`ಹೀಗ್ ಬರ್ತೀರಿ, ಫೋಟೋ ತೆಕ್ಕೋತೀರಿ, ಒಂದಷ್ಟು ಬರೀತೀರಿ. ಆದ್ರೆ ನಮ್ಮೂರಿನ ಹೊಲಸಿನ ಸಮಸ್ಯೆ ಮಾತ್ರ ಬಗೆಹರಿಲಿಲ್ಲ. ನೋಡ್ ಬನ್ನಿ, ನಮ್ಮ ಬಾವೀನಾ. ನೀರೆಲ್ಲ ಕಪ್ಪಾಗಿದೆ. ಈಜಾಡ್ತಿದ್ದ ಬಾವಿ, ಸಿಹಿನೀರ ಬಾವಿ ಹೇಗಾಗಿದೆ ನೋಡಿ...?

ವೀರಾಪುರದ ಸತ್ಯಪ್ಪ ದಂಪತಿ, ಕೊಳಚೆ ನೀರಿನ ಫೋಟೊ ತೆಗೆಯುತ್ತಿದ್ದ ನಮ್ಮನ್ನು ಕಂಡು `ಅಣಕವಾಡಿದರು~. ಅವರ ಮಾತುಗಳಲ್ಲಿ ಕೋಪ, ನೋವು, ಹತಾಶೆಯಿತ್ತು. ತಮ್ಮೂರಿನ ಮೂಲಕ ಹಾದು ಹೋಗುವ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ತ್ಯಾಜ್ಯ ನೀರು ಅವರನ್ನು ಆ ಮಟ್ಟದಲ್ಲಿ ಹೈರಾಣಾಗಿಸಿದೆ!

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರಕ್ಕೆ 4 ಕಿ.ಮೀ ದೂರದಲ್ಲಿದೆ 150 ಕುಟುಂಬಗಳಿರುವ ವೀರಾಪುರ ಗ್ರಾಮ. ಅರ್ಕಾವತಿ ನದಿ ಪಾತ್ರದ ಪ್ರಮುಖ ಹಳ್ಳಿಗಳಲ್ಲಿ ಇದೂ ಕೂಡ ಒಂದು. ಇದು ಮಜರೆ ಹೊಸಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರುತ್ತದೆ. ಪಂಚಾಯ್ತಿ ವ್ಯಾಪ್ತಿಯ ನೂರಾರು ಎಕರೆ ಕೃಷಿ ಭೂಮಿಗೆ ಅರೇಹಳ್ಳಿ ಕೆರೆಯೇ ಜೀವಾಳ.

ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸುಮಾರು 200 ಕಾರ್ಖಾನೆಗಳಿವೆ. ಸೂಜಿ, ನಟ್ಟು, ಬೋಲ್ಟ್ನಿಂದ ಹಿಡಿದು, ಬಟ್ಟೆಗೆ ಬಣ್ಣ ಹಾಕುವ ಗಾರ್ಮೆಂಟ್ಗಳೂ ಇವೆ. ಇವುಗಳಲ್ಲಿ ಕೆಲ ಕಾರ್ಖಾನೆಗಳು ಹೊರ ಬಿಡುವ ರಾಸಾಯನಿಕಯುಕ್ತ ತ್ಯಾಜ್ಯ ನೀರು ಅರ್ಕಾವತಿ ನದಿಯ ಕಾಲುವೆ ಮೂಲಕ ಅರೇಹಳ್ಳಿ ಕೆರೆ ಸೇರುತ್ತದೆ.

ಆ ಕೆರೆಯನ್ನು ಕಲುಷಿತಗೊಳಿಸಿ, ಕೋಡಿ ಹರಿಸಿ ವೀರಾಪುರದ ಜಮೀನುಗಳನ್ನೆಲ್ಲಾ ಮಲಿನ ಮಾಡಿ, ಮುಂದೆ ಚಿಕ್ಕತುಮಕೂರು, ದೊಡ್ಡತುಮಕೂರು ಮೂಲಕ ಹೆಸರುಘಟ್ಟ ಕೆರೆ ಸೇರುತ್ತದೆ.

