ರಾಮನಗರ: ಕೆಲ ದಿನಗಳಿಂದ ಕಣ್ಮರೆಯಾಗಿದ್ದ ಬಿಡದಿ ಬಳಿಯ ಧ್ಯಾನಪೀಠ ಆಶ್ರಮದ ಪೀಠಾಧ್ಯಕ್ಷ ನಿತ್ಯಾನಂದ ಸ್ವಾಮೀಜಿ ಬುಧವಾರ ದಿಢೀರನೇ ಪ್ರತ್ಯಕ್ಷರಾಗಿದ್ದು, ಅವರನ್ನು ರಾಮನಗರ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.

ಬಿಡದಿ ಪೊಲೀಸ್ ಠಾಣೆಯಲ್ಲಿ ಇತ್ತೀಚೆಗೆ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶರಣಾಗಲು ಸ್ವಾಮೀಜಿ ಬುಧವಾರ ತಮ್ಮ ವಕೀಲರ ಜತೆ ರಾಮನಗರದ ಜೆಎಂಎಫ್ ನ್ಯಾಯಾಲಯಕ್ಕೆ ಆಗಮಿಸಿದ್ದರು. ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ ಅವರ ಅರ್ಜಿಯನ್ನು ಗುರುವಾರಕ್ಕೆ ಮುಂದೂಡಿತು. ಏತನ್ಮಧ್ಯೆ ಸ್ವಾಮೀಜಿ ನ್ಯಾಯಾಲಯದಿಂದ ಹೊರ ಬರುತ್ತಿದ್ದಂತೆಯೇ ಪೊಲೀಸರು ಅವರನ್ನು ತಮ್ಮ ವಶಕ್ಕೆ ತೆಗೆದುಕೊಂಡರು.

ನ್ಯಾಯಾಲಯದ ಹೊರಗೆ ಕಾಯುತ್ತಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರ್ವಾಲ್, ಡಿಎಸ್ಪಿ ಎಂ.ಜಿ.ರಾಮಕೃಷ್ಣಪ್ಪ, ಸಿಪಿಐಗಳಾದ ಚಿದಾನಂದ್, ಭಾಸ್ಕರ್ ಒಕ್ಕಲಿಗ ಅವರು ಸ್ವಾಮೀಜಿಯನ್ನು ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋದರು.

ರಾತ್ರಿಯಾದರೂ ಸ್ವಾಮೀಜಿಯನ್ನು ಎಲ್ಲಿಗೆ ಕರೆದುಕೊಂಡು ಹೋಗಿದ್ದಾರೆ ಎಂಬ ಮಾಹಿತಿ ದೊರೆಯಲಿಲ್ಲ. ಅಜ್ಞಾತ ಸ್ಥಳದಲ್ಲಿಯೇ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಗುರುವಾರ ಅವರನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಸಾರ್ವಜನಿಕರಿಂದ ದಾಂಧಲೆ: ನಿತ್ಯಾನಂದ ಸ್ವಾಮೀಜಿ ಹಠಾತ್ತನೆ ನ್ಯಾಯಾಲಯದ ಆವರಣದಲ್ಲಿ ಪ್ರತ್ಯಕ್ಷರಾಗುತ್ತಿದ್ದಂತೆ ನ್ಯಾಯಾಲಯದ ಆವರಣದಲ್ಲಿ ನೂರಾರು ಜನ ಜಮಾಯಿಸಿದರು. ಕೆಲವರು ಸ್ವಾಮೀಜಿ ವಿರುದ್ಧ ಘೋಷಣೆಗಳನ್ನು ಕೂಗಿ ಅವಾಚ್ಯ ಪದಗಳಿಂದ ನಿಂದಿಸಿದರು.

ಸ್ವಾಮೀಜಿಯ ಶಿಷ್ಯರು ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗಬೇಕಾಯಿತು. ಕೆಲ ಉದ್ರಿಕ್ತರು ಶಿಷ್ಯರೊಬ್ಬರ ಮೇಲೆ ಹಲ್ಲೆ ಮಾಡಿದರು. ಆ ನಂತರ ಪೊಲೀಸರು ರಕ್ಷಣೆಗೆ ಮುಂದಾದರು.

ನ್ಯಾಯಾಧೀಶರು ಗರಂ :  ನ್ಯಾಯಾಲಯದ ಆವರಣದಲ್ಲಿ ಸಾರ್ವಜನಿಕರು ದಾಂಧಲೆ ನಡೆಸುತ್ತಿರುವ ವಿಚಾರ ವಕೀಲರ ಮೂಲಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಂ.ರುದ್ರಮುನಿ ಅವರ ಗಮನಕ್ಕೆ ಬಂದಿತು. ಕೂಡಲೇ ಅವರು ಸ್ಥಳಕ್ಕೆ ಬಂದು ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ನ್ಯಾಯಾಲಯದ ಆವರಣದಲ್ಲಿ ಶಾಂತಿಯುತ ವಾತಾವರಣ ಕಾಯ್ದುಕೊಳ್ಳಬೇಕಾಗಿರುವುದು ಪೊಲೀಸರ ಕರ್ತವ್ಯ. ಈ ನಿಟ್ಟಿನಲ್ಲಿ ಲೋಪ ಎಸಗಬೇಡಿ ಎಂದು ಅವರು ಎಚ್ಚರಿಸಿದರು.

