ಬೆಂಗಳೂರು: ಫೋರ್ಸ್ ಇಂಡಿಯಾ ಇದು ನಮ್ಮ ನಾಡಿನ ತಂಡ. ಆದ್ದರಿಂದ ಇದೇ ತಂಡದ ಚಾಲಕರು ವಿಜಯ ವೇದಿಕೆಯಲ್ಲಿ ಕಾಣಿಸಬೇಕು. ಶಾಂಪೇನ್ ಶವರ್ ಅದೃಷ್ಟವೂ ಸಿಗಬೇಕು...!

-ಹೀಗೆ ಹೇಳಿದ್ದು `ಸ್ಪೀಡ್ ಗಾಡ್~ ಎಂದೇ ಖ್ಯಾತಿ ಪಡೆದಿರುವ ಕರ್ನಾಟಕದ ಯುವ ರೇಸಿಂಗ್ ಕಾರ್ ಚಾಲಕ ನಿಖಿಲ್ ಕಶ್ಯಪ್. ಇತ್ತೀಚೆಗಷ್ಟೇ `ಫೋರ್ಸ್ ಇಂಡಿಯಾ~ದ ಹೊಸ ತಲೆಮಾರಿನ ಚಾಲಕರ ಪಟ್ಟಿಗೆ ಸೇರಿ, ಇಂಗ್ಲೆಂಡ್ನಲ್ಲಿ ತರಬೇತಿ ಪಡೆದು ಬಂದಿರುವ ಅಪ್ಪಟ ಕನ್ನಡದ ಹುಡುಗನಿಗೆ ಭಾರತದಲ್ಲಿ ಫಾರ್ಮುಲಾ ಒನ್ ಗ್ರ್ಯಾನ್ ಪ್ರಿ ಮೋಟಾರ್ ರೇಸ್ ನಡೆಯುತ್ತಿರುವುದು ಅಪಾರ ಸಂತಸ ನೀಡಿದೆ.

ಫೋರ್ಸ್ ಇಂಡಿಯಾ ತಂಡದ ಆಡ್ರಿಯನ್ ಸುಟಿಲ್ ಅವರಿಂದ ಕೂಡ ರೇಸಿಂಗ್ ತಂತ್ರಗಳ ಕುರಿತು ಮಾರ್ಗದರ್ಶನ ಪಡೆದಿರುವ ನಿಖಿಲ್ ಭಾರತದ ಭವಿಷ್ಯದ ಫಾರ್ಮುಲಾ ಒನ್ ಚಾಲಕ ಎಂದೇ ಗುರುತಿಸಿಕೊಂಡಿದ್ದಾನೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಜೂನಿಯರ್ ವಿಭಾಗದಲ್ಲಿ ಸಾಕಷ್ಟು `ಕಾರ್ಟಿಂಗ್~ ರೇಸ್ಗಳಲ್ಲಿ ಯಶಸ್ಸು ಪಡೆದಿರುವ ಈ ಯುವಕ ಎಫ್-1 ಹೊಸ್ತಿಲಲ್ಲಿ ನಿಂತಿದ್ದಾನೆ.

ಭಾರತವು ರೇಸಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ರೇಸರ್ ನಿಖಿಲ್ ಮನದಾಳದಿಂದ `ಪ್ರಜಾವಾಣಿ~ ಮುಂದೆ ಆಡಿದ ಒಂದಿಷ್ಟು ಮಾತುಗಳು ಇಲ್ಲಿವೆ.

* ಯಾವ ತಂಡಕ್ಕೆ ಬೆಂಬಲ; ಯಾರು ಗೆಲ್ಲಬೇಕು?
ಬಾಲ್ಯದಿಂದಲೂ ನಾನು ಮೆಚ್ಚಿಕೊಂಡಿದ್ದು ಫೆರಾರಿ ತಂಡವನ್ನು. ಆದರೆ ಫಾರ್ಮುಲಾ ಒನ್ ಇಂಡಿಯಾದಲ್ಲಿಫೋರ್ಸ್ ಇಂಡಿಯಾ ತಂಡದ ಚಾಲಕರೇ ಗೆಲ್ಲಬೇಕು ಎನ್ನುವುದು ಆಶಯ. ಸ್ಪರ್ಧೆ ಪ್ರಬಲ. ಕಷ್ಟದ್ದೂ ಆಗಿದೆ. ಆದರೆ ಮನಸ್ಸು ಬಯಸುವುದು ಮಾತ್ರ ನಮ್ಮ ದೇಶದ ತಂಡಕ್ಕೆ ಯಶಸ್ಸು ಸಿಗಬೇಕೆಂದು. ಅದಕ್ಕಾಗಿ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ.

