ಭಾನುವಾರ, ಏಪ್ರಿಲ್ 18, 2021
30 °C

ವಿಶ್ವಕಪ್ ವಿಶೇಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೀಸ್‌ನಲ್ಲಿ ಕ್ರಿಕೆಟ್ ಮೆನು

ವಿಶ್ವಕಪ್ ಸಡಗರವನ್ನು ಹೆಚ್ಚಿಸಲು ಹೊಸೂರು ರಸ್ತೆ ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿಯ ‘ಕೀಸ್ ಹೋಟೆಲ್’ ವಿಶ್ವಕಪ್ ಮೆನು ಸಹಿತ ಸಜ್ಜಗೊಂಡಿದೆ.ಇಲ್ಲಿ ಮೆಚ್ಚಿನ ಕ್ರಿಕೆಟ್ ಪಂದ್ಯವನ್ನು ದೊಡ್ಡ ಪರದೆಯಲ್ಲಿ ನೋಡಿ ಆನಂದಿತ್ತಲೇ ಬಗೆಬಗೆಯ ವಿಶ್ವಕಪ್ ಮೆನು ಆಸ್ವಾದಿಬಹುದು. ಕಾರ್ಯ ನಿರ್ವಾಹಕ ಶೆಫ್ ಯಗ್ಯ ಮತ್ತು ಅವರ ತಂಡ ರೂಪಿಸಿರುವ ಈ ಮೆನುನಲ್ಲಿ ವಿಶ್ವಕಪ್‌ನಲ್ಲಿ ಪಾಲ್ಗೊಂಡಿರುವ 14 ದೇಶಗಳ ಖಾದ್ಯಗಳಿವೆ. ಅದಕ್ಕೆ ಇಡಲಾದ ಇಂಡಿಯಾ ಕಿ ಗೂಗ್ಲಿ, ಆಸೀ ಚಿಕನ್, ಪಾಕಿಸ್ತಾನಿ ಪಿಂಡ್ ಕೇ ಚೋಲೆ ಮತ್ತು ಐರಿಶ್ ಮ್ಯಾಕ್ರೋನಿ ಪಾಸ್ತಾಗಳಂತ ಹೆಸರು ಕೂಡ ಅಷ್ಟೇ ಆಕರ್ಷಕವಾಗಿವೆ ರಿಲಯನ್ಸ್ ಮೊಬೈಲ್‌ನಲ್ಲಿ...

ರಿಲಯನ್ಸ್ ಕಮ್ಯುನಿಕೇಶನ್ಸ್ ಮತ್ತು ಮೊಬೈಲ್ ಸಲ್ಯೂಷನ್ಸ್ ವಲಯದ ಟೆಲಿಬ್ರಮಾ ಜತೆಗೂಡಿ ಐಸಿಸಿ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗಳ ವಿಡಿಯೊ ದೃಶ್ಯಾವಳಿ ಹಾಗೂ ಮರು ಪ್ರಸಾರವನ್ನು ಉಚಿತವಾಗಿ ವೀಕ್ಷಿಸುವ ಅನುಕೂಲ ಒದಗಿಸಿವೆ. ಇದಕ್ಕಾಗಿ ಕ್ರೀಡಾಂಗಣದಲ್ಲಿ ಟೆಲಿಬ್ರಮಾ ಬ್ಲೂಫೈ ಸಾಧನ ಅಳವಡಿಸುತ್ತದೆ. ಇದರಿಂದ ಗ್ರಾಹಕರು ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಣೆಯ ಜತೆಯಲ್ಲೇ ಮೊಬೈಲ್‌ನಲ್ಲಿ ವಿಡಿಯೊ ದೃಶ್ಯಾವಳಿ ಹಾಗೂ ಮರು ಪ್ರಸಾರವನ್ನು ವೀಕ್ಷಿಸಬಹುದು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.