ಸೋಮವಾರ, ಮೇ 17, 2021
22 °C

ಶಂಕಿತ ಡೆಂಗೆ ಜ್ವರದಿಂದ ಅಜ್ಜಿ, ಮೊಮ್ಮಗಳ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರಿಯೂರು: ದಾವಣಗೆರೆಯ ಬಾಪೂಜಿ ಆಸ್ಪತ್ರೆಗೆ ದಾಖಲಾಗಿದ್ದ ತಾಲ್ಲೂಕಿನ ವಾಣಿವಿಲಾಸಪುರ ಗ್ರಾಮದ ಅಜ್ಜಿ-ಮೊಮ್ಮಗಳು ಶಂಕಿತ ಡೆಂಗೆ ಜ್ವರದಿಂದ ಬುಧವಾರ ಸಾವನ್ನಪ್ಪಿದ್ದಾರೆ.ಈರಮ್ಮ (70) ಮತ್ತು 7 ನೇ ತರಗತಿ ಓದುತ್ತಿದ್ದ ಮೊಮ್ಮಗಳು ತನುಜ (12) ಮೃತಪಟ್ಟವರು. ಈ ಬಗ್ಗೆ ಸುದ್ದಿಗಾರರ ಜತೆ ಮಾತನಾಡಿದ ಗ್ರಾಮದ ಗ್ರಾ.ಪಂ. ಮಾಜಿ ಸದಸ್ಯ ಉಮೇಶ್ ಅವರು ಆಸ್ಪತ್ರೆಯ ವೈದ್ಯರು ಸಾವಿಗೆ ಡೆಂಗೆ ಜ್ವರ ಕಾರಣ ಎಂದು ಸ್ಪಷ್ಟಪಡಿಸಿದ್ದಾರೆ.ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದ ಅಜ್ಜಿ ಮೊಮ್ಮಗಳು ನಮ್ಮ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜ್ವರ ಕಡಿಮೆಯಾಗದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಎರಡು ದಿನಗಳ ಹಿಂದೆ ದಾವಣಗೆರೆ ಆಸ್ಪತ್ರೆಗೆ ಹೋಗಿದ್ದರು ಎಂದು ಉಮೇಶ್ ತಿಳಿಸಿದ್ದಾರೆ.ಗ್ರಾಮದಲ್ಲಿ ಸ್ವಚ್ಛತೆಯ ಕೊರತೆ ಬಗ್ಗೆ, ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇದೆ ಎಂದು ಪ್ರಜಾವಾಣಿಯಲ್ಲಿ ಹಿಂದಿನ ವಾರ ವರದಿ ಪ್ರಕಟವಾಗಿತ್ತು. ಗ್ರಾಮ ಪಂಚಾಯ್ತಿಯವರು, ಆರೋಗ್ಯ ಇಲಾಖೆಯವರು ಎಚ್ಚರ ವಹಿಸದ ಕಾರಣ ಡೆಂಗೆ ಜ್ವರಕ್ಕೆ ಇಬ್ಬರು ಬಲಿಯಾಗಬೇಕಾಯಿತು. ಆರೋಗ್ಯ ಕೇಂದ್ರದಲ್ಲಿ ಕಾಯಂ ವೈದ್ಯರಿಲ್ಲದೆ ಇರುವುದು ಕೂಡಾ ರೋಗಿಗಳು ತೊಂದರೆ ಅನುಭವಿಸಲು ಕಾರಣವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.