ಮಂಗಳವಾರ, ಏಪ್ರಿಲ್ 13, 2021
23 °C

ಶಹಾಪುರ: ವಾರದಿಂದ ನೀರು ಪೂರೈಕೆ ಸ್ಥಗಿತ...!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಹಾಪುರ: ಪಟ್ಟಣದ ಜನತೆಯ ಪಾಲಿಗೆ ಕುಡಿಯುವ ನೀರಿನ ಜೀವಸೆಲೆಯಾಗಿದ್ದು ಫಿಲ್ಟರ್‌ಬೆಡ್ ಬಳಿಯ ಕೆರೆಯಂಗಳದಲ್ಲಿ ಸಂಗ್ರಹಿಸಿಡಲಾಗಿದ್ದ ನೀರು ಸಂಪೂರ್ಣವಾಗಿ ಖಾಲಿಯಾಗಿದೆ.ಕಳೆದ ಒಂದು ವಾರದಿಂದ ಕೆಲ ವಾರ್ಡ್‌ಗಳಿಗೆ ಪುರಸಭೆಯೂ ನೀರು ಪೂರೈಕೆಯನ್ನು ಸ್ಥಗಿತಗೊಳಿಸಿದ್ದು  ಅದರಲ್ಲಿ ವಾರ್ಡ್‌ನಂಬರ 10,11ಮತ್ತು12ರಲ್ಲಿ ಮತ್ತಷ್ಟು ಸಮಸ್ಯೆ ಬಿಗಡಾಯಿಸಿದೆ. ಟ್ಯಾಂಕರ್ ಮೂಲಕವಾದರೂ ನೀರು ಸರಬರಾಜು ಮಾಡಬೇಕೆಂದು ಬಡಾವಣೆಯ ಜನತೆಯು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.ಗುತ್ತಿಪೇಟ, ಅಸರಮೊಹಲ್ಲಾ, ಗಂಗಾನಗರ ಬಡಾವಣೆಗಳಲ್ಲಿ ಪುರಸಭೆ ಕೊರೆಸಿದ್ದ ಬೊರವೆಲ್ ಕೆಟ್ಟುನಿಂತಿವೆ. ರಿಪೇರಿ ಕೆಲಸವನ್ನು ಎಂದೋ ಮರೆತಂತೆ ಕೆಲಸವನ್ನು ಪುರಸಭೆ ಸಿಬ್ಬಂದಿ ನಿರ್ವಹಿಸುತ್ತಿದ್ದಾರೆ. ಪುರಸಭೆ ಆಡಳಿತವು ಸಂಪೂರ್ಣವಾಗಿ ನಿಷ್ಕೃೀಯವಾಗಿದೆ.ಕುಡಿಯುವ ನೀರಿನ ಸಮಸ್ಯೆ ಬಗ್ಗೆ ದೂರು ಸಲ್ಲಿಸಲು ಹೋದರೆ ನಮಗೆ ಉಲ್ಟಾ ಗದರಿಸಿ ಸುಳ್ಳು ಹೇಳುತ್ತಿದ್ದಾರಿ ಎಂದು ಹೋರಹಾಕುತ್ತಿದ್ದಾರೆ. ಯಾರ ಮುಂದೆ ನಮ್ಮ ಅಳಲು ತೋಡಿಕೊಳ್ಳಬೇಕೆಂದು ನೀರಿನ ಬವಣೆಯನ್ನು ಅನುಭವಿಸುತ್ತಿರುವ ಜನತೆಯ ಪ್ರಶ್ನೆಯಿದು.ಸಂಗ್ರಹಿಸಲಾಗಿದ್ದ ಕೆರೆಯ ನೀರು ಖಾಲಿಯಾಗಿದೆ. ಕೆರೆಗೆ ಕಾಲುವೆ ಮೂಲಕ ನೀರು ಬರಬೇಕೆಂದರೆ ಕನಿಷ್ಠ ಐದಾರು ದಿನಗಳು ಬೇಕು. ಅಲ್ಲಿಯವರೆಗೆ ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕವಾದರು ನೀರು ಸರಬರಾಜು ಮಾಡಿ ಪುಣ್ಯಕಟ್ಟಿಕೊಳ್ಳಿ ಎಂದು ಇಲ್ಲದಿದ್ದರೆ ಜನತೆಯ ಶಾಪ ತಟ್ಟುತ್ತದೆ ಎಂದು ಆಕ್ರೋಶಗೊಂಡ ನಾಗರಿಕರು ಪುರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ.ಕೆಲ ಬಡಾವಣೆಗಳಿಗೆ ಕೊಳವೆ ಬಾವಿಯ ಮೂಲಕ ಪೂರೈಕೆ ಮಾಡಲಾಗುತ್ತಿದ್ದರು ಕೂಡಾ ಸಮರ್ಪಕವಾಗಿ ನೀರು ದೊರೆಯುತ್ತಿಲ್ಲ. ಬೊರವೆಲ್ ಸುತ್ತಮುತ್ತಲಿನ ಜನತೆ ಮಾತ್ರ ನೀರು ಪಡೆದುಕೊಳ್ಳುತ್ತಿದ್ದಾರೆ. ತುಸು ದೂರದ ಮನೆಗಳಿಗೆ ನೀರು ದೊರೆಯುತ್ತಿಲ್ಲವೆಂದು ನೊಂದ ಜನತೆ ದೂರಿದ್ದಾರೆ.ಪುರಸಭೆಯ ಆಡಳಿತವು ಕೆಲ ವ್ಯಕ್ತಿಗಳ ಕೈಯಲ್ಲಿ ಸಿಕ್ಕು ಜಡ್ಡುಗಟ್ಟಿ ಹೋಗಿದೆ. ಅಭಿವೃದ್ದಿ ಕಾಮಗಾರಿಗಳು ಮಾಯವಾಗಿವೆ.ಪುರಸಭೆ ಅಧ್ಯಕ್ಷರನ್ನು ಬದಲಾವಣೆ ಮಾಡಿದ್ದೆ ಸಾಧನೆಯಾಗಿದೆ ವಿನಃ ಜನಪರ ಕೆಲಸಗಳನ್ನು ಎಂದೂ ಕೈಗೆತ್ತಿಕೊಂಡಿಲ್ಲವೆಂದು ರೈತ ಮುಖಂಡ ಖಾಜಾಸಾಬ ನದಾಫ್ ಆರೋಪಿಸಿದ್ದಾರೆ.ಕುಡಿಯುವ ನೀರಿನ ಸಮಸ್ಯೆಯನ್ನು ಕೂಡಲೆ ಬಗೆಹರಿಸಬೇಕು ಇಲ್ಲದಿದ್ದರೆ ಪುರಸಭೆಗೆ ಖಾಲಿಕೊಡಗಳ ಮೂಲಕ ಆಗಮಿಸಿ ಪ್ರತಿಭಟನೆ ನಡೆಸಲಾಗುವುದೆಂದು ಪಟ್ಟಣದ ಜನತೆಯು ಎಚ್ಚರಿಕೆ ನೀಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.