ಮಂಡ್ಯ ಜಿಲ್ಲೆಯ ಮೇಲುಕೋಟೆಯ ಬೆಟ್ಟದ ಯೋಗನರಸಿಂಹ ಸ್ವಾಮಿ ದೇವಸ್ಥಾನದ ವಿದ್ಯುತ್ ದೀಪ ಅಲಂಕಾರದ ದೃಶ್ಯ ಇದು. ದಕ್ಷಿಣ ಬದರೀಕಾಶ್ರಮ, ಯದುಗಿರಿ ಎಂದೇ ಪ್ರಸಿದ್ಧಿಯಾದ ಮೇಲುಕೋಟೆಯಲ್ಲಿ ಚಲುವನಾರಾಯಣಸ್ವಾಮಿಯ ವಿಶ್ವವಿಖ್ಯಾತ ವೈರಮುಡಿ ಉತ್ಸವದ ಸಂಭ್ರಮಕ್ಕೆ ಸೋಮವಾರ ಲಕ್ಷಾಂತರ ಭಕ್ತರು ಸಾಕ್ಷಿಯಾದರು. ಭಗವಂತನ ಕಿರೀಟವೆಂದೇ ಕರೆಯಲಾಗುವ ವಜ್ರಖಚಿತ ವೈರಮುಡಿ ಕಿರೀಟವನ್ನು ಧರಿಸಿದ ಚಲುವನಾರಾಯಣಸ್ವಾಮಿ ದರ್ಶನ ಪಡೆದು ಪುನೀತರಾದರು. ಪ್ರಜಾವಾಣಿ ಚಿತ್ರ