ಕಾರ್ಖಾನೆ ತ್ಯಾಜ್ಯ ನೀರಿನಿಂದಾಗಿ ವೀರಾಪುರದ ಸುತ್ತಲಿನ ತೆರೆದ ಬಾವಿ, ಕೊಳವೆ ಬಾವಿಗಳಲ್ಲಿ ಕೊಳಕು ನೀರು ಉಕ್ಕುತ್ತಿದೆ. ಕೈಗೆಟುಕುವ ನೀರಿದ್ದರೂ ಕುಡಿಯಲು ಯೋಗ್ಯವಿಲ್ಲ. ಬಳಸುವುದು ಅಸಾಧ್ಯ.

ಈ ಪ್ರದೇಶದ ಕೊಳವೆ ಬಾವಿ ಹಾಗೂ ತೆರೆದ ಬಾವಿ ನೀರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಅದರ ಫಲಿತಾಂಶಗಳು ಭಾರತ ಮಾನಕ ಸಂಸ್ಥೆಯ ಮಾನದಂಡಗಳ (ಬಿಐಎಸ್) ಎಲ್ಲಾ ಪರಿಮಾಣಗಳನ್ನು (ಪ್ಯಾರಾಮೀಟರ್) ಮೀರಿವೆ. 2005ರಲ್ಲಿ ಈ ಭಾಗದಲ್ಲಿದ್ದ ಕೃಷಿ ಅಧಿಕಾರಿಯೊಬ್ಬರ ಪ್ರಕಾರ ವೀರಾಪುರದ ನೀರು. ಮಣ್ಣು, ಕೃಷಿ ಚಟುವಟಿಕೆಗೆ ಯೋಗ್ಯವಾಗಿಲ್ಲ.

ಗ್ರಾಮದ ಮೇಲ್ಭಾಗದಲ್ಲಿ ಕೈಗಾರಿಕಾ ಪ್ರದೇಶಗಳ `ಶಕೆ~ ಆರಂಭವಾದ ಮೇಲೆ ಸುತ್ತಮುತ್ತಲಿನ ಅಂತರ್ಜಲ ಕಲುಷಿತಗೊಳ್ಳಲಾರಂಭಿಸಿತು. ಗ್ರಾಮದ ರೈತರು ಹಂತ ಹಂತವಾಗಿ ಕೃಷಿ ಚಟುವಟಿಕೆಗಳನ್ನು ನಿಲ್ಲಿಸುತ್ತಾ ಬಂದರು. ರಾಗಿ, ಜೋಳ, ಅಕ್ಕಡಿ ಬೆಳೆ ಬೆಳೆಯುತ್ತಿದ್ದ ರೈತರ ಸಂಖ್ಯೆಯೂ ಕ್ಷೀಣಿಸಿತು. ಆದರೆ ಈಗಲೂ ಬೇರೆ ದಾರಿಯಿಲ್ಲದೇ ಕೆಲವರು ಅದೇ ತ್ಯಾಜ್ಯ ನೀರಿನಲ್ಲೇ ಬೆಳೆಯುತ್ತಿದ್ದಾರೆ.

`ಮಣ್ಣು, ನೀರಿನಲ್ಲಿ ವಿಷಕಾರಕ ಅಂಶಗಳು ಬೆರೆಯುತ್ತಿರುವುದರಿಂದ ರಾಗಿ, ಜೋಳದಂತಹ ಧಾನ್ಯಗಳು ಕಾಳು ಕಟ್ಟುವ ಹಂತದಲ್ಲಿ ರೋಗ ಬಾಧೆಗೆ ತುತ್ತಾಗುತ್ತವೆ. ಬೆಳೆ ಇಳುವರಿ ಕಡಿಮೆಯಾಗುತ್ತದೆ~ ಎನ್ನುತ್ತಾರೆ ಗ್ರಾಮಸ್ಥರು.

