ಮಂಗಳವಾರ, ಮೇ 11, 2021
28 °C
2012ರಲ್ಲಿ ಸಿರಿವಂತರ ಹೆಚ್ಚಳ ಪ್ರಮಾಣ-ಭಾರತ 2ನೇ ಸ್ಥಾನ

ವಿಶ್ವದ ಕೋಟ್ಯಧೀಶರ ಸಂಖ್ಯೆ 1.2 ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ವಿಶ್ವದಲ್ಲೆಗ 1.2 ಕೋಟಿ ಮಂದಿ ಕೋಟ್ಯಧಿಪತಿಗಳು (ಡಾಲರ್ ಲೆಕ್ಕದಲ್ಲಿ ಮಿಲಿಯನಿಯರ್ಸ್) ಇದ್ದು, ಅವರೆಲ್ಲರ ಆಸ್ತಿಯ ಒಟ್ಟಾರೆ ಮೌಲ್ಯ 46.2 ಲಕ್ಷ ಕೋಟಿ ಅಮೆರಿಕನ್ ಡಾಲರ್‌ಗಳಷ್ಟಾಗುತ್ತದೆ(ಈಗಿನ ವಿನಿಮಯ ಲೆಕ್ಕದಲ್ಲಿ ್ಙ2679 ಲಕ್ಷ ಕೋಟಿ). ಭಾರತದಲ್ಲಿ ಇಂಥ ಕೋಟ್ಯ ಧೀಶರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಲೇ ಇದೆ.2012ರಲ್ಲಿ ಭಾರತದ ಕೋಟ್ಯಧಿ ಪತಿಗಳ ಸಂಖ್ಯೆಯಲ್ಲಿ ಶೇ 22.2ರಷ್ಟು ಹೆಚ್ಚಳವಾಗಿದೆ. ಸಿರಿವಂತ ಸಂಖ್ಯೆ ಏರಿಕೆ ವಿಚಾರದಲ್ಲಿ ಭಾರತ ವಿಶ್ವದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ಹಾಂಕಾಂಗ್ ಮೊದಲ ಸ್ಥಾನದಲ್ಲಿದೆ!ಬುಧವಾರ `ಜಾಗತಿಕ ಸಂಪತ್ತಿನ ವರದಿ-2013' ಬಿಡುಗಡೆ ಮಾಡಿರುವ  `ಕ್ಯಾಪ್ ಜೆಮಿನಿ ಮತ್ತು ಆರ್‌ಬಿಸಿ  ವೆಲ್ತ್ ಮ್ಯಾನೇಜ್‌ಮೆಂಟ್' ಸಂಸ್ಥೆ, ವಿಶ್ವದ ಭಾರಿ ಸಿರಿವಂತರಲ್ಲಿರುವ (ಹೈ ನೆಟ್ ವರ್ಥ್ ಇಂಡಿವಿಜುವಲ್ಸ್-ಎಚ್‌ಎನ್‌ಡಬ್ಲ್ಯುಐ) ಹೂಡಿಕೆಗೆ ಲಭ್ಯವಿರುವ ಸಂಪತ್ತಿನ ಪ್ರಮಾಣ 2012ರಲ್ಲಿ 46.2 ಲಕ್ಷ ಕೋಟಿ ಅಮೆರಿಕನ್ ಡಾಲರ್‌ಗೆ (ಶೇ 10ರಷ್ಟು) ಹೆಚ್ಚಿದೆ. ಸಿರಿವಂತರ ಈ ಹೂಡಿಕೆಗೆ ಲಭಿಸಬಹುದಾದ ಸಂಪತ್ತು 2011ರಲ್ಲಿ ಶೇ 1.7ರಷ್ಟು ಇಳಿಕೆ ಆಗಿತ್ತು ಎಂಬುದು ಗಮನಾರ್ಹ.2012ನೇ ಸಾಲಿನಲ್ಲಿ ದಶಲಕ್ಷಾಧೀಶ್ವರರ ಪಟ್ಟಿಗೆ ಹೊಸದಾಗಿ 10 ಲಕ್ಷ ಮಂದಿ ಸೇರ್ಪಡೆಯಾಗಿದ್ದಾರೆ. ಆ ಮೂಲಕ ವಿಶ್ವದ ವಿವಿಧೆಡೆಯ ಭಾರಿ ಶ್ರೀಮಂತರ ಒಟ್ಟು ಸಂಖ್ಯೆ ಶೇ 9.2ರ ಹೆಚ್ಚಳದೊಡನೆ 1.20 ಕೋಟಿಗೆ ಮುಟ್ಟಿದೆ. ಈ ಮೊದಲಿಗಿಂತ ಭಾರಿ ಪ್ರಮಾಣದಲ್ಲಿ `ಎಚ್‌ಎನ್‌ಡಬ್ಲ್ಯುಐ'  ಜನಸಂಖ್ಯೆ 2012ರಲ್ಲಿ ಹೆಚ್ಚಳವಾಗಿದೆ. ಉತ್ತರ ಅಮೆರಿಕ ಖಂಡದಲ್ಲಿನ ಸಿರಿವಂತರ ಸಂಖ್ಯೆ ಮತ್ತು ಸಂಪತ್ತಿನ ಒಟ್ಟಾರೆ ಹೆಚ್ಚಳ ಪ್ರಮಾಣದಲ್ಲಿ ಮುಂಚೂಣಿಯಲ್ಲಿದೆ ಎಂದು `ಕ್ಯಾಪ್ ಜೆಮಿನಿ ಗ್ಲೋಬಲ್ ಫೈನಾನ್ಷಿಯಲ್ ಸರ್ವಿಸಸ್'ನ ಮುಖ್ಯ ಮಾರುಕಟ್ಟೆ ಅಧಿಕಾರಿ ಜೀನ್ ಲ್ಯಾಸಿಗ್ನರ್‌ಡೀ ಮಾಹಿತಿ ನೀಡಿದ್ದಾರೆ.2012ರಲ್ಲಿ ಉತ್ತರ ಅಮೆರಿಕ ಖಂಡದಲ್ಲಿನ `ಎಚ್‌ಎನ್‌ಡಬ್ಲ್ಯುಐ'  ಜನರ ಸಂಖ್ಯೆಯೇ 37.30 ಲಕ್ಷದಷ್ಟಿತ್ತು. ಈ ಶ್ರೀಮಂತ ಸಮೂಹದ ಒಟ್ಟಾರೆ ಆಸ್ತಿ ಮೊತ್ತ 12.7 ಲಕ್ಷ ಕೋಟಿ ಡಾಲರ್ರೂ736 ಲಕ್ಷ ಕೋಟಿ) ಮೀರಿತ್ತು. ಏಷ್ಯಾ ಉಪಖಂಡದಲ್ಲಿ 36.80 ಲಕ್ಷದಷ್ಟು `ಎಚ್‌ಎನ್‌ಡಬ್ಲ್ಯುಐ' ಜನರಿದ್ದರು ಮತ್ತು ಅವರ ಸಂಪತ್ತಿನ ಒಟ್ಟು ಮೌಲ್ಯ 12 ಲಕ್ಷ ಕೋಟಿ ಡಾಲರ್ರೂ696 ಲಕ್ಷ ಕೋಟಿ)ಗಳಷ್ಟಿತ್ತು ಎಂದು ಅಂಕಿ-ಅಂಶ ನೀಡಿದ್ದಾರೆ.2012ರಲ್ಲಿ ಭಾರತದಲ್ಲಿನ ಕೋಟ್ಯಧೀಶರ ಸಂಖ್ಯೆ ಹೆಚ್ಚಲು ಷೇರು ಮಾರುಕಟ್ಟೆಯಲ್ಲಿನ ಸಕಾರಾತ್ಮಕ (ಶೇ 23.9ರಷ್ಟು) ಪ್ರಗತಿ, ಒಟ್ಟಾರೆ ರಾಷ್ಟ್ರೀಯ ವರಮಾನದಲ್ಲಿ ಹೆಚ್ಚಳ, ರಿಯಲ್ ಎಸ್ಟೇಟ್ ವಲಯದಲ್ಲಿನ ಮೌಲ್ಯದಲ್ಲಿ ಭಾರಿ ಏರಿಕೆ ಹಾಗೂ ಗ್ರಾಹಕರ ಉಪಭೋಗ ಪ್ರಮಾಣದಲ್ಲಿ ಭಾರಿ ಹೆಚ್ಚಳವಾಗಿದ್ದೇ ಕಾರಣವಾಗಿದೆ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.ಭಾರತ ಸರ್ಕಾರ 2012ರ ದ್ವಿತೀಯಾರ್ಧದಲ್ಲಿ ಮಹತ್ವದ ಆರ್ಥಿಕ ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದರಿಂದ ಮಾರುಕಟ್ಟೆಯಲ್ಲಿ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಯಿತು. ಇದರಿಂದಾಗಿಯೂ ಧನವಂತರ ಸಂಪತ್ತಿನ ಮೌಲ್ಯ ಹೆಚ್ಚಿ ಅವರು ಇನ್ನಷ್ಟು ಸಿರಿವಂತರಾಗಲು ಅವಕಾಶವಾಯಿತು ಎಂದು ವರದಿ ಗಮನ ಸೆಳೆದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.