ಸೋಮವಾರ, ಜನವರಿ 20, 2020
20 °C

ವೀಣಾ ಮಲ್ಲಿಕ್‌ಗೆ ರಾಜಕಾರಣಿ ಆಗುವಾಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸದ್ಯಕ್ಕೆ ಬಾಲಿವುಡ್ ಚಿತ್ರಗಳಲ್ಲಿ ಬ್ಯುಸಿಯಾಗಿರುವ `ಕಾಂಟ್ರವರ್ಸಿ ಕ್ವೀನ್' ವೀಣಾ ಮಲ್ಲಿಕ್‌ಗೆ ಈಗ ರಾಜಕಾರಣಿ ಆಗಬೇಕು ಎಂಬ ಆಸೆ ಅಂಕುರಿಸಿದೆಯಂತೆ. ಪಾಕಿಸ್ತಾನಿ ನಟಿ ವೀಣಾಗೆ ಈ ಆಸೆ ಇದ್ದಕ್ಕಿದ್ದಂತೆ ಹುಟ್ಟಿಕೊಂಡಿದ್ದಲ್ಲ. ಬದಲಾಗಿ, ಆಕೆಯ ಅಪ್ಪನ ಆಸೆಯನ್ನು ಈಡೇರಿಸುವ ಸಲುವಾಗಿ ಅವರು ರಾಜಕೀಯ ಪ್ರವೇಶ ಮಾಡುವ ಇಂಗಿತ ವ್ಯಕ್ತಪಡಿಸಿರುವುದಂತೆ.`ನಾನು ರಾಜಕೀಯ ರಂಗಕ್ಕೆ ಇಳಿಯಬೇಕು ಅಂದುಕೊಂಡಿದ್ದೇನೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ರಾಜಕಾರಣಿಗೆ ಅಗತ್ಯವಿರುವಷ್ಟು ಪ್ರಬುದ್ಧತೆ ಗಳಿಸಿಕೊಂಡಿಲ್ಲ. ನನ್ನಲ್ಲಿ ಆ ಶಕ್ತಿ ಮೈಗೂಡಿದಾಗ ಖಂಡಿತವಾಗಿಯೂ ಸಕ್ರಿಯ ರಾಜಕಾರಣಕ್ಕೆ ಧುಮುಕುತ್ತೇನೆ' ಎಂದಿದ್ದಾರೆ ವೀಣಾ.`ಮಗಳೇ ನೀನು ದೊಡ್ಡ ರಾಜಕಾರಣಿ ಆಗಬೇಕು' ಅಂತ ನನ್ನಪ್ಪ ಸದಾ ಹೇಳುತ್ತ್ದ್ದಿದರು. ನನ್ನೊಳಗೆ ಅಂತಹ ಆಸೆ ಮೊಳೆತಿರುವುದು ಇದೇ ಕಾರಣಕ್ಕೆ. ಮಗಳಾಗಿ ಅವರ ಆಸೆ ಈಡೇರಿಸುವುದು ನನ್ನ ಕರ್ತವ್ಯ. ಅದನ್ನು ಸದ್ಯದಲ್ಲೇ ಪೂರ್ಣಗೊಳಿಸುತ್ತೇನೆ' ಎಂದಿದ್ದಾರೆ ಅವರು. ಪಾಕಿಸ್ತಾನದಲ್ಲಿದ್ದಾಗ ನಟಿ ವೀಣಾ ಮಲ್ಲಿಕ್‌ಗೆ ಅವರ ತಂದೆ ಸಲ್ವಾರ್ ಧರಿಸುವಂತೆ ಹೇಳುತ್ತಾರಂತೆ. `ಅಪ್ಪ ನನ್ನನ್ನು ಸದಾ ಕಾಲ ಸಲ್ವಾರ್, ಕುರ್ತಾಗಳಲ್ಲೇ ನೋಡಲು ಬಯಸುತ್ತಾರೆ. ಹಾಗಾಗಿ ನಾನು ಅಪ್ಪನ ಜತೆ ಇರುವಾಗಲೆಲ್ಲ ಸಾಧ್ಯವಾದಷ್ಟೂ ಸಲ್ವಾರ್ ಕಮೀಜ್ ಮತ್ತು ದುಪಟ್ಟಾವನ್ನು ಧರಿಸುತ್ತೇನೆ. ಈ ಮೂಲಕ ನಾನು ಅವರನ್ನು ಖುಷಿಪಡಿಸುತ್ತೇನೆ' ಎಂದೂ ಹೇಳಿಕೊಂಡಿದ್ದಾರೆ ವೀಣಾ.

 

ಪ್ರತಿಕ್ರಿಯಿಸಿ (+)