ಶನಿವಾರ, ಮೇ 15, 2021
24 °C

ವೃತ್ತಿ ರಂಗಭೂಮಿ ಉಳಿಸಿ, ಬೆಳೆಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಗಿರಿ: ದೃಶ್ಯ ಮಾಧ್ಯಮಗಳ ಹಾವಳಿಯಿಂದಾಗಿ ವೃತ್ತಿ ರಂಗಭೂಮಿಗೆ ದೊಡ್ಡ ಹೊಡೆತ ಬಿದ್ದಿದೆ. ಹಲವಾರು ನಾಟಕ ಕಂಪೆನಿಗಳ ಕಲಾವಿದರು ತುತ್ತು ಅನ್ನಕ್ಕಾಗಿ ಪರದಾಡುವಂತಾಗಿದೆ. ಆದ್ದರಿಂದ ವೃತ್ತಿ ರಂಗಭೂಮಿಗೆ ಪ್ರೋತ್ರಾಹ ನೀಡಿದರೆ ಮಾತ್ರ, ಉಳಿಸಿ, ಬೆಳೆಸಬಹುದು ಎಂದು ರಾಜ್ಯ ನಾಟಕ  ಅಕಾಡೆಮಿ ಮಾಜಿ  ಸದಸ್ಯ ಮಲ್ಲಿಕಾರ್ಜುನ ಕಡಕೋಳ ಹೇಳಿದರು.ಪಟ್ಟಣದ ವಡ್ನಾಳ್ ರಾಜಣ್ಣ ಸಮುದಾಯ ಭವನದಲ್ಲಿ ಕಲಾವಿಕಾಸ ನಾಟಕ ಸಂಘ ದಾವಣಗೆರೆ ವತಿಯಿಂದ ರಂಗಭೂಮಿ ಕಲಾವಿದೆಯರ ಸಹಾಯಾರ್ಥ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಅಸ್ವಿತ್ವದಲ್ಲಿರುವ ನಾಟಕ ಕಂಪೆನಿಗಳಿಗೆ ತಿಂಗಳಿಗೆ ್ಙ 1 ಲಕ್ಷ ಅನುದಾನ ನೀಡಲಾಗುವುದು ಎಂದು ಇಲಾಖೆಯ ಸಚಿವರು ಹೇಳಿದ್ದಾರೆ. ಈ ನಿಟ್ಟಿನಲ್ಲಿ ವೃತ್ತಿ ರಂಗಭೂಮಿಯನ್ನು ಉಳಿಸಿ, ಬೆಳೆಸುವ ಸಲುವಾಗಿ ಶೀಘ್ರದಲ್ಲಿ ಅನುದಾನ ಬಿಡುಗಡೆ ಮಾಡಬೇಕು ಎಂದು  ಅವರು ಒತ್ತಾಯಿಸಿದರು.ಪ.ಪಂ. ಅಧ್ಯಕ್ಷೆ ಪುಷ್ಪಲತಾ, ಕಾಂಗ್ರೆಸ್ ಯುವ ಮುಖಂಡ ವಡ್ನಾಳ್ ಜಗದೀಶ್, ಜಾನಪದ ಪರಿಷತ್ ಅಧ್ಯಕ್ಷ ಓ.ಎಸ್. ನಾಗರಾಜ್, ತಾ.ಪಂ. ಉಪಾಧ್ಯಕ್ಷ ಎನ್. ಗಣೇಶ್‌ನಾಯ್ಕ, ಬಿ. ಸಿದ್ದರಾಮಣ್ಣ, ತಿಪ್ಪೇಸ್ವಾಮಿ, ಟಿ. ಹಾಲಪ್ಪ, ಸಿದ್ದಪ್ಪ, ರಂಗಸೌರಭ ಅಧ್ಯಕ್ಷ ಅಣ್ಣೋಜಿರಾವ್  ಉಪಸ್ಥಿತರಿದ್ದರು. ಕಲಾವಿದೆಯರಾದ ಕೆ. ಸರೋಜಮ್ಮ, ವಿಜಯಲಕ್ಷ್ಮೀ, ಗೀತಾ, ಪ್ರೇಮಾ, ಮಂಜಮ್ಮ, ನಾಗವೇಣಿ, ಲತಾಶ್ರೀ, ವಿಜಯಶ್ರೀ ಇವರ ತಂಡ `ಮುದುಕನ ಮದುವೆ~ ನಾಟಕವನ್ನು ಪ್ರದರ್ಶಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.