ಬೆಂಗಳೂರು: ನಗರದ ಹೊರ ವಲಯದ ನೈಸ್ ರಸ್ತೆಯ ಹಂದರಹಳ್ಳಿ ಸೇತುವೆ ಬಳಿ ಗುರುವಾರ ಬೆಳಿಗ್ಗೆ ಸಂಭವಿಸಿದ ಕಾರು ಅಪಘಾತದಲ್ಲಿ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗಳಾದ ಸುಷ್ಮಿತಾ ಪಾಟೀಲ್ (18) ಸಾವನ್ನಪ್ಪಿದ್ದಾರೆ.

ಮೈಸೂರು ರಸ್ತೆ ಬಳಿ ಇರುವ ಆರ್. ವಿ.ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ (ವಾಸ್ತುಶಿಲ್ಪ ವಿಭಾಗ) ಎರಡನೇ ಸೆಮಿಸ್ಟರ್ ಓದುತ್ತಿದ್ದ ಅವರು, ಸಹಪಾಠಿಗಳಾದ ಅಖಿಲ್, ನಮ್ರತಾ ಮತ್ತು ಅನಿರುದ್ದ್ ಎಂಬುವರ ಜತೆ ಕಾರಿನಲ್ಲಿ ಕಾಲೇಜಿಗೆ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ ಎಂದು ತಾವರೆಕೆರೆ ಪೊಲೀಸರು ತಿಳಿಸಿದ್ದಾರೆ.

ಘಟನೆಯಲ್ಲಿ ಅಖಿಲ್, ನಮ್ರತಾ ಮತ್ತು ಅನಿರುದ್ದ್ ಸಹ ಗಾಯಗೊಂಡಿದ್ದಾರೆ. ಅವರೆಲ್ಲರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಸುಷ್ಮಿತಾ, ಶಾಮನೂರು ಶಿವಶಂಕರಪ್ಪ ಅವರ ದ್ವಿತೀಯ ಪುತ್ರಿ ಸುಧಾ ಪಾಟೀಲ್ ಅವರ ಮಗಳು. ನಗರದ ಆರ್ಎಂವಿ ಬಡಾವಣೆಯ ಎಂಟನೇ ಅಡ್ಡರಸ್ತೆಯಲ್ಲಿ ನೆಲೆಸಿರುವ ಸುಧಾ ಮತ್ತು ರಾಜೇಂದ್ರ ಪಾಟೀಲ್ ದಂಪತಿಗೆ ಸುಷ್ಮಿತಾ ಹಾಗೂ ಸುಪ್ರಿಯಾ ಪಾಟೀಲ್ ಎಂಬ ಇಬ್ಬರು ಹೆಣ್ಣು ಮಕ್ಕಳು. ಮಾಜಿ ಸಂಸದ ಆರ್. ಎಸ್. ಪಾಟೀಲ್ ಅವರ ಪುತ್ರರಾದ ರಾಜೇಂದ್ರ ಪಾಟೀಲ್ ಉದ್ಯಮಿಯಾಗಿದ್ದಾರೆ.

ಅಪಘಾತ ಸಂಭವಿಸಿದ್ದು ಹೇಗೆ?: `ಕಾರು ಚಾಲನೆ ಮಾಡುತ್ತಿದ್ದ ಅಖಿಲ್, ಮುಂದೆ ಹೋಗುತ್ತಿದ್ದ ಲಾರಿಯನ್ನು ಬಲ ಭಾಗದಿಂದ ಹಿಂದಿಕ್ಕಲು ಯತ್ನಿಸಿದರು. ಈ ವೇಳೆ ಲಾರಿ ಚಾಲಕ ಬಲ ಭಾಗಕ್ಕೆ ವಾಹನ ಚಾಲನೆ ಮಾಡಿದ. ಅಖಿಲ್, ಲಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಉದ್ದೇಶದಿಂದ ಕಾರನ್ನು ಎಡ ಭಾಗಕ್ಕೆ ತಿರುಗಿಸಲು ಯತ್ನಿಸಿದರು.

ಅತಿ ವೇಗವಾಗಿ ಚಲಿಸುತ್ತಿದ್ದ ಕಾರು ಅವರ ನಿಯಂತ್ರಣಕ್ಕೆ ಸಿಗದೆ ಅಡ್ಡಾದಿಡ್ಡಿ ಚಲಿಸಿ ರಸ್ತೆ ಬದಿಯ ಮಣ್ಣಿನ ದಿಬ್ಬಕ್ಕೆ ಡಿಕ್ಕಿ ಹೊಡೆದು ಮೋರಿಯೊಂದಕ್ಕೆ ಮಗುಚಿ ಬಿದ್ದಿತು. ಹಿಂದಿನ ಸೀಟಿನಲ್ಲಿ ಕುಳಿತಿದ್ದ ಸುಷ್ಮಿತಾ ತಲೆಗೆ ತೀವ್ರ ಪೆಟ್ಟಾಗಿ ಅಸ್ವಸ್ಥಗೊಂಡರು. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟರು~ ಎಂದು ಎಸ್ಐ ಬಿ.ಎಸ್.ಅಶೋಕ್ `ಪ್ರಜಾವಾಣಿ~ಗೆ ತಿಳಿಸಿದರು.

ಪೊಲೀಸರು ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬ ಸದಸ್ಯರಿಗೆ ಒಪ್ಪಿಸಿದರು. ನಂತರ ಕುಟುಂಬ ಸದಸ್ಯರು ಶವವನ್ನು ಆರ್ಎಂವಿ ಬಡಾವಣೆಯ ನಿವಾಸಕ್ಕೆ ಕೊಂಡೊಯ್ದರು. ಆಸ್ಪತ್ರೆ ಮತ್ತು ಮನೆಯ ಬಳಿ ಜಮಾಯಿಸಿದ್ದ ಕುಟುಂಬ ಸದಸ್ಯರು ಹಾಗೂ ಸುಷ್ಮಿತಾ ಸಹಪಾಠಿಗಳು ರೋದಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.