ಗುರುವಾರ , ಜೂನ್ 24, 2021
23 °C

ವೃತ್ತಿ ಜಂಜಡದಲ್ಲಿ ಖಾಸಗಿ ಬದುಕು ಕಳೆದುಕೊಳ್ಳದಿರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:`ವೃತ್ತಿ ಬದುಕು ಮತ್ತು ಖಾಸಗಿ ಬದುಕು ಎರಡು ಬೇರೆ ಬೇರೆಯಾಗಿವೆ.  ಮಹಿಳೆಯು ವೃತ್ತಿ ಬದುಕಿನಲ್ಲಿ ತನ್ನ ಖಾಸಗಿ ಬದುಕನ್ನು ಹಾಳು ಮಾಡಿಕೊಳ್ಳಬಾರದು~ ಎಂದು ಡಾಟಿ ಸದಾನಂದಗೌಡ ಹೇಳಿದರು.ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ನಗರದ ಬೆಂಗಳೂರು ಜಲಮಂಡಳಿ ರಜತ ಭವನದಲ್ಲಿ ಗುರುವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.`ಮಹಿಳೆಗೆ ಪ್ರಮುಖವಾದುದು ತಾಯ್ತನ. ಅದನ್ನು ತನ್ನ ವೃತ್ತಿ ಬದುಕಿನಲ್ಲೂ ಮರೆಯಬಾರದು. ಅದನ್ನು ಸಮರ್ಥವಾಗಿ ನಿಭಾಯಿಸಿದಾಗಲೇ ಅವಳು ಒಬ್ಬ ಪರಿಪೂರ್ಣ ಮಹಿಳೆಯಾಗಲು ಸಾಧ್ಯ~ ಎಂದರು.

`ಪಾಶ್ಚಾತ್ಯ ಸಂಸ್ಕೃತಿಯ ಪರಿಣಾಮದಿಂದ ಮಕ್ಕಳು ತಪ್ಪು ದಾರಿ ತುಳಿಯುತ್ತಿದ್ದಾರೆ. ಅವರನ್ನು ಸರಿದಾರಿಗೆ ತಂದು, ಅವರ ಭವಿಷ್ಯ ರೂಪಿಸುವಲ್ಲಿ ಮಹಿಳೆ ಅದರಲ್ಲೂ ಮುಖ್ಯವಾಗಿ ತಾಯಿಯ ಪಾತ್ರ ಬಲು ದೊಡ್ಡದು~ ಎಂದು ಹೇಳಿದರು.`ಎಲ್ಲವುಗಳಿಗೂ ಒಂದೊಂದು ದಿನಾಚರಣೆಗಳಿವೆ. ಅಪ್ಪಂದಿರ ದಿನ, ಪ್ರೇಮಿಗಳ ದಿನ, ಮಕ್ಕಳ ದಿನ. ಅದರಂತೆ ಮಹಿಳೆಯರಿಗೂ ಒಂದು ದಿನವೆಂದು ಘೋಷಿಸಿ, ಅದನ್ನು ಆಚರಣೆ ಮಾಡುತ್ತಿರುವುದು ಸ್ವಾಗತಾರ್ಹ. ಮಹಿಳೆಯರಿಗೆ ಇದು ಸಂಸ್ಮರಣೀಯ ದಿನವೂ ಆಗಿದೆ~ ಎಂದರು.`ಈ ದಿನ ಜಗತ್ತಿನೆಲ್ಲೆಡೆ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಇದಕ್ಕೆ ಮಹಿಳೆಯರ ಹೋರಾಟ, ಅವರ ದಿನನಿತ್ಯದ ಬದುಕಿಗೆ ಸಲ್ಲುವ ಗೌರವವಾಗಿದೆ~ ಎಂದು ಹೇಳಿದರು.ಆಕಾಶವಾಣಿ ಕೇಂದ್ರದ ಕಾರ್ಯನಿರ್ವಾಹಕ ಅಧಿಕಾರಿ ಸುಮಂಗಳ ಮುಮ್ಮಿಗಟ್ಟಿ ಮಾತನಾಡಿ, `ಈ ವರ್ಷದ ಮಹಿಳಾ ದಿನಾಚರಣೆಯ ಘೋಷವಾಕ್ಯವೆಂದರೆ, ಗ್ರಾಮೀಣ ಮಹಿಳೆಯನ್ನು ಸಶಕ್ತಗೊಳಿಸಿ: ಹಸಿವು ಬಡತನ ದೂರ ಮಾಡಿ ಎಂಬುದಾಗಿದೆ. ಇದು ಪೂರ್ಣತರವಾಗಿ ಜಾರಿಗೆ ಬರಬೇಕು~ ಎಂದರು.`ಅದ್ದೂರಿ ಜೀವನ, ಮೊಬೈಲಿನಲ್ಲಿ ಮಾತನಾಡುವುದು ನಿಜವಾಗಲೂ ಸಶಕ್ತಿಕರಣವಲ್ಲ. ಯಾವ ಮಹಿಳೆಗೆ ಅಭಿವ್ಯಕ್ತಿ ಸ್ವಾತಂತ್ರ್ಯವಿದೆಯೋ ಅವಳು ಸಶಕ್ತ ಮಹಿಳೆಯಾಗಿದ್ದಾಳೆ~ ಎಂದು ಹೇಳಿದರು. `ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸ್ವೇಚ್ಛಾಚಾರಕ್ಕೆ ತುಂಬಾ ವ್ಯತ್ಯಾಸವಿದೆ. ಸ್ವಾತಂತ್ರ್ಯ ಯಾವತ್ತೂ ಅತಿಯಾಗಿ ಅದು ಸ್ವೇಚ್ಛಾಚಾರವಾಗಬಾರದು~ ಎಂದು ಹೇಳಿದರು.`ಆರ್ಥಿಕ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ತುಂಬ ಮುಖ್ಯವಾಗಿದೆ. ಔದ್ಯೋಗಿಕ ರಂಗದಲ್ಲೂ ಮಹಿಳೆ ಹಿಂದೆ ಬಿದ್ದಿಲ್ಲ. ಎಲ್ಲ ರಂಗದಲ್ಲೂ ಮುಂದುವರಿದಿರುವ ಮಹಿಳೆ ನಿಜಕ್ಕೂ ಸಶಕ್ತಳು~ ಎಂದರು. ಕಾರ್ಯಕ್ರಮದಲ್ಲಿ ಬೆಂಗಳೂರು ಜಲಮಂಡಳಿ ಅಧ್ಯಕ್ಷ ಗೌರವ ಗುಪ್ತ, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷೆ ಮಾಲತಿ ಸುಧೀರ್, ಜಲಮಂಡಳಿಯ ಪ್ರಧಾನ ಎಂಜಿನಿಯರ್ ಟಿ.ವೆಂಕಟರಾಜು, ನಟಿ ನಯನ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.