ಚಿಕ್ಕಬಳ್ಳಾಪುರ: ಸ್ವಾತಂತ್ರ್ಯ ಪೂರ್ವ ದಿನಗಳ ಕೊಂಚ ಅನುಭವ ಪಡೆಯಬೇಕಿದ್ದರೆ. ಆಗಿನ ಪರಿಸರದ ವೈಶಿಷ್ಟ್ಯವನ್ನು ಸವಿಯಬೇಕಿದ್ದರೆ, ತಾಲ್ಲೂಕಿನ ನಂದಿ ರೈಲು ನಿಲ್ದಾಣದ ಆವರಣ ಹಳೆ ನೆನಪುಯಗಳ ತಾಣ.

ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾದ ರೈಲು ನಿಲ್ದಾಣವಷ್ಟೇ ಅಲ್ಲ, ಆಗಿನ ಕಾಲದ ಪರಿಸ್ಥಿತಿಯ ನೈಜ ದರ್ಶನ ಕೂಡ ಆಗುತ್ತದೆ. ಆಗಿನ ಕಾಲದಲ್ಲಿ ನಿರ್ಮಾಣಗೊಂಡ ಬಾವಿ, ಕಟ್ಟಡದ ಪಳೆಯಳಿಕೆಗಳನ್ನು ಕಾಣಬಹುದು. ನಿಲ್ದಾಣದ ಆವರಣವು ಹಲವಾರು ಕುತೂಹಲಗಳನ್ನು ತಣಿಸದೇ ಇರುವುದಿಲ್ಲ.

ನಿಖರ ಅಂಕಿಅಂಶಗಳ ಪ್ರಕಾರ, ಬ್ರಿಟಿಷರ ಆಳ್ವಿಕೆ ಕಾಲದಲ್ಲಿ ಅಸ್ತಿತ್ವಕ್ಕೆ ಬಂದ ನಂದಿ ರೈಲು ನಿಲ್ದಾಣವು ಶತಮಾನದ ಆಚರಣೆಯ ಅಂಚಿನಲ್ಲಿದೆ. 1915ರ ಆಸುಪಾಸಿನಲ್ಲಿ ಅಸ್ತಿತ್ವಕ್ಕೆ ಬಂದ ರೈಲು ನಿಲ್ದಾಣವು 2015ರ ವೇಳೆಗೆ ಶತಮಾನೋತ್ಸವ ಆಚರಿಸಲಿದೆ. ಶತಮಾನೋತ್ಸವ ಸಮೀಪಿಸಿದರೂ ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡ ನಿಲ್ದಾಣದ ಕಟ್ಟಡವು ಯಥಾಸ್ಥಿತಿಯಲ್ಲಿದೆ. ಯಾವುದೇ ರೀತಿಯ ನವೀಕರಣ ಹೊಂದದ ಕಟ್ಟಡವು ಈಗಲೂ ಉತ್ತಮ ರೀತಿಯಲ್ಲಿ ಬಳಕೆಯಾಗುತ್ತಿದೆ.

ಬೆಂಗಳೂರು ಮಾರ್ಗವಾಗಿ ಸಂಚರಿಸುವ ಚಿಕ್ಕಬಳ್ಳಾಪುರದಿಂದ ಧರ್ಮಪುರಿಯವರೆಗೆ ಬೆಳಿಗ್ಗೆ ಮತ್ತು ಸಂಜೆ ಸಂಚರಿಸುವ ರೈಲು ಈಗಲೂ ನಿಲ್ದಾಣದಲ್ಲಿ ಎರಡು ನಿಮಿಷಗಳ ಕಾಲ ನಿಲುಗಡೆಯಾಗುತ್ತದೆ. ನಂದಿ, ಕುಪ್ಪಹಳ್ಳಿ, ದೇವಶೆಟ್ಟಿಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ನೂರಾರು ಜನರು ನಂದಿ ರೈಲು ನಿಲ್ದಾಣದಲ್ಲೇ ರೈಲನ್ನು ಹತ್ತಿ ಚಿಕ್ಕಬಳ್ಳಾಪುರ ಅಥವಾ ಬೆಂಗಳೂರಿಗೆ ಪ್ರಯಾಣ ಬೆಳೆಸುತ್ತಾರೆ. ನಂದಿ ಜಾತ್ರೆಯ ಸಂದರ್ಭದಲ್ಲಂತೂ ಈ ನಿಲ್ದಾಣವು ಜನದಟ್ಟಣೆಯಿಂದ ಕೂಡಿರುತ್ತದೆ.

ನಿಲ್ದಾಣದ ಆವರಣಕ್ಕೆ ಭೇಟಿ ನೀಡಿದ್ದಲ್ಲಿ, ಅಲ್ಲಿನ ಕಟ್ಟಡವಷ್ಟೇ ಮಾತ್ರವಲ್ಲ ಅಲ್ಲಿನ ಪರಿಸರವು ಆಕರ್ಷಿಸುತ್ತದೆ. ಅಲ್ಲಿರುವ ಬೃಹದಾಕಾರದ ಆಲದ ಮರ, ವಿಶ್ರಾಂತಿಗಾಗಿ ಇರುವ ಆಸನಗಳು, ಹಸಿರು ಗಿಡಮರಗಳು, ಅಲ್ಲಿ ಬೀಸುವ ತಂಗಾಳಿ ಮನಸ್ಸಿಗೆ ಕೊಂಚ ಹಿತವಾದ ಅನುಭವ ನೀಡದೇ ಇರುವುದಿಲ್ಲ. ಅಲ್ಲಿಯೇ ಕಿರಿದಾದ ಬಾವಿಯಿದ್ದು, ಕೆಲ ಕ್ಷಣಗಳ ಮಟ್ಟಿಗೆ ಪ್ರಶಾಂತ ವಾತಾವರಣವು ಮನಸ್ಸಿಗೆ ಮುದ ನೀಡುತ್ತದೆ.
ಜಿಲ್ಲೆಯಿಂದ ದೂರ ತುಂಬ ದೂರ ಇರುವಂತಹ ಭಾವ ಮೂಡಿಸುತ್ತದೆ.

`ಬೆಂಗಳೂರು ಮತ್ತು ಮೈಸೂರು ನಡುವಣ ರೈಲು ಸಂಚಾರವು ಮೂರು ಹಂತಗಳಲ್ಲಿ ಆರಂಭಗೊಂಡಿತು. 1877ರ ಫೆಬ್ರುವರಿ 1 ರಿಂದ 1882ರ ಫೆಬ್ರುವರಿ 21ರ ಅವಧಿಯಲ್ಲಿ ಬೆಂಗಳೂರು ಮತ್ತು ಮೈಸೂರು ನಡುವೆ ರೈಲು ಸಂಚಾರ ಆರಂಭಗೊಂಡಿತು. ಆಗಿನ ಮೈಸೂರು ಸರ್ಕಾರವು 1911-1912ರ ಅವಧಿಯಲ್ಲಿ ಮೈಸೂರು ರಾಜ್ಯ ನಿರ್ಮಾಣ ಸಂಸ್ಥೆ (ಎಂಎಸ್ಸಿಡಿ) ಅಸ್ತಿತ್ವಕ್ಕೆ ತಂದಿತು.

ನಂತರದ ದಿನಗಳಲ್ಲಿ ಬೆಂಗಳೂರಿನಿಂದ ಚಿಕ್ಕಬಳ್ಳಾಪುರದವರೆಗೆ (51.71ಕಿ.ಮೀ) ಮತ್ತು ಕೋಲಾರದವರೆಗೆ (102.30ಕಿ.ಮೀ) ನ್ಯಾರೋ ಗೇಜ್ ಹಳಿಗಳನ್ನು ಅಳವಡಿಸಲಾಯಿತು. ನ್ಯಾರೋ ಗೇಜ್ ಹಳಿಯಲ್ಲಿ ರೈಲು ತುಂಬಾ ನಿಧಾನವಾಗಿ ಚಲಿಸುತಿತ್ತು. ರೈಲು ಮೂಲಕವೇ ಬ್ರಿಟಿಷರು ವ್ಯಾಪಾರ-ವಹಿವಾಟು ನಡೆಸುತ್ತಿದ್ದರು~ ಎಂದು ರೈಲ್ವೆ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.

`ರೈಲು ನಿಲ್ದಾಣದ ಬಳಿಯೇ ರೈಲ್ವೆ ಕ್ವಾಟರ್ಸ್ ನಿರ್ಮಿಸಲಾಗಿತ್ತು. ನಿಲ್ದಾಣದ ಸಿಬ್ಬಂದಿಗಳು ರೈಲ್ವೆ ಕ್ವಾಟರ್ಸ್ ವಾಸಿಸುತ್ತಿದ್ದರು.ಅಲ್ಲಿಯೇ ಇದ್ದ ಬಾವಿಯನ್ನು ಬಳಕೆ ಮಾಡುತ್ತಿದ್ದರು. ಆದರೆ ರೈಲ್ವೆ ಕ್ವಾಟರ್ಸ್ ಕಟ್ಟಡ ಈಗ ಪಾಳು ಬಿದ್ದಿದೆ. ಬ್ರಿಟಿಷರ ವಿನ್ಯಾಸದ ಅನುಸಾರವಾಗಿ ನಿರ್ಮಿಸಲಾಗಿರುವ ನಿಲ್ದಾಣದ ಕಟ್ಟಡವನ್ನು ಈಗಲೂ ಯಥಾರೀತಿ ಬಳಕೆ ಮಾಡಲಾಗುತ್ತಿದೆ. ನಿಲ್ದಾಣದಲ್ಲಿ ಈಗಲೂ ಟಿಕೆಟ್ ವಿತರಿಸಲಾಗುತ್ತಿದೆ. ನಂದಿಯಲ್ಲಿ ಎರಡೇ ನಿಮಿಷಗಳ ಕಾಲ ಮಾತ್ರವೇ ನಿಲುಗಡೆಯಾಗುವ ರೈಲಿನಲ್ಲಿ ಜನರು ಭಾರಿ ಸಂಖ್ಯೆಯಲ್ಲಿ ಪ್ರಯಾಣಿಸುತ್ತಾರೆ~ ಎಂದು ಅವರು ತಿಳಿಸಿದರು.

`ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಂದಿ ರೈಲು ನಿಲ್ದಾಣವು ವಿಶಿಷ್ಟ ಇತಿಹಾಸವನ್ನು ಹೊಂದಿದೆ. ಯುವಜನರು, ನಂದಿ ಬೆಟ್ಟಕ್ಕೆ ಬರುವ ಪ್ರವಾಸಿಗರು, ಗ್ರಾಮಸ್ಥರು ನಿಲ್ದಾಣದ ಆವರಣದಲ್ಲಿ ಕೆಲ ಹೊತ್ತು ವಿಶ್ರಾಂತಿ ಪಡೆಯುತ್ತಾರೆ. ಅಲ್ಲಿನ ಪ್ರಶಾಂತ ಆವರಣವು ಮನಸ್ಸಿಗೆ ಕೊಂಚ ಜೀವನೋತ್ಸಾಹ ತುಂಬುತ್ತದೆ~ ಹಿರಿಯರಾದ ನರಸಿಂಹಯ್ಯ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.