ಹೀಗೆ ಒಂದೆಡೆ ಕೊಳಚೆ ನೀರಿನಿಂದ ಬೇಸಾಯದ ಬದುಕನ್ನೇ ಕಳೆದುಕೊಂಡಿರುವ ಗ್ರಾಮಸ್ಥರು, ಇನ್ನೊಂದೆಡೆ ವಿವಿಧ ರೋಗಗಳಿಂದ ಬಳಲುತ್ತಿದ್ದಾರೆ. ದೊಡ್ಡಬಳ್ಳಾಪುರ ತಾಲ್ಲೂಕು ಪಂಚಾಯ್ತಿ ಸದಸ್ಯ ಹಾಗೂ ವೈದ್ಯ ಡಾ.ವಿಜಯಕುಮಾರ್ ವೀರಾಪುರ ಸುತ್ತಲಿನ ವಾತಾವರಣದಿಂದ ಉಲ್ಬಣವಾಗುವ ರೋಗಗಳನ್ನು ಗುರುತಿಸಿದ್ದಾರೆ.

ಅವರ ಪ್ರಕಾರ ಈ ಗ್ರಾಮಗಳಲ್ಲಿ ಆಸ್ತಮ ವ್ಯಾಪಕವಾಗಿದೆ. ಮಕ್ಕಳಲ್ಲಿ ಶ್ವಾಸಕೋಶ ಸೋಂಕು ಹೆಚ್ಚಾಗಿದೆ. ತುರಿಕೆ, ಕಜ್ಜಿಯಂತಹ ಚರ್ಮ ರೋಗ ಪ್ರಕರಣಗಳಿವೆ. ಗಡಸು ನೀರಿನಿಂದಾಗಿ ಕಿಡ್ನಿ ಸ್ಟೋನ್ ಪ್ರಕರಣಗಳು ಹೆಚ್ಚಾಗಿವೆ.

ಕೊಳಚೆ ಹಿಂದೆ `ನೀರಿನ ಲಾಬಿ~!
`ಕಾಲುವೆ, ಕೆರೆಗಳಿಗೆ ಕಾರ್ಖಾನೆ ತ್ಯಾಜ್ಯ ನೀರು ಹರಿಸುವ ಹಿಂದೆ ಒಂದು ದೊಡ್ಡ ಲಾಬಿ ಇದೆ. ಈ ಲಾಬಿಯ ಹಿಂದೆ ಸುತ್ತಮುತ್ತಲಿನ ಗ್ರಾಮಸ್ಥರ ಪಾಲೂ ಇದೆ~ ಎನ್ನುತ್ತಾರೆ ಗ್ರಾಮ ಹಿತರಕ್ಷಣಾ ಸಮಿತಿಯ ಸದಸ್ಯರು. ಆ ಕಥೆ ಹೀಗಿದೆ;

ದೊಡ್ಡಬಳ್ಳಾಪುರ ಸುತ್ತಮುತ್ತ ಅಂತರ್ಜಲ ಕೊರತೆ. ಹಾಗಾಗಿ ಬಾಶೆಟ್ಟಿಹಳ್ಳಿ ಕಾರ್ಖಾನೆಗಳವರು ಅಕ್ಕಪಕ್ಕದ ಗ್ರಾಮಸ್ಥರಿಗೆ ಹಣ ನೀಡಿ ನೀರು ಖರೀದಿಸುತ್ತಾರೆ. ವೀರಾಪುರದಿಂದಲೂ ಕಾರ್ಖಾನೆಗಳಿಗೆ ನೀರು ಕೊಡುವ `ಗಿರಾಕಿ~ಗಳಿದ್ದಾರೆ. ಹಾಗೆಯೇ `ತ್ಯಾಜ್ಯ ನೀರನ್ನು~ ಖರೀದಿಸುವವರೂ ಇದ್ದಾರೆ.

ತೋಟದಿಂದ ಕಾರ್ಖಾನೆವರೆಗೆ ಭೂಗತವಾಗಿ ಪೈಪ್ಗಳನ್ನು ಜೋಡಿಸಿ ನೀರು ಪೂರೈಸುತ್ತಾರೆ. ಕೈಗಾರಿಕೆಗಾಗಿ ಪ್ರತಿ ನಿತ್ಯ ಭೂಮಿಯಿಂದ ಲಾರಿಗಟ್ಟಲೇ ನೀರು ಬಸಿಯುತ್ತಾರೆ. ಇದಕ್ಕೆ `ಪ್ರತಿಫಲವಾಗಿ~ ಕಾರ್ಖಾನೆಯ ತ್ಯಾಜ್ಯ ನೀರನ್ನು ಭೂಗತ ಪೈಪುಗಳ ಮೂಲಕವೇ ತಮ್ಮ ಜಮೀನಿನ ಮೂಲಕ ಹರಿಸಲು ಅನುಮತಿ ನೀಡುತ್ತಾರೆ.

