ಭಾನುವಾರ, ಆಗಸ್ಟ್ 9, 2020
21 °C

ಶಾಲಾ ಬಂದ್ ವಾಪಸ್ ಪಡೆದ ಕುಸ್ಮಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಾಲಾ ಬಂದ್ ವಾಪಸ್ ಪಡೆದ ಕುಸ್ಮಾ

ಬೆಂಗಳೂರು: ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ (ಆರ್‌ಟಿಇ) ಅನುಷ್ಠಾನದ ಬಗ್ಗೆ ಇರುವ ಗೊಂದಲಗಳನ್ನು ನಿವಾರಿಸಬೇಕೆಂಬುದು ರಾಜ್ಯ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘ (ಕುಸ್ಮಾ) ಸೋಮವಾರದಿಂದ ನಡೆಸುತ್ತಿದ್ದ ಶಾಲಾ ಬಂದ್ ಅನ್ನು ಬುಧವಾರ ವಾಪಸ್ ಪಡೆಯಿತು.`ವಿದ್ಯಾರ್ಥಿಗಳಿಗೆ ಅನನುಕೂಲವಾಗಬಾರದೆಂಬ ಉದ್ದೇಶದಿಂದ ಬಂದ್ ಹಿಂಪಡೆಯಲಾಗಿದೆ. ಆದರೆ, ಕಾಯ್ದೆಯ ಬಗ್ಗೆ ಸರ್ಕಾರ ತನ್ನ ನಿಲುವನ್ನು ಸ್ಪಷ್ಟ ಪಡಿಸುವವರೆಗೂ ಹೋರಾಟ ಮುಂದುವರಿಯಲಿದೆ. ಹೋರಾಟದ ರೂಪುರೇಷೆ ಬಗ್ಗೆ ಸದ್ಯದಲ್ಲೇ ಕುಸ್ಮಾ ಸದಸ್ಯರ ಸಭೆ ಕರೆದು ಚರ್ಚಿಸಲಾಗುವುದು. ಸರ್ಕಾರದ ನೀತಿಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು~ ಎಂದು ಕುಸ್ಮಾ ಕಾರ್ಯದರ್ಶಿ ಎ.ಮರಿಯಪ್ಪ `ಪ್ರಜಾವಾಣಿ~ಗೆ ತಿಳಿಸಿದರು.ಶರ್ಮ ರಾಜೀನಾಮೆ ಅಂಗೀಕಾರ:  `ತಮ್ಮ ಗೊಂದಲದ ಹೇಳಿಕೆಯ ಬಗ್ಗೆ ಬೇಸರಗೊಂಡು ಕುಸ್ಮಾ ಅಧ್ಯಕ್ಷ ಸ್ಥಾನಕ್ಕೆ ಜಿ.ಎಸ್. ಶರ್ಮ ಮಂಗಳವಾರ ನೀಡಿದ್ದ ರಾಜೀನಾಮೆಯನ್ನು ಬುಧವಾರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರ ಮುಂದಿಟ್ಟು ಅಂಗೀಕರಿಸಲಾಗಿದೆ. ಸಂಘದ ಮುಂದಿನ ಅಧ್ಯಕ್ಷರ ಆಯ್ಕೆಯ ಬಗ್ಗೆ ಸದ್ಯದಲ್ಲೇ ಸಭೆ ನಡೆಸಲಾಗುವುದು~ ಎಂದು ಅವರು ಹೇಳಿದರು.ಶರ್ಮ ವಿರುದ್ಧ ದೂರು : `ಬಡ ಮಕ್ಕಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಕುಸ್ಮಾದ ಮಾಜಿ ಅಧ್ಯಕ್ಷ ಜಿ.ಎಸ್.ಶರ್ಮ ಅವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜಾತಿ ನಿಂದನೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ಅವರನ್ನು ಬಂಧಿಸಬೇಕು~ ಎಂದು ದೇವನಹಳ್ಳಿ ತಾಲ್ಲೂಕಿನ ಚೌಡನಹಳ್ಳಿಯ ದಲಿತ ಮುಖಂಡ ಎಂ.ಲೋಕೇಶ್ ಎಂಬುವರು ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.`ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಾಯ್ದೆ 1999, ಅನುಬಂಧ 9 ಹಾಗೂ ಭಾರತೀಯ ದಂಡ ಸಂಹಿತೆ 153 ಎ ಕಲಂನ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ~ ಎಂದು ದೇವನಹಳ್ಳಿ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.