ವಿಶ್ವಸಂಸ್ಥೆ ಸಭೆಗೆ ಮೋದಿ ಹಾಜರಾತಿ: ಬಾನ್ ವಿಶ್ವಾಸ

ವಿಶ್ವಸಂಸ್ಥೆ (ಪಿಟಿಐ): ಸೆಪ್ಟೆಂಬರ್ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತದ ನೂತನ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳುವ ವಿಶ್ವಾಸವನ್ನು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ವ್ಯಕ್ತಪಡಿಸಿದ್ದಾರೆ.
‘ಸಾಮಾನ್ಯ ಸಭೆಗೆ ಅದರಲ್ಲೂ ಜಾಗತಿಕ ತಾಪಮಾನ ಕುರಿತಾದ ಶೃಂಗಸಭೆಯಲ್ಲಿ ಮೋದಿ ಅವರು ಪಾಲ್ಗೊಳ್ಳುತ್ತಾರೆ ಎಂದು ಬಾನ್ ಅತೀವ ನಿರೀಕ್ಷೆ ಇಟ್ಟುಕೊಂಡಿದ್ದಾರೆ’ ಎಂದು ಬಾನ್ ಅವರ ವಕ್ತಾರ ಸ್ಟೆಫ್ನೆ ಡ್ಯೂಜಾರಿಕ್ ಸುದ್ದಿಗಾರರಿಗೆ ತಿಳಿಸಿದರು.
ಜಾಗತಿಕ ತಾಪಮಾನ ಬದಲಾವಣೆಗೆ ಸಂಬಂಧಿಸಿದ ಸಮಸ್ಯೆಯ ಪರಿಹಾರದಲ್ಲಿ ಭಾರತದ ಪಾತ್ರ ಮಹತ್ತರವಾಗಿದ್ದು ಸೆಪ್ಟೆಂಬರ್ನಲ್ಲಿ ಈ ಸಂಬಂಧ ನಡೆಯಲಿರುವ ಶೃಂಗಸಭೆಯಲ್ಲಿ ಮೋದಿ ಅವರ ಉಪಸ್ಥಿತಿ ಎದುರು ನೋಡಲಾಗುತ್ತಿದೆ’ ಎಂದರು.
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ನೇತೃತ್ವವಹಿಸುತ್ತಿರುವ ಮೋದಿ ಅವರನ್ನು ಅಭಿನಂದಿಸಿ ಬಾನ್ ಕಿ ಮೂನ್ ಈಚೆಗೆ ಸಂದೇಶ ಕಳುಹಿಸಿದ್ದರು.
ತಮ್ಮನ್ನು ಅಭಿನಂದಿಸಿದ ವಿಶ್ವಸಂಸ್ಥೆ ಮುಖ್ಯಸ್ಥರಿಗೆ ಧನ್ಯವಾದ ಅರ್ಪಿಸಿ ಮೋದಿ ಟ್ವೀಟ್ ಮಾಡಿದ್ದು , ‘ವಿಶ್ವದ ಅಭಿವೃದ್ಧಿ ಹಾಗೂ ಶಾಂತಿಗಾಗಿ ಭಾರತದ ಯತ್ನವನ್ನು ಮುಂದುವರೆಸಲಾಗುವುದು’ ಎಂದು ತಿಳಿಸಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.