ಶುದ್ಧ ನೀರು ಹರಿಸಲು ದೊಡ್ಡ ಪೈಪು, ತ್ಯಾಜ್ಯ ನೀರು ಹೊರ ಹಾಕಲು `ನರಗಳ~ ಗಾತ್ರದ ಸಣ್ಣ ಪೈಪು. ಎರಡೂ ಭೂಗರ್ಭದೊಳಗೆ ಹುದುಗಿರುತ್ತದೆ. ತೋಟದಲ್ಲಿ ತ್ಯಾಜ್ಯ ನೀರು ಹರವಿಕೊಳ್ಳುವುದಷ್ಟೇ ಕಾಣುತ್ತದೆ ಹೊರತು, ಅದರ ಮೂಲ ಮಾತ್ರ ಗೊತ್ತೇ ಆಗುವುದಿಲ್ಲ~ ಎನ್ನುತ್ತಾರೆ ವೀರಾಪುರ ಗ್ರಾಮ ಹಿತರಕ್ಷಣಾ ಸಮಿತಿಯ ಸದಸ್ಯರಾದ ಶಿವಕುಮಾರ್.

ಜಮೀನುಗಳ ಮೂಲಕ ತ್ಯಾಜ್ಯ ನೀರು ಹರಿಸುವುದನ್ನು ಮರೆ ಮಾಚಲು ಜಮೀನುಗಳಲ್ಲಿ ನೀಲಗಿರಿ ಗಿಡಗಳನ್ನು ಬೆಳೆಸಿದ್ದಾರೆ. ಅವುಗಳಿಗೆ ಹನಿ ನೀರಾವರಿ ಮೂಲಕ ನೀರುಣಿಸುತ್ತಾರೆ. ಪರಿವೀಕ್ಷಣೆಗಾಗಿ ಬರುವ `ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ, ಮಾಧ್ಯಮದವರಿಗೆ ದಾರಿ ತಪ್ಪಿಸಲು ಈ ಟೆಕ್ನಾಲಜಿ ಬಳಸಿದ್ದಾರೆ.

ಜಗತ್ತಿನಲ್ಲಿ ಎಲ್ಲಾದರೂ ನೀರೆರೆದು ನೀಲಿಗಿರಿ ಬೆಳೆಸಿದ್ದನ್ನು ನೋಡಿದ್ದೀರಾ~ ಎಂದು ಪ್ರಶ್ನಿಸುತ್ತಾರೆ ಹಿತರಕ್ಷಣಾ ಸಮಿತಿ ಸದಸ್ಯ ಪ್ರಕಾಶ್.

ಈ ಎಲ್ಲ ವಿದ್ಯಮಾನಗಳಿಂದ ಬೇಸತ್ತ ಗ್ರಾಮಸ್ಥರು ಗ್ರಾಮ ಹಿತರಕ್ಷಣಾ ಸಮಿತಿಯಿಂದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸಾಕಷ್ಟು ಪತ್ರ ಬರೆದಿದ್ದಾರೆ. `ಪತ್ರ ಬರೆದಾಗಲೆಲ್ಲಾ, ಕಾರ್ಖಾನೆಗಳಿಗೆ, ಗ್ರಾಮಕ್ಕೆ ಭೇಟಿ ನೀಡುವ ಅಧಿಕಾರಿಗಳು, ಕಚೇರಿ ತಲುಪಿದ ನಂತರ ಮೌನವಾಗುತ್ತಾರೆ~ ಎಂದು ಗ್ರಾಮಸ್ಥರು ಮಂಡಳಿಯೊಂದಿಗಿನ ಪತ್ರ ವ್ಯವಹಾರಗಳನ್ನು ಬಿಚ್ಚಿಡುತ್ತಾರೆ.