* ಬುದ್ಧ ಇಂಟರ್ನ್ಯಾಷನಲ್ ಟ್ರ್ಯಾಕ್ ಹೇಗಿದೆ?
ಅದ್ಭುತ! ಅದಕ್ಕಿಂತ ಹೆಚ್ಚು ಹೇಳುವುದು ಸಾಧ್ಯವಿಲ್ಲ. ವಿಶ್ವದ ಎಲ್ಲ ಉನ್ನತ ಮಟ್ಟದ ಟ್ರ್ಯಾಕ್ಗಳ ವಿಶೇಷ ಅಂಶಗಳನ್ನೆಲ್ಲಾ ಇಲ್ಲಿ ಅಳವಡಿಸಿಕೊಳ್ಳಲಾಗಿದೆ. ಗಂಟೆಗೆ ಮುನ್ನೂರೈವತ್ತು ಕಿಲೋ ಮೀಟರ್ ವೇಗದಲ್ಲಿ ಕೂಡ ಇಲ್ಲಿ ಕಾರ್ ಓಡಿಸುವುದು ಸಾಧ್ಯ. ಚಾಲಕರಿಗೆ ಸವಾಲಾಗುವಂಥ ಕರ್ವ್ಗಳು ಕೂಡ ಇವೆ.

* ರೇಸಿಂಗ್ ಟ್ರ್ಯಾಕ್ ಸಿದ್ಧವಾಗಿರುವುದರಿಂದ ಭವಿಷ್ಯದಲ್ಲಿ ಏನು ಪ್ರಯೋಜನ?
ದೇಶದಲ್ಲಿ ರೇಸಿಂಗ್ ಸ್ಪರ್ಧಾ ಕ್ಷೇತ್ರವು ಉತ್ಸಾಹದಿಂದ ಬೆಳೆಯುವುದಕ್ಕೆ ಇದೇ ಮುನ್ನುಡಿ. ಟ್ರ್ಯಾಕ್ ಲಭ್ಯ ಇರುವುದರಿಂದ ನಮ್ಮಲ್ಲಿ ಇನ್ನು ಮುಂದೆ ವಿವಿಧ ಹಂತದ ರೇಸಿಂಗ್ ಸ್ಪರ್ಧೆಗಳು ನಡೆಯಬಹುದು. ಅದರಿಂದ ನಮ್ಮಲ್ಲಿನ ಚಾಲಕರಿಗೆ ಹೆಚ್ಚಿನ ಅವಕಾಶ ಸಿಕ್ಕಂತಾಗುತ್ತದೆ.

* ಕೆಳ ಮಧ್ಯಮ ವರ್ಗದವರಿಗೆ ಸಿಗುವ ಅವಕಾಶ?
ನನ್ನನ್ನೇ ಉದಾಹರಣೆ ಎಂದುಕೊಳ್ಳಿ. ಫೋರ್ಸ್ ಇಂಡಿಯಾ ತಂಡದ ಚಾಲಕ ಆಗಬೇಕು ಎನ್ನುವ ಮಟ್ಟಕ್ಕೆ ಬೆಳೆಯಲು ದೇಶದಲ್ಲಿ ಇಂಥದೊಂದು ರೇಸ್ ನಡೆಯುತ್ತಿರುವುದೇ ಕಾರಣ. ಇದೇ ನೆಪದಲ್ಲಿ ಯುವ ರೇಸರ್ಗಳ ಶೋಧ ನಡೆಯಿತು. ಇಂಗೆಂ್ಲಡ್ಗೆ ಹೋಗಿ ತರಬೇತಿ ಪಡೆಯುವ ಅವಕಾಶವೂ ಸಿಕ್ಕಿದು. ಎಫ್-1 ಆತಿಥ್ಯ ಸಿಗದೇ ಇದ್ದರೆ ಇಂಥದೊಂದು ಅವಕಾಶ ನನಗೂ ಸಿಗುತ್ತಿರಲಿಲ್ಲ.

* ಭಾರತದಲ್ಲಿ ರೇಸಿಂಗ್ ಕಲ್ಚರ್?
ಸಾಮಾನ್ಯವಾಗಿ ಎಲರ್ಲೂ ಟೆಲಿವಿಷನ್ನಲ್ಲಿ ಸಿಂಗ್ನ ರೋಮಾಂಚನ ಎಂಥದೆಂದು ನೋಡಿರುತ್ತಾರೆ. ಆದರೆ ಒಬ್ಬ ಚಾಲಕನಾಗಿ ಬೆಳೆಯುವುದು ಸವಾಲು. ಆದರೆ ಇತ್ತೀಚೆಗೆ ಸಾಕಷ್ಟು ಪ್ರೋತ್ಸಾಹ ಸಿಗುತ್ತಿದೆ. ನಮ್ಮಲ್ಲಿಯೇ ಅಪಾರ ಸಂಖ್ಯೆಯಲ್ಲಿ ಮೋಟಾರ್ ರೇಸಿಂಗ್ ಕ್ಲಬ್ಗಳು ಹುಟ್ಟಿಕೊಳ್ಳಬಹುದು. ಕ್ರಿಕೆಟ್ ಕ್ರೀಡಾಂಗಣಗಳಂತೆ ದೇಶದ ಪ್ರತಿಯೊಂದು ಮಹಾನಗರದಲ್ಲಿ ರೇಸಿಂಗ್ ಟ್ರ್ಯಾಕ್ ಕೂಡ ನಿರ್ಮಾಣ ಆಗಬಹುದು.

* ಎಫ್-1 ಘೋಷವಾಕ್ಯ?
ವೇಗ...ವೇಗ...! ಅದರ ಹೊರತಾಗಿ ಬೇರೆ ಏನೂ ಇಲ.್ಲ ಅಪಾಯ ಸಾಧ್ಯತೆಯೂ ಇದೆ. ವೇಗ ಎನ್ನುವುದೇ ಒಂದು ಸವಾಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.