ಚಳಿಗೂ ವೈನ್ಗೂ ಹತ್ತಿರದ ನಂಟು. ಆರೋಗ್ಯಕರ ಪೇಯವಾಗಿ, ಫ್ಯಾಮಿಲಿ ಡ್ರಿಂಕ್ಸ್ ಎಂಬ ಹೆಗ್ಗಳಿಕೆಯ ವೈನ್ ಪ್ರಿಯರ ಸಂಖ್ಯೆಯೇನೂ ಕಮ್ಮಿಯಿಲ್ಲ.
ಬೆಂಗಳೂರು ಸುತ್ತಮುತ್ತ ಸಾಕಷ್ಟು ದ್ರಾಕ್ಷಿ ಬೆಳೆಯುವ ಪ್ರದೇಶವಿದ್ದರೂ ವಿರಳವಾಗಿದ್ದ ‘ವೈನಿಗರ’ ಸಂಖ್ಯೆ ಈಗ ನಿಧಾನವಾಗಿ ಹೆಚ್ಚಾಗುತ್ತಿದೆ. ದೊಡ್ಡಬಳ್ಳಾಪುರದ ‘ಗ್ರೋವರ್ವೈನ್’ ತಯಾರಿಕಾ ಕಂಪೆನಿಯಂತೂ ಪ್ರತಿವರ್ಷ ಏರ್ಪಡಿಸುವ ವೈನ್ ಪ್ರವಾಸಕ್ಕೆ ಭೇಟಿ ಕೊಡುವವರ ಸಂಖ್ಯೆ ವೈನಿಗರ ಪ್ರಮಾಣಕ್ಕೆ ಕೈಪಿಡಿಯಂತಿದೆ.

ನಂದಿ ಬೆಟ್ಟದ ಹಾದಿಯಲ್ಲಿ...
ಬೆಂಗಳೂರಿನ ಹೃದಯಭಾಗದಿಂದ ಹೊರಟು 45 ಕಿ.ಮೀ. ದೂರದ ದೊಡ್ಡಬಳ್ಳಾಪುರ ಪಟ್ಟಣ ದಾಟಿದೊಡನೆ ರಘುನಾಥಪುರದಲ್ಲಿ ಸಿಗುವ ಗ್ರೋವರ್ ವೈನ್ ತಯಾರಿಕಾ ಕೇಂದ್ರದ ಪರಿಚಾರಕರು ಪ್ರವಾಸಿಗರ ಮಾಹಿತಿ ದಾಖಲಿಸಿ ಕೈಗೊಂದು ಬ್ಯಾಂಡ್ ಕಟ್ಟುತ್ತಾರೆ. ಇಲ್ಲಿಂದ ವೈನ್ ಪ್ರವಾಸ ಆರಂಭ.

ಹದಿನೈದು ನಿಮಿಷಗಳ ವಿಶ್ರಾಂತಿಯ ಬಳಿಕ ವೈನ್ ಪರಿಣಿತರೊಬ್ಬರು ದ್ರಾಕ್ಷಿ ತೋಟಕ್ಕೆ ಕರೆದೊಯ್ಯುತ್ತಾರೆ. ನಂದಿ ಬೆಟ್ಟದ ಮತ್ತೊಂದು ಮಗ್ಗುಲಲ್ಲಿರುವ ಗ್ರೋವರ್ನ 350ಎಕರೆಗೂ ಅಧಿಕ ಪ್ರದೇಶದಲ್ಲಿ ಹಸಿರು ಹೊದ್ದ ದ್ರಾಕ್ಷಿ ಬಳ್ಳಿಗಳನ್ನು ಶಿಸ್ತಿನ ಸಿಪಾಯಿಗಳಂತೆ ಸಜ್ಜುಗೊಳಿಸಲಾಗಿದೆ. ನಂದಿ ಬೆಟ್ಟ ಒಂದೆಡೆ, ತಂಗಾಳಿ ಬೀಸುವ ಎತ್ತರದ ಪ್ರದೇಶದಲ್ಲಿನ ದ್ರಾಕ್ಷಿ ತೋಟ ಮತ್ತೊಂದೆಡೆ.

