ವೈಸೆಂಟ್

7

ವೈಸೆಂಟ್

Published:
Updated:
ವೈಸೆಂಟ್

ಯುರೋಪಿನಲ್ಲಿ ವಾಸಿಸುವ ಬೃಹತ್ ಗಾತ್ರದ, ಪೊದೆ ಕೂದಲಿನ ಕಾಡೆಮ್ಮೆಯನ್ನು ವೈಸೆಂಟ್ ಎಂದು ಕರೆಯಲಾಗುತ್ತದೆ. ಅಮೆರಿಕದ ಕಾಡೆಮ್ಮೆಯಂತೆಯೇ ಕಾಣುವ ಈ ವೈಸೆಂಟ್‌ಗಳು ಅವುಗಳಿಗಿಂತ ಗಾತ್ರದಲ್ಲಿ ದೊಡ್ಡವು. ಅವುಗಳ ತಲೆ ಸಾಮಾನ್ಯ ಗಾತ್ರದಲ್ಲಿದ್ದರೂ, ಕಾಲುಗಳು ಎತ್ತರವಾಗಿರುತ್ತವೆ. ಅವು ಎರಡು ಮೂರು ಮೀಟರ್ ಎತ್ತರ ಬೆಳೆಯುತ್ತವೆ.ಯುರೋಪಿನ ಕಾಡುಗಳಲ್ಲಿ ಇದಕ್ಕಿಂತಲೂ ದೊಡ್ಡ ವೈಸೆಂಟ್‌ಗಳು ಬದುಕಿದ್ದವು ಎನ್ನಲಾಗುತ್ತದೆ. ಕಾಡು ನಾಶವಾದ ಪರಿಣಾಮ ಅವು ಕಾಣೆಯಾದವು.ಮನುಷ್ಯನ ಆಹಾರದ ದುರಾಸೆಗೆ ಬಲಿಯಾಗಿ ವೈಸೆಂಟ್‌ಗಳ ಸಂಖ್ಯೆ ಕುಂಠಿತವಾಯಿತು. 1900 ಹೊತ್ತಿಗೆ 700 ವೈಸೆಂಟ್‌ಗಳು ಮಾತ್ರ ಬದುಕಿದ್ದವು.ಅವು ಕೂಡ ಪೋಲೆಂಡ್‌ನ ಕಾಡಿನಲ್ಲಿ ಮಾತ್ರ. ಮಹಾಯುದ್ಧದ ಹೆಚ್ಚು ಕಾಳಗ ನಡೆದಿದ್ದು ಪೋಲೆಂಡ್‌ನಲ್ಲಿ. ಆಗ ಸೈನಿಕರು ಆಹಾರಕ್ಕಾಗಿ ಭಾರಿ ಸಂಖ್ಯೆಯಲ್ಲಿ ವೈಸೆಂಟ್‌ಗಳನ್ನು ಕೊಂದರು. ಇದೀಗ ಕೆಲವು ವೈಸೆಂಟ್‌ಗಳನ್ನು ಮೃಗಾಲಯದಲ್ಲಿ ರಕ್ಷಿಸಲಾಗುತ್ತಿದೆ.          

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry