ಬುಧವಾರ, ಮೇ 18, 2022
23 °C

ವೈದ್ಯರ ವರ್ಗಾವಣೆ ವಿರೋಧಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೊರಬ: ವೈದ್ಯರ ವರ್ಗಾವಣೆ ವಿರೋಧಿಸಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಘಟನೆ ತಾಲ್ಲೂಕಿನ ಎಣ್ಣೆಕೊಪ್ಪ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಈ ಆಸ್ಪತ್ರೆಯಲ್ಲಿ ವೈದ್ಯ ಮಧುಕೇಶ್ವರ್ ಕಳೆದ 4 ವರ್ಷಗಳಿಂದ ಉತ್ತಮವಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಸರಕಾರದ ನಿಯಮಾವಳಿ ಅನುಸಾರ 3 ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸುತ್ತಿರುವ ವೈದ್ಯರನ್ನು ವರ್ಗಾವಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ವೈದ್ಯರನ್ನು ಕೂಡ ವರ್ಗಾಯಿಸಲಾಗಿದೆ.

ಆಸ್ಪತ್ರೆಗೆ ಇಬ್ಬರು ವೈದ್ಯರು ಸೇರಿ ಒಟ್ಟು 15 ಜನ ಸಿಬ್ಬಂದಿ ಹುದ್ದೆ ಮಂಜೂರಾಗಿದ್ದು, 10 ಜನರ ಕೊರತೆಯಿಂದಾಗಿ ಕೇವಲ 5 ಜನಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಇರುವ ವೈದ್ಯರು ಕೂಡ ವರ್ಗಾವಣೆಯಾದಲ್ಲಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಲು ಸಿಬ್ಬಂದಿಗಳೇ ಇಲ್ಲದಂತಾಗುತ್ತದೆ. ಆನವಟ್ಟಿ, ಭಾರಂಗಿ, ಮೂಡಿ ಮುಂತಾದ ಆಸ್ಪತ್ರೆಗಳಲ್ಲೂ ವೈದ್ಯರೇ ಇಲ್ಲದಂತಾಗಿದ್ದು, ಸ್ಥಳೀಯ ಆಸ್ಪತ್ರೆಯ ವೈದ್ಯರೇ ಆ ಆಸ್ಪತ್ರೆಗಳಲ್ಲಿ ಕೂಡ ಸೇವೆ ನೀಡುತ್ತಿದ್ದಾರೆ. ಸುತ್ತಮುತ್ತಲಿನ ಗ್ರಾಮಗಳಲ್ಲಿನ ಹೆರಿಗೆಗೆ ಎಂದು ಬಂದ ಮಹಿಳೆಯರು ವೈಧ್ಯರ ಸೇವೆ ಇಲ್ಲದ ಪರದಾಡುವಂತಾಗಿದೆ. ಆದ್ದರಿಂದ, ಇರುವ ವೈದ್ಯರನ್ನೇ ಮುಂದುವರಿಸಬೇಕು ಹಾಗೂ 24X7 ಮಟ್ಟಕ್ಕೆ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಬೇಕು ಇಲ್ಲದಿದ್ದಲ್ಲಿ 15 ದಿನಗಳ ಒಳಗಾಗಿ ಬೇಡಿಕೆ ಈಡೇರಿಸದಿದ್ದಲ್ಲಿ ರಸ್ತೆತಡೆ ಹಾಗೂ ತೀವ್ರ ಪ್ರತಿಭಟನೆ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಸ್ಪಷ್ಟನೆ: ದೂರವಾಣಿ ಮೂಲಕ ಪ್ರತಿಭಟನಾಕಾರರನ್ನು ಸಂಪರ್ಕಿಸಿದ ಶಾಸಕ ಎಚ್. ಹಾಲಪ್ಪ, ಡಿಎಚ್‌ಒ ಹಾಗೂ ಟಿಎಚ್‌ಒ ಅವರನ್ನು ಸಂಪರ್ಕಿಸಿ ತಾತ್ಕಾಲಿಕವಾಗಿ ಹಾಲಿ ವೈದ್ಯರನ್ನೇ ಮುಂದುವರಿಸಲು ಸೂಚಿಸಲಾಗಿದೆ. ಆದಷ್ಟು ಬೇಗ ವೈದ್ಯರನ್ನು ಮತ್ತು ಸಿಬ್ಬಂದಿಗಳನ್ನು ನೇಮಕ ಮಾಡುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು.

ಪ್ರತಿಕ್ರಿಯೆ: ವೈದ್ಯಾಧಿಕಾರಿ ಡಾ.ಮಧುಕೇಶ್ವರ್ ಮಾತನಾಡಿ, ಸೇವೆ ಸಲ್ಲಿಸಲೆಂದೇ ಬಂದವರು ನಾವು. ಯಾವುದೇ, ಗ್ರಾಮವಾದರೂ ಸೇವೆ ಸಲ್ಲಿಸಲು ನಾವು ಸಿದ್ಧ ಎಂದರು.

ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶಾಂತಮ್ಮ, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ಹೇಮಾವತಿ, ಗ್ರಾ.ಪಂ. ಉಪಾಧ್ಯಕ್ಷ ಸಂತೋಷ, ಸದಸ್ಯರಾದ ಮಂಜಪ್ಪ, ಸಬೀನಾ, ಸಕ್ರಿಬಾಯಿ, ಅಶೋಕ್, ರೇಣುಕಾಬಾಯಿ, ದುರುಗಪ್ಪ, ಶಿವಪ್ಪ, ಪಕ್ಕೀರಪ್ಪ, ಗಿರಿಜಮ್ಮ, ಭರಮಗೌಡ, ಶಿವಲಿಂಗಪ್ಪ, ಮಂಜಪ್ಪ ಉದ್ರೇರ್, ಕಷ್ಣಪ್ಪ, ಲಿಂಗಪ್ಪಗೌಡ, ರುದ್ರಪ್ಪ ಕಡ್ಲೇರ್, ಚೌಟಿ ಚಂದ್ರಣ್ಣ, ಶೇಖರಪ್ಪ,  ಮಂಜಣ್ಣ, ಹೊನ್ನಪ್ಪ, ಈಶ್ವರಪ್ಪ, ಕಾಸಿಂ ನಾಯ್ಕ, ದೇವೇಂದ್ರಪ್ಪ, ಜಯಶೀಲಗೌಡ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.