‘1988ರಲ್ಲಿ ಕನ್ವಾಲ್ ಗ್ರೋವರ್ ಎಂಬುವರು ವ್ಯಾಪಾರ ನಿಮಿತ್ತ ಐರೋಪ್ಯ ರಾಷ್ಟ್ರಗಳ ಪ್ರವಾಸ ಕೈಗೊಂಡಾಗ ಜಾರ್ಜ್ ವೆಸ್ಸೆಲ್ ಎಂಬ ವೈನ್ ಪರಿಣಿತರನ್ನು ಭೇಟಿಯಾದರು. ವೈನ್ ತಯಾರಿಕಾ ಘಟಕಕ್ಕೆ ಸೂಕ್ತ ತಾಣ ಹುಡುಕುವಾಗ ಸಿಕ್ಕಿದ್ದು ದೊಡ್ಡಬಳ್ಳಾಪುರದ ಈ ತಾಣ. ಸಮುದ್ರ ಮಟ್ಟದಿಂದ ಒಂದು ಸಾವಿರ ಮೀಟರ್ಗಳಷ್ಟು ಎತ್ತರದಲ್ಲಿರುವ ಈ ಪ್ರದೇಶದ ಭೂಮಿ ಹಾಗೂ ಮಣ್ಣು ದ್ರಾಕ್ಷಿ ಬೆಳೆಗೆ ಹೇಳಿಮಾಡಿಸಿದಂತಿತ್ತು. ಸೂರ್ಯನ ಬಿಸಿಲು ಹೆಚ್ಚಿರುವ ಬೆಚ್ಚಗಿನ ಹಗಲು ಹಾಗೂ ತಣ್ಣನೆಯ ರಾತ್ರಿ ದ್ರಾಕ್ಷಿ ಬೆಳೆಗೆ ಹಿತಕರ ವಾತಾವರಣ. ಇದರಿಂದ ದ್ರಾಕ್ಷಿ ಬೆಳೆಯಲು ಹೆಚ್ಚುಕಾಲ ತೆಗೆದುಕೊಳ್ಳುತ್ತದೆ. ವೈನ್ನ ರುಚಿ ಹೆಚ್ಚಿಸುವ ಗುಣ ದ್ರಾಕ್ಷಿಗೆ ಬರಲು ಈ ವಾತಾವರಣ ಸಹಕಾರಿ’ ಎಂಬಿತ್ಯಾದಿ ಮಾಹಿತಿಯನ್ನು ವೈನ್ ಸೊಮ್ಮೆಲೀರ್ ಶ್ರೀಜಿತ್ ನೀಡಿದರು.

ದ್ರಾಕ್ಷಿ ‘ಗಿಡ’ಗಳ ನಡುವೆ...
ದ್ರಾಕ್ಷಿ ತೋಟದಲ್ಲಿ ವಿಟಿಕಲ್ಚರ್ನ ಪ್ರತಿಯೊಂದು ಮಾಹಿತಿಯೂ ಪರಿಪೂರ್ಣವಾಗಿ ತಿಳಿಸಿಕೊಡುವ ಮೂಲಕ ವೈನ್ ತಯಾರಿಕೆ ಹಿಂದಿನ ಪರಿಶ್ರಮ, ಶ್ರದ್ಧೆ ಹಾಗೂ ಅದನ್ನು ಸವಿಯುವ ಬಗೆ ಕುರಿತು ತಿಳಿಸುವುದೇ ಈ ಪ್ರವಾಸದ ಪ್ರಮುಖ ಅಂಶ.

ಹೀಗಾಗಿ ಜಗತ್ತಿನಲ್ಲೇ ವೈನ್ ತಯಾರಿಕೆಯಲ್ಲಿ ಬಹು ಪ್ರಸಿದ್ಧವಾದ ದ್ರಾಕ್ಷಿ ತಳಿಗಳಾದ ಫ್ರಾನ್ಸ್ ಮೂಲದ ಶಿರಾಜ್, ಕ್ಯಾಬ್ರಿನೆಟ್ ಸಾವೆರಿನ್ ಎಂಬ ಕೆಂಪು ದ್ರಾಕ್ಷಿ ತಳಿಗಳು. ಸಾವೆಗ್ನಾಮ್ ಬ್ಲಾಂಕ್, ಕ್ಯಾನನ್ ಬ್ಲಾಂಕ್, ವಿಯಾನರ್ ಎಂಬ ಹಸಿರು ದ್ರಾಕ್ಷಿ ತಳಿಗಳು ಗ್ರೋವರ್ ತೋಟದಲ್ಲಿವೆ. ಇದು ವೈನ್ ಬಳಕೆಯ ತೋಟವಾದ್ದರಿಂದ ಇಲ್ಲಿ ದ್ರಾಕ್ಷಿ ಗೊಂಚಲು ಚಪ್ಪರದ ಬದಲಾಗಿ ಗಿಡಗಳಲ್ಲಿ ಬೆಳೆಯುವುದು ವಿಶೇಷ.