ನಿತ್ಯಾನಂದ ಸ್ವಾಮೀಜಿ ಗುರುವಾರ ನ್ಯಾಯಾಲಯಕ್ಕೆ ಹಾಜರಾಗುವ ಸಾಧ್ಯತೆ ಇರುವ ಕಾರಣ ನ್ಯಾಯಾಲಯದ ಆವರಣದಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸುವಂತೆ ಅವರು ಇದೇ ವೇಳೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.

ಮುಂದುವರೆದ ಶೋಧಕಾರ್ಯ: ಧ್ಯಾನಪೀಠ ಆಶ್ರಮದಲ್ಲಿ ಕಂದಾಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳಿಂದ ಬುಧವಾರವೂ ಶೋಧ ಕಾರ್ಯ ಮುಂದುವರೆಯಿತು. ಆಶ್ರಮದ ಪ್ರತಿ ಕೊಠಡಿಗಳನ್ನೂ ಪ್ರವೇಶಿಸಿ ಅಲ್ಲಿನ ದಾಖಲೆಗಳನ್ನು ತಂಡದ ಸದಸ್ಯರು ಪರಿಶೀಲಿಸಿ ಮಹಜರು ಮಾಡಿದರು. ಈ ಸಂದರ್ಭದಲ್ಲಿ ಕೆಲ ಮಹತ್ವದ ದಾಖಲೆಗಳು ದೊರೆತಿವೆ ಎಂದು ತಿಳಿದು ಬಂದಿದೆ.

ಆಶ್ರಮದಲ್ಲಿನ ಆಸ್ಪತ್ರೆ, ದೇವಾಲಯ, ಪ್ರಾರ್ಥನಾ ಮಂದಿರ ಸೇರಿದಂತೆ ಪ್ರತಿ ಕೊಠಡಿಯನ್ನು ತಂಡ ಶೋಧಿಸುತ್ತಿದೆ. ಆಶ್ರಮದಲ್ಲಿರುವ ಹಸು ಮತ್ತಿತರ ಪ್ರಾಣಿಗಳು, ಮರಗಳು, ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಬಗ್ಗೆಯೂ ಸಹಾ ತಂಡದವರು ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿವೆ.

ಆಶ್ರಮ ಶೋಧನಾ ಕಾರ್ಯದಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಕಚೇರಿಯ ಭೂ ದಾಖಲೆಗಳ ಉಪನಿರ್ದೇಶಕ ಮರಿಸ್ವಾಮಿ ಮಾತನಾಡಿ, `ಧ್ಯಾನಪೀಠ ಆಶ್ರಮವು ಕಲ್ಲುಗೋಪಳ್ಳಿ ಸರ್ವೇ ನಂ 21ರಲ್ಲಿದೆ.
ಇಲ್ಲಿನ ಸುಮಾರು 22ಎಕರೆ ಪ್ರದೇಶ ನಿತ್ಯಾನಂದ ಸ್ವಾಮೀಜಿಯ ಹೆಸರಿನಲ್ಲಿ ನೋಂದಣಿಯಾಗಿದೆ. ಆಶ್ರಮದ ಸುತ್ತ ಇದೀಗ ಕಾಂಪೌಂಡ್ ನಿರ್ಮಾಣವಾಗಿದೆ.

ಈ ಪ್ರದೇಶವನ್ನು ಮತ್ತೊಮ್ಮೆ ಸರ್ವೇ ಮಾಡಿ ವರದಿ ನೀಡಲು ಸರ್ಕಾರ ಆದೇಶ ನೀಡಿರುವುದರಿಂದ ಸಂಪೂರ್ಣ ಸರ್ವೇ ಕಾರ್ಯ ನಡೆಸಿ ದಾಖಲೆಗಳನ್ನು ಪರಿಶೀಲಿಸಿ ಮೇಲಾಧಿಕಾರಿಗಳಿಗೆ ವರದಿ ಒಪ್ಪಿಸಲಾಗುವುದು~ ಎಂದರು. ಶೋಧನಾ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಆಶ್ರಮಕ್ಕೆ ಸಾರ್ವಜನಿಕರು, ಭಕ್ತರು ಹಾಗೂ ಮಾಧ್ಯಮದವರ ಪ್ರವೇಶವನ್ನು ನಿಷೇಧಿಸಲಾಗಿತ್ತು.

`ಬಂಧನಕ್ಕೊಳಗಾಗಿಲ್ಲ~
`ನಿತ್ಯಾನಂದ ಸ್ವಾಮೀಜಿ ಬಂಧನಕ್ಕೆ ಒಳಗಾಗಿಲ್ಲ. ಪೊಲೀಸರು ಅವರಿಗೆ ಸೂಕ್ತ ರಕ್ಷಣೆ ನೀಡುತ್ತಿದ್ದಾರೆ~ ಎಂದು ಧ್ಯಾನಪೀಠ ಆಶ್ರಮದ ಪ್ರಕಟಣೆ ತಿಳಿಸಿದೆ.

ನ್ಯಾಯಾಲಯದ ಆವರಣದಲ್ಲಿ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಇದ್ದುದರಿಂದ ಪೊಲೀಸರು ಸ್ವಾಮೀಜಿಯ ರಕ್ಷಣೆಯ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಸೂಕ್ತ ಸಂದರ್ಭದಲ್ಲಿ ಸ್ವಾಮೀಜಿಯನ್ನು ಅವರು ಬಿಡುಗಡೆಗೊಳಿಸುತ್ತಾರೆ ಎಂದು ಪ್ರಕಟಣೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.