ಗುರುವಾರ , ಮೇ 13, 2021
35 °C

ವೈಭವದ ಗಣಪತಿ ಬ್ರಹ್ಮರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಳಬಾಗಲು: ತಾಲ್ಲೂಕಿನ ಕುರುಡು ಮಲೆ ಗ್ರಾಮದ ಪುರಾಣ ಪ್ರಸಿದ್ಧ ಗಣಪತಿ ದೇವರ ಬ್ರಹ್ಮ ರಥೋತ್ಸವ ಶುಕ್ರವಾರ ವೈಭವ ಹಾಗೂ ವಿಜಂಭ್ರಣೆಯಿಂದ ನಡೆಯಿತು.ಕಾರ್ಯಕ್ರಮದ ಅಂಗವಾಗಿ ಅಂಕು ರಾರ್ಪಣೆ, ಕಲ್ಯಾಣೋತ್ಸವ. ಗಣಪತಿಗೆ ಮಹಾಭಿಷೇಕ, ರಥಾ ರೋಣೋತ್ಸವ ದಲ್ಲಿ ಜಿಲ್ಲೆ ಹಾಗೂ ತಾಲ್ಲೂಕಿನಡೆಯಿಂದ ಸಾವಿರಾರು ಜನರು ಭಾಗವಹಿಸಿದ್ದರು. ಸುತ್ತಮುತ್ತಲ ಗ್ರಾಮಸ್ಥರು ಹಾಗೂ ಹೊರ ಊರಿನವರಿಗೆ ರಾಜ್ಯ ರಸ್ತೆ ಸಾರಿಗೆ ವ್ಯವಸ್ಥೆ ಮಾಡಲಾಗಿತ್ತು. ಮುಖ್ಯ ವಾಗಿ ಮುಳಬಾಗಲು, ಶ್ರೀನಿ ವಾಸಪುರ, ಕೋಲಾರ ಹಾಗೂ ಕೆಜಿಎಫ್ ಪಟ್ಟಣ ದಿಂದ ಏರ್ಪಡಿಸಲಾಗಿತ್ತು.ತಿರುಮಲ ವ್ಯಾಸಾಶ್ರಮ ಕೋಟೇ ಶ್ವರಾನಂದ ಸ್ವಾಮಿಜಿ, ಉಸ್ತುವಾರಿ ಸಚಿವ ವರ್ತೂರು ಪ್ರಕಾಶ್, ಶಾಸಕ ಅಮರೇಶ್, ವಿಧಾನ ಪರಿಷತ್ ಸದಸ್ಯ ಡಿ.ಎಸ್.ವೀರಯ್ಯ, ಮಾಜಿ ಶಾಸಕ ಆಲಂಗೂರು ಶ್ರೀನಿವಾಸ್, ಮುನಿ ಆಂಜಪ್ಪ, ತಹಶೀಲ್ದಾರ್ ಪಿ.ಜಯಮಾಧವ ಇತರರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.