ತೋಟದಲ್ಲಿ ವಿಹರಿಸಿ ಗ್ರೋವರ್ನ ವೈನ್ ತಯಾರಿಕಾ ಘಟಕಕ್ಕೆ ಬಂದರೆ ಅಲ್ಲಿ ಬಿಸಿಯಾದ ಶಾಕಾಹಾರಿ ಹಾಗೂ ಮಾಂಸಾಹಾರಿ ಆಹಾರ ಸಿದ್ಧವಾಗಿರುತ್ತದೆ. ಹೊರಗಿನ ತಂಪು ಹವೆಯಲ್ಲಿ ಹುಲ್ಲಿನ ಹಾಸಿನ ಮೇಲೆ ಹಾಕಲಾದ ಓಕ್ ಬ್ಯಾರೆಲ್ನಿಂದ ಸಿದ್ಧಪಡಿಸಲಾದ ಕುರ್ಚಿಯ ಮೇಲೆ ಕುಳಿತು ಆರಾಮವಾಗಿ ಊಟ ಮಾಡಬಹುದು. ತುಸು ಕಾಲ ವಿಶ್ರಾಂತಿಯ ನಂತರ ವೈನ್ ತಯಾರಿಕೆಯ ಮಾಹಿತಿಗಾಗಿ ಪ್ರಯಾಣ ಆರಂಭವಾಗುತ್ತದೆ.

ವೈನ್ ಲೋಕದೊಳಗೆ
ಪ್ರವಾಸದ ಆರಂಭದಲ್ಲೇ ಕೆಲವೊಂದು ಪ್ರದೇಶಗಳ ಛಾಯಾಚಿತ್ರಗಳನ್ನು ನಿಷೇಧಿಸಿರುವ ಬಗ್ಗೆ ಹಾಗೂ ಕೆಲವೊಂದು ನಿರ್ಬಂಧಿತ ಪ್ರದೇಶಗಳ ಕುರಿತು ಸೂಚನೆಗಳನ್ನು ನೀಡಲಾಗುತ್ತದೆ. ಅಲ್ಲಿಂದ ಒಳ ಪ್ರವೇಶಿಸಿದರೆ ನಿಜಕ್ಕೂ ಹಿಮಾಲಯದಲ್ಲೇ ನಿಂತ ಅನುಭವ. ಹವಾನಿಯಂತ್ರಣ ವ್ಯವಸ್ಥೆ ಇಲ್ಲದಿದ್ದರೂ ಕೊರೆವ ಚಳಿ. 80 ಬೃಹತ್ ಸ್ಟೀಲ್ ಟ್ಯಾಂಕ್ಗಳಲ್ಲಿ ತುಂಬಿದ ದ್ರಾಕ್ಷಾರಸ. ಈಸ್ಟ್ ಬೆರೆಸಿ ಕಳಿಯಲೆಂದು ಸ್ಟೀಲ್ ಟ್ಯಾಂಕ್ಗಳ ಸುತ್ತಲೂ ಎರಡು ಪದರಗಳಲ್ಲಿ ಹರಿಯಬಿಟ್ಟಿರುವ ನೀರು ವಾತಾವರಣವನ್ನು ತಣ್ಣಗಾಗಿಸಿದೆ. ಶುಚಿತ್ವಕ್ಕೆ ಎಲ್ಲಿಲ್ಲದ ಆದ್ಯತೆ. ಇದರ ನಂತರದ ಪ್ರಾಂಗಣದಲ್ಲಿ ವೈನ್ ತುಂಬಿಟ್ಟ ಅದೇ ಗಾತ್ರದ ಅಂಥದ್ದೇ ಟ್ಯಾಂಕ್ಗಳು. ಮತ್ತೊಂದೆಡೆ ಬಾಟಲಿಗೆ ವೈನ್ ತುಂಬಿಸುವ ಘಟಕ. ಅದರಾಚೆ ಸೀಲ್ ಹಾಗೂ ಪ್ಯಾಕಿಂಗ್ ಘಟಕ.

