ಕೊಪ್ಪಳ: ಹೈದರಾಬಾದ್ ಮತ್ತು ಮುಂಬೈ ಕರ್ನಾಟಕಕ್ಕೆ ನೇರ ಸಂಪರ್ಕ ಕಲ್ಪಿಸಬಲ್ಲ ಹಾಗೂ ಶತಮಾನದ ಹಿಂದೆಯೇ ಸಿದ್ಧಗೊಂಡಿದ್ದ ರೈಲ್ವೆ ಯೋಜನೆಯೊಂದಕ್ಕೆ ಈ ಬಾರಿಯ ರೈಲ್ವೆ ಬಜೆಟ್ನಲ್ಲಿಯೂ ಹಸಿರು ನಿಶಾನೆ ಸಿಗಲಿಲ್ಲ.

ಗದಗ-ವಾಡಿ ರೈಲ್ವೆ ಮಾರ್ಗವೇ ಈ ವರೆಗೂ ಅನುಮೋದನೆ ಸಿಗದೇ ಮರೀಚಿಕೆಯಾಗಿರುವ ಶತಮಾನ ಪೂರೈಸಿದ ಯೋಜನೆ. ಪ್ರತಿ ವರ್ಷ ರೈಲ್ವೆ ಬಜೆಟ್ ಮಂಡನೆಯಾಗುವ ಸಮಯದಲ್ಲಿ ಈ ಭಾಗದ ಜನರ ನಿರೀಕ್ಷೆ ಗರಿಗೆದರುತ್ತದೆ. ಇನ್ನೇನು ಈ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಹಸಿರು ನಿಶಾನೆ ಸಿಗಲಿದೆ ಎಂಬ ಸಂಭ್ರಮದ ಕ್ಷಣಕ್ಕೆ ಕಾಯುತ್ತಿರುವಂತೆಯೇ, ಕೇಂದ್ರವು ಕೆಂಪು ದೀಪ ತೋರುವ ಮೂಲಕ ಯೋಜನೆಯನ್ನು ಇದ್ಧ ಸ್ಥಿತಿಯಲ್ಲಿಯೇ ಇರುವಂತೆ ಮಾಡಿದೆ ಎಂಬ ಬೇಸರ ಈ ಭಾಗದ ಜನರಲ್ಲಿ ಮೂಡಿದೆ.

ಕೊಪ್ಪಳ, ರಾಯಚೂರು, ಗುಲ್ಬರ್ಗ, ಬೀದರ್ ಜಿಲ್ಲೆಗಳು ಹೈದರಾಬಾದ್ ನಿಜಾಮರ ಆಳ್ವಿಕೆಗೆ ಒಳಪಟ್ಟಿದ್ದ ಅವಧಿಯಲ್ಲಿ ಗದಗ ಮತ್ತು ವಾಡಿ ನಡುವೆ ರೈಲು ಮಾರ್ಗ ನಿರ್ಮಿಸುವ ಬಗ್ಗೆ ಯೋಜನೆ ಸಿದ್ಧವಾಗಿತ್ತು. `ಪ್ರಜಾವಾಣಿ~ಗೆ ಲಭ್ಯವಾಗಿರುವ ದಾಖಲೆಗಳ ಪ್ರಕಾರ 1910ರಲ್ಲಿ ಸಿದ್ಧಗೊಂಡ ಯೋಜನೆಯಂತೆ ಈ ಮಾರ್ಗವನ್ನು 1.87 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿತ್ತು.

ಆದರೆ, ಈ ಯೋಜನೆ ಅನುಷ್ಠಾನಕ್ಕೆ ಸಂಬಂಧಪಟ್ಟಂತೆ ಆಗಿನ ಬ್ರಿಟಿಷ್ ಸರ್ಕಾರ ಮತ್ತು ನಿಜಾಮ ಸರ್ಕಾರದ ನಡುವೆ ಭಿನ್ನಾಭಿಪ್ರಾಯ ತಲೆದೋರಿದ ಪರಿಣಾಮ ಈ ರೈಲು ಮಾರ್ಗ ನಿರ್ಮಾಣ ಕಾರ್ಯವನ್ನು ಮುಂದೂಡಲಾಯಿತು.

ಸ್ವಾತಂತ್ರ್ಯ ದೊರೆತ ನಂತರವಷ್ಟೇ ಈ ಯೋಜನೆಗೆ ಮರು ಜೀವ ಬಂದದ್ದು! 1997ರಲ್ಲಿ ನಡೆದ ಸಮೀಕ್ಷೆಯಂತೆ ಒಟ್ಟು 253 ಕಿ.ಮೀ. ಉದ್ದದ ಈ ರೈಲು ಮಾರ್ಗವನ್ನು 900 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ಪ್ರಸ್ತಾವನೆ ಸಿದ್ಧಗೊಂಡಿತು. ಆದರೆ, ನಂತರ ಮಂಡನೆಯಾದ ಎಲ್ಲ ರೈಲ್ವೆ ಬಜೆಟ್ಗಳಲ್ಲೂ ಈ ರೈಲು ಮಾರ್ಗದ ಬಗ್ಗೆ ರೈಲ್ವೆ ಇಲಾಖೆ ಜಾಣ ಮರೆವನ್ನು ಪ್ರದರ್ಶಿಸುತ್ತಾ ಬಂದಿದೆ ಎಂಬ ಭಾವನೆ ಈ ಭಾಗದ ಜನತೆಯದು.

ಮುಂಬೈ ಕರ್ನಾಟಕದ ಪ್ರಮುಖ ನಗರ ಹುಬ್ಬಳ್ಳಿ ಮತ್ತು ಹೈದರಾಬಾದ್ ಕರ್ನಾಟಕದ ಮುಖ್ಯ ನಗರ ಗುಲ್ಬರ್ಗ ನಡುವೆ ನೇರ ಸಂಪರ್ಕ ಈ ಮಾರ್ಗದಿಂದ ಸಾಧ್ಯವಾಗಲಿದೆ. ಹಿಂದುಳಿದ ತಾಲ್ಲೂಕುಗಳಾದ ಯಲಬುರ್ಗಾ, ಕುಷ್ಟಗಿ, ಲಿಂಗಸಗೂರು, ಸುರಪುರ, ಶಹಾಪುರಗಳಿಗೆ ರೈಲು ಸೌಲಭ್ಯ ದೊರೆತು ಈ ಭಾಗದ ಅಭಿವೃದ್ಧಿಗೆ ಪೂರಕವಾಗಲಿದೆ. ಅಲ್ಲದೇ, ಹುಬ್ಬಳ್ಳಿ ಮತ್ತು ಹೈದರಾಬಾದ್ ನಡುವಿನ ಅಂತರವನ್ನು 150 ಕಿ.ಮೀ.ಗಳಷ್ಟು ಕಡಿಮೆ ಮಾಡಲಿದೆ.

ಈ ಬಾರಿ ಸದರಿ ರೈಲು ಮಾರ್ಗವನ್ನು ಪ್ರಧಾನ ಮಂತ್ರಿ ರೇಲ್ ವಿಕಾಸ್ ಯೋಜನೆಯಡಿ ಕೈಗೆತ್ತಿಕೊಳ್ಳಲಾಗುತ್ತದೆ ಎಂದೂ ಹೇಳಲಾಗಿತ್ತು. ಅದೂ ಈ ಬಾರಿ ಹುಸಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.