ ಜಲಂಧರ್. ಇದು ಆಟದ ಮೇಲೂ ಪರಿಣಾಮ ಬೀರುತ್ತಿದೆ. ಆದರೂ ಇದು ಅನಿವಾರ್ಯ...~ - ಹೀಗೆ ಹೇಳಿದ್ದು ಕರ್ನಾಟಕ ಲಯನ್ಸ್ ತಂಡದ ನಾಯಕ ಅರ್ಜುನ್ ಹಾಲಪ್ಪ.ವಿಶ್ವ ಹಾಕಿ ಸರಣಿಯ ವೇಳಾ ಪಟ್ಟಿ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು. ಹಾಕಿ ಸರಣಿಯ ಎರಡೂ ಪಂದ್ಯಗಳಲ್ಲಿ ಸೋಲು ಎದುರಾಗಿದೆ, ಇದಕ್ಕೆ ಕಾರಣವೇನು ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು `ನಿರಂತರ ಒಡಾಟದಿಂದ ಬಳಲಿಕೆ ಆಗುತ್ತಿದೆ. ಆದ್ದರಿಂದ ಉತ್ತಮ ಪ್ರದರ್ಶನ ನೀಡಲು ಆಗುತ್ತಿಲ್ಲ~ ಎಂದರು.ಮಾಚ್ 3ರಂದು ರಾತ್ರಿ ಜಲಂಧರ್‌ನಲ್ಲಿ ಪಂಜಾಬ್ ವಿರುದ್ಧದ ಪಂದ್ಯವನ್ನು ಆಡಿದ ನಂತರ ಭಾನುವಾರ ಉದ್ಯಾನನಗರಿಗೆ ಆಗಮಿಸಿದ್ದಾರೆ. ಅದಕ್ಕೂ ಮುನ್ನ ಡೆಲ್ಲಿ ವಿಜಾರ್ಡ್ಸ್ ಎದುರು ನವದೆಹಲಿಯಲ್ಲಿ ಪಂದ್ಯವನ್ನಾಡಿ ರಾತ್ರಿಯೇ ಜಲಂಧರ್‌ಗೆ ತೆರಳಿದ್ದಾರೆ.`ಸಾಕಷ್ಟು ದೈಹಿಕ ಶ್ರಮವನ್ನು ಬೇಡುವ ಆಟಕ್ಕೆ ಅದಕ್ಕೆ ತಕ್ಕ ಹಾಗೆ ದೇಹಕ್ಕೆ ವಿಶ್ರಾಂತಿಯೂ ಅಗತ್ಯ. ಕನಿಷ್ಠ ಎಂಟು ಗಂಟೆ ನಿದ್ದೆಯಾದರೂ ಬೇಕು. ಆದರೆ, ಬಿಡುವಿಲ್ಲದ ವೇಳಾಪಟ್ಟಿಯ ನಡುವೆ ಇದು ಸಾಧ್ಯವಾಗುತ್ತಿಲ್ಲ~ ಎಂದು `ಪ್ರಜಾವಾಣಿ~ ಎದುರು ಅಸಮಾಧಾನ ತೋಡಿಕೊಂಡರು.`ಹಿಂದಿನ ಪಂದ್ಯಗಳಲ್ಲಿನ ಸೋಲು ಹೊಸ ಪಾಠಗಳನ್ನು ಕಲಿಸಿದೆ. ತವರು ನೆಲದಲ್ಲಿನ ಮೊದಲ ಪಂದ್ಯದಲ್ಲಿ ಗೆಲುವಿಗಾಗಿಯೇ ಆಡುತ್ತೇವೆ. ಗಾಯದ ಸಮಸ್ಯೆ ಇದೆ. ಆದರೂ, ಅದನ್ನೆಲ್ಲಾ ಮೆಟ್ಟಿ ನಿಂತು ಗೆಲುವು ಸಾಧಿಸುತ್ತೇವೆ. ಒಟ್ಟು 14 ಪಂದ್ಯಗಳು ಇವೆ. ಅದರಲ್ಲಿ ಎರಡರಲ್ಲಿ ಸೋಲು ಕಂಡಿದ್ದೇವೆ. ಇನ್ನೂ 12 ಪಂದ್ಯಗಳು ಬಾಕಿಯಿವೆ. ಸೋಲಿನ ನಿರಾಸೆಯಲ್ಲಿ ಗೆಲುವಿನ ಹಸಿವನ್ನು ನಾವು ಮರೆತಿಲ್ಲ~ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.