ಗುರುವಾರ , ಜೂನ್ 24, 2021
24 °C

ವೇಟ್‌ಲಿಫ್ಟಿಂಗ್‌: ರಾಹುಲ್‌ಗೆ ಚಿನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ರಗಳ ವೆಂಕಟ್‌ ರಾಹುಲ್‌  ಥಾಯ್ಲೆಂಡ್‌ನ ಬಾಂಗ್‌ ಸಾಯೆನ್‌ನಲ್ಲಿ ನಡೆಯುತ್ತಿರುವ 16ನೇ ಏಷ್ಯನ್‌ ಯೂತ್‌ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನ ಬಾಲಕರ ವಿಭಾಗದಲ್ಲಿ  ಎರಡು ಚಿನ್ನ ಹಾಗೂ ಒಂದು ಬೆಳ್ಳಿ ಸೇರಿದಂತೆ ಒಟ್ಟು ಮೂರು ಪದಕ ಪಡೆದುಕೊಂಡಿದ್ದಾರೆ.ಗುರುವಾರ ನಡೆದ ಬಾಲಕರ 77 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಅವರು 133 ಕೆಜಿ ಸ್ಪರ್ಧೆಯಲ್ಲಿ ಬೆಳ್ಳಿ ಹಾಗೂ  163 ಮತ್ತು 296 ಕೆಜಿ ವಿಭಾಗಗಳಲ್ಲಿ ಬಂಗಾರ ತಮ್ಮದಾಗಿಸಿಕೊಂಡರು.ಚಾಂಪಿಯನ್‌ಷಿಪ್‌ನ ಮೊದಲ ದಿನವಾದ ಮಂಗಳವಾರ ಬಾಲಕಿಯರ ವಿಭಾಗದ 44ಕೆಜಿ  ಸ್ಪರ್ಧೆಯಲ್ಲಿ ಮೋಹಿನ್‌ ಚವ್ಹಾಣ್‌,  ಬಾಲಕರ ವಿಭಾಗದ 56 ಕೆಜಿ ಸ್ಪರ್ಧೆಯಲ್ಲಿ ಲಾಲ್‌ಚನ್ಹಿಮಾ ಹಾಗೂ ಬುಧವಾರ ನಡೆದ ಬಾಲಕರ ವಿಭಾಗದ 62 ಕೆಜಿ ವಿಭಾಗದಲ್ಲಿ ಲಾಲು ಠಾಕು 4ನೇ ಸ್ಥಾನ ಪಡೆದುಕೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.