ವಿಶ್ವ ಸ್ಕ್ವಾಷ್: ಭಾರತದ ಸವಾಲು ಅಂತ್ಯ

ಮಂಗಳವಾರ, ಜೂಲೈ 23, 2019
25 °C

ವಿಶ್ವ ಸ್ಕ್ವಾಷ್: ಭಾರತದ ಸವಾಲು ಅಂತ್ಯ

Published:
Updated:

ನವದೆಹಲಿ (ಪಿಟಿಐ): ಭಾರತದ ಸಚಿಕಾ ಇಂಗಳೆ ಪೋಲೆಂಡ್‌ನ ರೊಕ್ಲಾದಲ್ಲಿ ನಡೆಯುತ್ತಿರುವ ವಿಶ್ವ ಜೂನಿಯರ್ ಸ್ಕ್ವಾಷ್ ಚಾಂಪಿಯನ್‌ಷಿಪ್‌ನ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಸೋಲು ಅನುಭವಿಸಿದರು. ಇದರೊಂದಿಗೆ ಭಾರತದ ಸವಾಲಿಗೆ ತೆರೆಬಿತ್ತು.ಶುಕ್ರವಾರ ನಡೆದ ಬಾಲಕಿಯರ ವಿಭಾಗದ ಪಂದ್ಯದಲ್ಲಿ ಸಚಿಕಾ ಅಗ್ರಶ್ರೇಯಾಂಕದ ಆಟಗಾರ್ತಿ ಈಜಿಪ್ಟ್‌ನ ನೂರ್ ಎಲ್ ಶೆರ್ಬಿನಿ ಕೈಯಲ್ಲಿ ಪರಾಭವಗೊಂಡರು. ಭಾರತದ ಆಟಗಾರ್ತಿ 1-11, 3-11, 1-11 ರಲ್ಲಿ ಸೋಲು ಸೋಲು ಅನುಭವಿಸಿದರು.

ಸಚಿಕಾ ಮೂರನೇ ಸುತ್ತಿನ ಪಂದ್ಯದಲ್ಲಿ ಕೆನಡಾದ ಆಗ್ರ ರ‍್ಯಾಂಕಿಂಗ್‌ನ ಆಟಗಾರ್ತಿ ಹೋಲಿ ನಾಟನ್ ವಿರುದ್ಧ 13-11, 4-11, 11-9, 0-11, 11-4 ರಲ್ಲಿ ಅಚ್ಚರಿಯ ಗೆಲುವು ಪಡೆದಿದ್ದರು.ಭಾರತದ ಹರ್ಷಿತ್ ಕೌರ್ ಮತ್ತು ಲಕ್ಷ್ಯ ರಾಘವೇಂದ್ರನ್ ಮೂರನೇ ಸುತ್ತಿನಲ್ಲೇ ಸೋತು ಹೊರಬಿದ್ದರು. ಹರ್ಷಿತ್ 13-11, 8-11, 1-11, 8-11 ರಲ್ಲಿ ಹಾಂಕಾಂಗ್‌ನ ಹೊ ಕಾ ಪೊ ಎದುರೂ, ಲಕ್ಷ್ಯ ರಾಘವೇಂದ್ರನ್ 11-8, 3-11, 7-11, 5-11 ರಲ್ಲಿ ಇಂಗ್ಲೆಂಡ್‌ನ ಲಿಲ್ಲಿ ಟೇಲರ್ ಕೈಯಲ್ಲೂ ಸೋಲು ಅನುಭವಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry