ಶನಿವಾರ, ಜುಲೈ 24, 2021
26 °C

ವಿಷ ಆಹಾರ ಸೇವನೆ: 75 ಮಂದಿ ಅಸ್ವಸ್ಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಿರಿಯಾಪಟ್ಟಣ: ಸಮಾರಂಭವೊಂದರಲ್ಲಿ ಊಟ ಸೇವಿಸಿದ 75ಕ್ಕೂ ಅಧಿಕ ಮಂದಿ ಅಸ್ವಸ್ಥಗೊಂಡು ಚಿಕಿತ್ಸೆ ಪಡೆದ ಘಟನೆ ತಾಲ್ಲೂಕಿನ ಬೆಕ್ಕರೆ ಗ್ರಾಮದಲ್ಲಿ ಜರುಗಿದೆ.ಬೆಕ್ಕರೆ ಗ್ರಾಮದಲ್ಲಿನ ರವಿ ಎಂಬುವವರ ಪುತ್ರಿಯ ಆರತಿ ಕಾರ್ಯಕ್ರಮ ಭಾನುವಾರ ರಾತ್ರಿ ನಡೆದಿದ್ದು ಇದರಲ್ಲಿ ನೂರಕ್ಕೂ ಹೆಚ್ಚು ಮಂದಿ ಊಟ ಮಾಡಿದ್ದರು. ಆದರೆ, ಬೆಕ್ಕರೆ ಹಾಗೂ ಭುವನಹಳ್ಳಿ ಗ್ರಾಮದ 75ಕ್ಕೂ ಅಧಿಕ ಮಂದಿಗೆ ರಾತ್ರಿ 2ಗಂಟೆಯ ನಂತರ ವಾಂತಿ-ಭೇದಿ ಪ್ರಾರಂಭವಾಗಿದೆ.ಆದರೆ, ಬೆಳಗಿನವರೆಗೂ ಗ್ರಾಮದಲ್ಲಿಯೆ ಪ್ರಥಮ ಚಿಕಿತ್ಸೆ ಪಡೆದ ಗ್ರಾಮಸ್ಥರು ಭುವನಹಳ್ಳಿ ಹಾಗೂ ಕೋಮಲಾಪುರ ಪ್ರಾಥಮಿಕ ಕೇಂದ್ರಗಳು ಬೆಳಿಗ್ಗೆ ಬಾಗಿಲು ತೆರೆಯುತ್ತಿದ್ದಂತೆಯೇ ಒಬ್ಬೊಬ್ಬರಾಗಿ ಚಿಕಿತ್ಸೆಗಾಗಿ ಧಾವಿಸಿದರು. ಭುವನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 35 ಮಂದಿಗೆ ವೈದ್ಯ ಡಾ.ರಾಜೇಶ್ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗಿದೆ.ಇದರಲ್ಲಿ 25 ಮಂದಿಗೆ ಗುಣವಾಗಲೇ ಇಲ್ಲ. ಆದ್ದರಿಂದ ಇನ್ನುಳಿದ ಜನರನ್ನು ಸೇರಿಸಿ ಒಟ್ಟು 50ಕ್ಕೂ ಹೆಚ್ಚು ಮಂದಿಯನ್ನು ಪಿರಿಯಾಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈಗ ಇವರುಗಳ ಆರೋಗ್ಯ ಸುಧಾರಿಸುತ್ತಿದೆ.ಕಲುಷಿತ ನೀರು ಹಾಗೂ ವಿಷ ಆಹಾರ ಸೇವನೆಯಿಂದ ಈ ಘಟನೆ ಸಂಭವಿಸಿರಬಹುದು ಎಂದು ಡಾ.ರಾಜೇಶ್ ತಿಳಿಸಿದ್ದಾರೆ.ಅಸ್ವಸ್ಥರಾಗಿದ್ದ 50ಕ್ಕೂ ಹೆಚ್ಚು ಮಂದಿಗೆ ಪಿರಿಯಾಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಾಗ ಸಾಲದೇ ಇದ್ದರಿಂದ ನೆಲದ ಮೇಲೆ ಮಲಗಿಸಿ ಚಿಕಿತ್ಸೆ ನೀಡಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.