ಬೆಂಗಳೂರು: ಸಿಮೆಂಟ್ ಮೂಟೆಗಳು ತುಂಬಿದ್ದ ಗೂಡ್ಸ್ ರೈಲಿಗೆ ಇನ್ನೊಂದು ರೈಲಿನ ಎಂಜಿನ್ ಡಿಕ್ಕಿ ಹೊಡೆದ ಪರಿಣಾಮ ಮೂರು ಬೋಗಿಗಳು ಜಖಂಗೊಂಡಿರುವ ಘಟನೆ ವೈಟ್ಫೀಲ್ಡ್ ಗೂಡ್ಸ್ ಯಾರ್ಡ್ನಲ್ಲಿ ಶುಕ್ರವಾರ ನಸುಕಿನಲ್ಲಿ ನಡೆದಿದೆ.

ಆಂಧ್ರಪ್ರದೇಶದ ಎರಗುಂಟ್ಲದಿಂದ ಸಿಮೆಂಟ್ ಮೂಟೆಗಳನ್ನು ತುಂಬಿಕೊಂಡು ಬಂದಿದ್ದ ರೈಲು ವೈಟ್ಫೀಲ್ಡ್ನ ಯಾರ್ಡ್ನಲ್ಲಿ ನಿಂತಿತ್ತು. ಸರಕನ್ನು ಇಳಿಸುವ ಸಲುವಾಗಿ ರೈಲನ್ನು ಒಂದು ಟ್ರಾಕ್ನಿಂದ ಇನ್ನೊಂದು ಟ್ರಾಕ್ಗೆ ತರಬೇಕಾಗಿತ್ತು. ಆದರೆ ರೈಲು ಟ್ರಾಕ್ ಬದಲಾವಣೆಯನ್ನು ಸಂಪೂರ್ಣ ಮಾಡಿರಲಿಲ್ಲ. ಆದ್ದರಿಂದ ಎರಡೂ ಟ್ರಾಕ್ಗಳಲ್ಲಿ ರೈಲು ನಿಂತಿತ್ತು (ಒಂದು ಟ್ರಾಕ್ನಿಂದ ಇನ್ನೊಂದು ಟ್ರಾಕ್ಗೆ ರೈಲು ಚಲಿಸಲು ಸ್ಥಳ). ಅದೇ ಟ್ರಾಕ್ನಲ್ಲಿ ಬಂದ ರೈಲಿನ ಎಂಜಿನ್ ಟ್ರಾಕ್ ಮಧ್ಯೆ ನಿಂತಿದ್ದ ರೈಲಿಗೆ ಡಿಕ್ಕಿ ಹೊಡೆಯಿತು.

ಡಿಕ್ಕಿಹೊಡೆದ ರಭಸಕ್ಕೆ ರೈಲಿನ ಎರಡು ಬೋಗಿಗಳು ನಜ್ಜುಗುಜ್ಜಾಗಿದ್ದು ಸಿಮೆಂಟ್ ಮೂಟೆಗಳು ಚೆಲ್ಲಾಪಿಲ್ಲಿಯಾಗಿತ್ತು. ಇನ್ನೊಂದು ಬೋಗಿ ಹಳಿ ತಪ್ಪಿತ್ತು. ರೈಲನ್ನು ಒಂದು ಟ್ರಾಕ್ನಿಂದ ಇನ್ನೊಂದು ಟ್ರಾಕ್ಗೆ ತರುವಾಗ ರೈಲ್ವೆ ಎಂಜಿನ್ ಬಂದಿದ್ದೇ ಈ ಅಪಘಾತಕ್ಕೆ ಕಾರಣವಾಗಿದೆ. ಅಧಿಕಾರಿಗಳು ನಿರ್ಲಕ್ಷ್ಯದಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಸ್ಥಳಕ್ಕೆ ಬಂದ ರೈಲ್ವೆ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಕ್ರೇನ್ಗಳ ಮೂಲಕ ಬೋಗಿಗಳನ್ನು ಪಕ್ಕಕ್ಕೆ ಸರಿಸಲಾಯಿತು. ಗೂಡ್ಸ್ ಯಾರ್ಡ್ ಆದ್ದರಿಂದ ಯಾವುದೇ ರೈಲಿನ ಓಡಾಟಕ್ಕೆ ತೊಂದರೆ ಆಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.