ಮಂಡಳಿಯ `ವರ್ತನೆಯಿಂದ~ ಬೇಸತ್ತ ಸದಸ್ಯರು, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮೊರೆ ಹೋಗಿದ್ದಾರೆ. ಮನವಿಗೆ ಸ್ಪಂದಿಸಿದ ಕೇಂದ್ರ ತಂಡ ಇತ್ತೀಚೆಗೆ ಬಾಶೆಟ್ಟಿಹಳ್ಳಿ ಕಾರ್ಖಾನೆಗಳಿಗೆ, ಸುತ್ತಲಿನ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದೆ.

ಕೆಲವು ಕಾರ್ಖಾನೆಗಳಲ್ಲಿ ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳು (ಎಸ್ಟಿಪಿ) ಕೊರತೆ, ಇರುವು ಘಟಕಗಳಲ್ಲಿ ಸಾಮರ್ಥ್ಯದ ಕೊರತೆ, ಮಾಲಿನ್ಯ ನಿಯಂತ್ರಣ ಮಂಡಳಿಯ ಪರವಾನಗಿ (ನವೀಕೃತ) ಪತ್ರಗಳಿಲ್ಲದಿರುವುದು ಬೆಳಕಿಗೆ ಬಂದಿದೆ.

ಮಾತ್ರವಲ್ಲ, ತ್ಯಾಜ್ಯ ನೀರನ್ನು ನೇರವಾಗಿ ಅರ್ಕಾವತಿ ನದಿಯ ಕಾಲುವೆ ಮೂಲಕ ಕೆರೆಗಳಿಗೆ ಹರಿಸುತ್ತಿರುವ ಸತ್ಯವೂ ಬಯಲಾಗಿದೆ !

ಈ ಕೈಗಾರಿಕಾ ತ್ಯಾಜ್ಯದ ನೀರಿನ ಸಮಸ್ಯೆ ಕೇವಲ ವೀರಾಪುರದಲ್ಲಷ್ಟೇ ಅಲ್ಲ, ಪಕ್ಕದ ಬಾಶೆಟ್ಟಿಹಳ್ಳಿ ಪಂಚಾಯಿತಿ ವ್ಯಾಪ್ತಿಯ ಕಸುವನಹಳ್ಳಿ, ಬಿಸುವನಹಳ್ಳಿ, ಮಜರೆ ಹೊಸಳ್ಳಿ ಗ್ರಾಮ ಪಂಚಾಯ್ತಿಯ ಏಳೆಂಟು ಹಳ್ಳಿಗಳ ಗ್ರಾಮಸ್ಥರನ್ನು ಕಾಡುತ್ತಿದೆ. ಅಲ್ಲಿ ಕುಡಿಯುವ ನೀರಿಗೆ ಜನ ಪರದಾಡುತ್ತಿದ್ದಾರೆ. ಕೆರೆ, ಬಾವಿಗಳಲ್ಲಿ ನೀರಿದ್ದರೂ ಹಣ ಕೊಟ್ಟು ಖರೀದಿಸುವ ಪರಿಸ್ಥಿತಿ ಎದುರಾಗಿದೆ.

ಈ ನಡುವೆ `ರೋಗ ರುಜಿನಗಳು ವ್ಯಾಪಕವಾಗುತ್ತವೆ~ ಎಂಬ ಭಯ ಅವರನ್ನು ಕಾಡುತ್ತಿದೆ. ಈ ಕೊಳಚೆ ನೀರಿನ ವಿರುದ್ಧ ಗ್ರಾಮ ಹಿತರಕ್ಷಣಾ ಸಮಿತಿ ತಮ್ಮದೇ ಆದ ರೀತಿಯಲ್ಲಿ ಹೋರಾಡುತ್ತಿದ್ದಾರೆ. ಈ ಹೋರಾಟದಲ್ಲಿ ಒಮ್ಮಮ್ಮೆ ಕಾರ್ಖಾನೆಯವರಿಂದ ಹಲ್ಲೆಗೊಳಗಾಗಿದ್ದಾರೆ. `ಗುರಿ ಮುಟ್ಟುವವರೆಗೂ ಹೋರಾಟ ನಿಲ್ಲಿಸುವುದಿಲ್ಲ~ ಎನ್ನುತ್ತಾರೆ ಹಿತರಕ್ಷಣಾ ಸಮಿತಿ ಸದಸ್ಯರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.