ಭಾನುವಾರ, ಜೂನ್ 13, 2021
21 °C

ವೇತನ ತಾರತಮ್ಯ ನಿವಾರಿಸಲು ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಮಖಂಡಿ: 5ನೇ ವೇತನ ಆಯೋಗ ಹಾಗೂ ಅದಕ್ಕೂ ಹಿಂದಿನ ವೇತನ ಆಯೋಗಗಳಲ್ಲಿ ಮಾಧ್ಯಮಿಕ ಶಾಲಾ ಸಹಶಿಕ್ಷಕರ ವೇತನದಲ್ಲಿ ಮಾಡಲಾದ ತಾರತಮ್ಯವನ್ನು 6ನೇ ವೇತನದಲ್ಲಾದರೂ ಸರಿಪಡಿಸುವಂತೆ ಒತ್ತಾಯಿಸಿ ತಾಲ್ಲೂಕು ಮಾಧ್ಯಮಿಕ ಶಾಲಾ ನೌಕರರ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ನೀತಿ ನೆರೆ ರಾಜ್ಯಗಳಾದ ತಮಿಳುನಾಡು, ಮಹಾರಾಷ್ಟ್ರ, ಕೇರಳ, ಆಂಧ್ರ ಪ್ರದೇಶ ರಾಜ್ಯಗಳಲ್ಲಿ ಜಾರಿಯಾಗಿದೆ. ರಾಜ್ಯದ ಮಾಧ್ಯಮಿಕ ಶಾಲಾ ಸಹಶಿಕ್ಷಕರಿಗೆ 5ನೇ ವೇತನ ಆಯೋಗ ತಾರತಮ್ಯ ಮಾಡಿದೆ.

 

ಇದೇ ರೀತಿಯ ತಾರತಮ್ಯ ಅದಕ್ಕೂ ಹಿಂದಿನ ವೇತನ ಆಯೋಗಗಳಿಂದಲೂ ನಡೆದಿವೆ. ಕಾರಣ ಸಹಶಿಕ್ಷಕರಿಗೆ ಆದ ವೇತನ ತಾರತಮ್ಯವನ್ನು 6ನೇ ವೇತನ ಆಯೋಗದಲ್ಲಾದರೂ ಸರಿಪಡಿಸಿ ಶೀಘ್ರ ಜಾರಿ ಮಾಡಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ವೇತನ ತಾರತಮ್ಯ ಸರಿಡಿಸಲು ಒತ್ತಾಯಿಸಿ ಹೋರಾಟ ರೂಪಿಸುವುದು ಅನಿವಾರ್ಯ ಆಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.ತಹಶೀಲ್ದಾರ ಡಾ.ಸಿದ್ದು ಹುಲ್ಲೋಳಿ ಅವರ ಮುಖಾಂತರ ಮುಖ್ಯ ಮಂತ್ರಿಗಳಿಗೆ ಸಲ್ಲಿಸಲಾದ ಮನವಿಯಲ್ಲಿ ಈ ಒತ್ತಾಯ ಮಾಡಿ ಹೋರಾಟದ ಎಚ್ಚರಿಕೆ ನೀಡಲಾಗಿದೆ.ಸಂಘದ ಅಧ್ಯಕ್ಷ ಎನ್.ಬಿ. ಬಿರಾದಾರ, ಪ್ರಧಾನ ಕಾರ್ಯದರ್ಶಿ ಎ.ಕೆ. ಮಾಗಿ, ಕಾರ್ಯಾಧ್ಯಕ್ಷ ಎಸ್.ಕೆ. ಕರಡಿ, ಉಪಾಧ್ಯಕ್ಷೆ ಎಸ್.ಕೆ. ಆಳಗೊಂಡ, ಎಸ್.ಜಿ.ಕೊಕ್ಕನವರ, ಎಸ್.ಎಂ. ಸೊನ್ನದ, ಕಡಕೋಳ ಮತ್ತಿತರರು ಮನವಿ ಸಲ್ಲಿಸಿದ ನಿಯೋಗದಲ್ಲಿ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.