ಹೊರಗೆ ಪಾನಿ ಒಳಗೆ ಪೇಯ
ಇವಿಷ್ಟನ್ನು ನೋಡಿದ ನಂತರ ನೆಲ ಮಾಳಿಗೆಯಲ್ಲಿ ಸುಂದರ, ಸುಸಜ್ಜಿತ ಹಾಗೂ 5ಡಿಗ್ರಿ ಸೆಂಟಿಗ್ರೇಡ್ನ ಕೊಠಡಿಯೊಂದನ್ನು ಪ್ರವೇಶಿಸಬೇಕು. ಸುತ್ತಲೂ ಬಗೆ ಬಗೆ ವೈನ್ ತುಂಬಿದ ಓಕ್ ಮರದ ಬ್ಯಾರೆಲ್ಗಳು.

ಮರ ಹಾಗೂ ಶೀತ ಹಿಡಿದಿಡುವ ಇಟ್ಟಿಗೆಗಳಿಂದ ಸಿದ್ಧಪಡಿಸಲಾದ ಈ ಕೋಣೆಯಲ್ಲಿ ಏಕಕಾಲದಲ್ಲಿ 20 ಮಂದಿ ಕೂರಬಹುದಾದ ಆಸನ ವ್ಯವಸ್ಥೆ ಇದೆ. ಒಂದು ಬದಿಯಲ್ಲಿ ವೈನ್ ಲೈಬ್ರರಿ. ಈವರೆಗೂ ತಯಾರಿಸಲಾದ ವೈನ್ಗಳನ್ನು ವರ್ಷಗಳ ಆಧಾರದಲ್ಲಿ ಇಲ್ಲಿ ಸಂಗ್ರಹಿಸಿಡಲಾಗಿದೆ. ಟೇಬಲ್ ಮೇಲೆ ಖಾಲಿ ಶೀಷೆ, ಚೀಸ್ ಹಾಗೂ ಸಪ್ಪೆ ಬಿಸ್ಕತ್ತುಗಳ ತಟ್ಟೆಗಳು ವೈನ್ ಹೀರುವಂತೆ ಆಹ್ವಾನ ನೀಡುವಂತಿದ್ದವು. ಐದು ಬಗೆ ವೈನ್ ತುಂಬಿದ ಬಾಟಲಿಗಳು ನಮ್ಮೆದುರು ಇದ್ದವು.

ಇದೇ ಮಾದರಿಯಲ್ಲಿ ಗ್ರೋವರ್ನ ವೋಗ್ನೀರ್, ಸೆವಿಯಾಗ್ಮಾಮ್ ಬ್ಲಾಂಕ್, ಶಿರಾಜ್ ರೋಸ್, ಕ್ಯಾಬರ್ನೆಟ್ ಶಿರಾಜ್ ಹಾಗೂ ಲಾ ರಿಸರ್ವ್ ಎಂಬ ಐದು ಬಗೆಯ ವೈನ್ ಹೀರುವ ಅವಕಾಶ. ಇಷ್ಟು ಮಾತ್ರವಲ್ಲ 20ಕ್ಕೂ ಹೆಚ್ಚು ಮಂದಿ ಗುಂಪಿನಲ್ಲಿ ಬಂದಲ್ಲಿ ವೈನ್ ಸ್ಟಾಂಪಿಂಗ್ ಎಂಬ ದ್ರಾಕ್ಷಿ ತುಳಿಯುವ ಮಜವನ್ನೂ ಸವಿಯಬಹುದು. ಇದಕ್ಕೆ ಒಂದಿಷ್ಟು ಹಣ ಹೆಚ್ಚು ಪಾವತಿಸಬೇಕಷ್ಟೇ. ಇಲ್ಲಿಗೆ ವೈನ್ ಪ್ರವಾಸ ಅಂತಿಮ ಹಂತ ತಲುಪುತ್ತದೆ.

ವರ್ಷದ ಎಲ್ಲಾ ದಿನಗಳಲ್ಲೂ ವೈನ್ ಟೂರ್ ಆಯೋಜಿಸಲಾಗುತ್ತಿದ್ದರೂ ಫೆಬ್ರುವರಿ ಹಾಗೂ ಮಾರ್ಚ್ ಪ್ರಶಸ್ತ ಸಮಯ. ಏಕೆಂದರೆ ಕಳಿತ ದ್ರಾಕ್ಷಿಯ ಕೊಯ್ಲು ಸೀಸನ್ ಇದು. ದ್ರಾಕ್ಷಿಯ ಸವಿಯೊಂದಿಗೆ ವೈನ್ ಅನ್ನೂ ಹೀರಬಹುದು. ವಾರದ ದಿನದಲ್ಲಿ ತಲಾ ರೂ. 800 ಹಾಗೂ ವಾರಾಂತ್ಯದಲ್ಲಿ ರೂ. 1000 ಶುಲ್ಕವನ್ನು ಗ್ರೋವರ್ ನಿಗದಿಪಡಿಸಿದೆ.
ಮಾಹಿತಿಗೆ: grovervineyards.in

