ಗುರುವಾರ , ಮಾರ್ಚ್ 4, 2021
29 °C

ವಿಷಣ್ಣತೆ !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಷಣ್ಣತೆ !

ಎಂತೆಂಥಾ ಜನ ಇರುವರು ಸ್ವಾಮಿ ಇಲ್ಲಿ !

ಆಗರ್ಭ ಶ್ರೀಮಂತರೂ, ಆಗರ್ಭ (?) ಬಡವರೂ

ಕೋಟಿ - ಕೋಟಿಗಳ ವಿದೇಶದಲಿ ಕದ್ದಿಡುವವರು,

ಕೆಜಿ - ಕೆಜಿ ಚಿನ್ನವ ಮನೆಯೊಳಗವಿತಿಡುವವರು,

ಅವರು - ಇವರು,

ಎಲ್ಲರೂ ಭಾರತೀಯರು.ರಾಜಕೀಯದಲಿ, ಸಿನೆಮಾದಲಿ ಮೆರೆದವರು,

ಲಂಚ ವೀರರು, ಕಳ್ಳದಂಧೆ ಕೋರರು,

ಹೂಡಿದರೆ, ಖಟ್ಲೆಯನು ಅವರ ಮೇಲೆ,

ಒಡನೆಯೇ ಬರುವುದು ಅವರಿಗೆ ಕಾಯಿಲೆ,

ಆಂ! ಸರಿ ಹೋಗುವರಿವರು `ಬೇಲು' ದೊರಕಿದ ಕೂಡಲೆ;

ಇರುವೆವು ಸ್ವಾಮಿ, ನಾವು - ನೀವು ಇವರ ನಡುವಲ್ಲಿ,

ನಮ್ಮೀ ಬದುಕು ಸಾಗಿದೆ ತಿಂಗಳ ಸಂಬಳದಲ್ಲಿ,

ಕಷ್ಟ - ಕೋಟಲೆ, ತಾಪ - ತಲ್ಲಣಗಳೆಡೆಯಲ್ಲಿ,

ಹಾಲು - ಗ್ಯಾಸ್ - ಪೆಟ್ರೋಲು ದರ ಏರಿಕೆ ಬಿಸಿಯಲ್ಲಿ.

- ಎನ್. ಡಿ. ಕಾರಂತ, ಮೈಸೂರು .

ಸೂಚನೆ

`ಪ್ರಜಾವಾಣಿ' ಅಭಿಮತ ಪುಟದ ವಾಚಕರ ವಾಣಿ ಅಂಕಣಕ್ಕೆ ಬರೆಯುವ ಪತ್ರಗಳು 100 ಪದಗಳ ಮಿತಿಯಲ್ಲಿರಲಿ.

ವಿಳಾಸ:  ಸಂಪಾದಕರು, ಪ್ರಜಾವಾಣಿ, ವಾಚಕರ ವಾಣಿ ವಿಭಾಗ, 75, ಎಂ.ಜಿ.ರಸ್ತೆ, ಬೆಂಗಳೂರು-560 001

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.