ಮಂಗಳವಾರ, ಮೇ 18, 2021
22 °C

ಶನಿವಾರಸಂತೆಯಲ್ಲಿ ಗುಡುಗು ಸಹಿತ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶನಿವಾರಸಂತೆ: ಪಟ್ಟಣದ ಸುತ್ತಮುತ್ತಲ ಗ್ರಾಮಗಳಲ್ಲಿ ಭಾನುವಾರ ಸಂಜೆ ಗುಡುಗು ಸಿಡಿಲಿನ ಮಳೆ ಸುರಿಯಿತು.

ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಮಧ್ಯಾಹ್ನ 3-30 ಗಂಟೆಗೆ ಇದ್ದಕ್ಕಿದ್ದಂತೆ ಗುಡುಗು-ಸಿಡಿಲಿನ ಆರ್ಭಟಕ್ಕೆ ಜನ ಬೆಚ್ಚಿಬಿದ್ದರು. ತಕ್ಷಣ ಮಳೆ ಜೋರಾಗಿ ಸುರಿಯತೊಡಗಿತು.ಸಂಜೆ 4.30 ರವರೆಗೆ ಸುರಿದ ಮಳೆಗೆ ಸುಡುತ್ತಿದ್ದ ಧರೆ ತಂಪಾಯಿತು. ಅರ್ಧ ಇಂಚಿಗೂ ಅಧಿಕ ಮಳೆಯಾಯಿತು.

ಮಳೆಗಾಗಿ ಹಂಬಲಿಸುತ್ತಿದ್ದ ಕೃಷಿಕರಿಗೆ ಮಳೆ ಖುಷಿ ನೀಡಿತು. ಕೆಲವು ಗ್ರಾಮಗಳಲ್ಲಿ ಬೆಳೆಯಲಾಗಿರುವ ಹಸಿ ಮೆಣಸಿನಕಾಯಿ ಬೆಳೆಗೆ ಮಳೆ ಅನುಕೂಲವಾಯಿತು. ಮೂರು ನಾಲ್ಕುದಿನ ಗಿಡಗಳಿಗೆ ನೀರು ಹಾಕುವ ಶ್ರಮ ತಪ್ಪಿತು. ಆದರೆ ಈ ವರ್ಷ ಹಸಿ ಮೆಣಸಿನಕಾಯಿ ಬೆಳೆದ ರೈತರ ಸಂಖ್ಯೆಯೇ ಕಡಿಮೆಯಾಗಿದೆ.`ಬಿಸಿಲ ಧಗೆಯಿಂದ ಸುಡುತ್ತಿರುವ ಭೂಮಿಗೆ ಈ ಮಳೆ ಸಾಲದು. ಕೆಲ ತೋಟಗಳಲ್ಲಿ ಮಾತ್ರ ಕಾಫಿ ಹೂ ಅರಳಿದೆ. ಒಂದೆರೆಡು ದಿನ ಬಿಡದೆ ಮಳೆಯಾದರೆ ಅಥವಾ ವಾರದ ನಂತರ ಉತ್ತಮ ಮಳೆಯಾದರೆ ಕಾಫಿ ಬೆಳೆ ಉಳಿದೀತು. ಮಳೆಯಾಗುತ್ತಿರುವ ಲಕ್ಷಣ ಗಮನಿಸಿದರೆ ಈ ಬಾರಿ ಕಾಫಿ ಬೆಳೆಗೆ ಹೊಡೆತ ಬಿದ್ದಂತೆ ಕಾಣುತ್ತದೆ~ ಎಂದು ಕೂಜಗೇರಿ ಗ್ರಾಮದ ಬೆಳೆಗಾರ ಕೆ.ಟಿ.ಹರೀಶ್ ಅಭಿಪ್ರಾಯಪಟ್ಟರು.ಕಳೆದ ವರ್ಷ ಈ ವೇಳೆಗೆ ಉತ್ತಮ ಮಳೆಯಾಗಿತ್ತು. ಕಾಫಿ  ಫಸಲು ಚೆನ್ನಾಗಿತ್ತು. ಬೆಳೆಗಾರರು ಉತ್ತಮ ಬೆಲೆಯನ್ನು ಪಡೆದಿದ್ದರು. ಆದರೆ, ಈ ವರ್ಷ ಹೂ ಅರಳುವ ಸಮಯದಲ್ಲೆ ವರುಣದೇವ ಮುನಿಸಿಕೊಂಡಂತೆ ತೋರುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.