ಸಂಸ್ಕೃತಿಯ ಪ್ರಚಾರಕ್ಕಾಗಿ

35 ವರ್ಷಗಳ ವೈನ್ ಪರಂಪರೆಗೆ ಸಾಕ್ಷಿಯಾಗಿರುವ ಗ್ರೋವರ್ ಕಂಪೆನಿ ತಯಾರಿಸುವ 15 ಬಗೆಯ ವೈನ್, ದೇಶ ವಿದೇಶಗಳಲ್ಲಿ ಪ್ರಸಿದ್ಧಿ ಪಡೆದಿದೆ. ಇಲ್ಲಿ ತಯಾರಾಗುವ ವೈನ್ಗಳಲ್ಲಿ ಶೇ 20ರಷ್ಟು ಪ್ರಮಾಣ ಜಪಾನ್ ಹಾಗೂ ಫ್ರಾನ್ಸ್ ದೇಶಗಳಿಗೆ ರಫ್ತಾಗುತ್ತದೆ.
ಆರೋಗ್ಯಕ್ಕೆ ಪೂರಕವಾದ ಗುಣಗಳಿರುವ ವೈನ್ ಹೀರುವ ಸಂಸ್ಕೃತಿ ನಮ್ಮಲ್ಲಿ ಈವರೆಗೂ ಬೆಳೆದಿಲ್ಲ. ಹೀಗಾಗಿ ಈ ಪ್ರವಾಸ ಆಯೋಜಿಸುವುದರ ಮೂಲಕ ವೈನ್ ಕುರಿತ ಸಮಗ್ರ ಮಾಹಿತಿ ನೀಡುವುದರ ಜತೆಗೆ ವೈನ್ ಹೀರುವ ಸಂಸ್ಕೃತಿಯನ್ನು ಪ್ರಚುರಪಡಿಸುವ ಉದ್ದೇಶ ನಮ್ಮದು.
– ಕರೀಶ್ಮಾ ಗ್ರೋವರ್, ಅಸೋಸಿಯೇಟ್ ವೈನ್ಮೇಕರ್

ಪಂಚ ಸೂತ್ರ
ದಿವನಾದ ದ್ರಾಕ್ಷಿ ತೋಟದಲ್ಲಿ ವಿಹರಿಸಿ ಪೇಯವನ್ನು ಸವಿಯಲು ಅಣಿಯಾಗುತ್ತಿದ್ದಂತೆ, ‘ವೈನ್ ಹೀರುವ ಮುನ್ನ ಕೆಲವು ನಿಯಮಗಳನ್ನು ತಿಳಿದುಕೊಂಡು ಆಮೇಲೆ ಮುಂದುವರಿಯಬೇಕಾಗುತ್ತದೆ ಎಂಬ ಸೂಚನೆ ಬಂತು. ಹೌದು, ವೈನ್ ಹೀರಲು ಪಂಚ ಸೂತ್ರಗಳಿವೆ! ಅವು ಐದು ‘ಎಸ್’ಗಳು.

* ಮೊದಲು ಗ್ಲಾಸ್ಗೆ ಸುರಿದ ವೈನ್ ನೋಡುವುದು (See).
* ಅದನ್ನು ಚೆನ್ನಾಗಿ ಕುಲುಕುವುದು (Swirl).
* ವಾತಾವರಣದೊಂದಿಗೆ ಚೆನ್ನಾಗಿ ಬೆರೆತ ಅದರ ಪರಿಮಳವನ್ನು ಆಘ್ರಾಣಿಸುವುದು (sniff).
* ಗುಟುಕಿರಿಸಿ ಬಾಯಲ್ಲಿ ಒಂದು ಸುತ್ತು ವೈನ್ ತಿರುಗಿಸುವುದು (sip).
* ಕೊನೆಯಲ್ಲಿ ನಿಧಾನವಾಗಿ ಗಂಟಲೊಳಗೆ ಇಳಿಸುವುದು (savor).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.