ಪುಟ್ಟ ಮಕ್ಕಳೆಲ್ಲ ತರಗತಿಯಲ್ಲಿ ಕುಳಿತು ಪಾಠ ಕೇಳುತ್ತಾ, ಹೊಸ ಪುಸ್ತಕ, ಬ್ಯಾಗು, ಯೂನಿಫಾರ್ಮ್, ಪೆನ್ನುಗಳ ಜೊತೆ ಖುಷಿ ಖುಷಿಯಾಗಿದ್ದರೆ ಹೊರಗೆ ಬಣ್ಣದ ಅಂಗಿ ತೊಟ್ಟ ಹುಡುಗಿಯೊಬ್ಬಳು ಮಕ್ಕಳು ಹೊರ ಬರುವುದನ್ನೇ ಕಾಯುತ್ತಿದ್ದಳು. ಊರ ಜಾತ್ರೆಯೆಲ್ಲ ಸುತ್ತಿ ಸುಳಿದಾಡಿದ ಆಕೆ ಈಗ ಬಂದಿದ್ದು ಶಾಲೆಯ ಗೇಟಿನ ಬಳಿ.

ಬಣ್ಣದ ಜರಿಲಂಗ, ಕಿವಿಗೆ ನೇತಾಡುವ ಲೋಲಾಕು, ಕೈ ತುಂಬ ಬಳೆ, ಹಣೆಗೆ ಮಿನುಗುವ ಬೊಟ್ಟು, ಮೂಗಿಗೆ ಹೊಳೆಯುವ ನತ್ತು. ಈ ಹುಡುಗಿ `ಯೂನಿಫಾರ್ಮ್ ತೊಟ್ಟ ಮಕ್ಕಳ ಹೊಟ್ಟೆ ಉರಿಸಲೆಂದೇ ಬಂದಿದ್ದಾಳೆ' ಎಂದುಕೊಂಡರೆ ತಪ್ಪು. ಆಕೆ ಮಕ್ಕಳಿಗೆ ಬಣ್ಣದ ಮಿಠಾಯಿ ಹಂಚಲು ಬಂದಿದ್ದಳು. ಅವಳೇ ಬೊಂಬಾಯಿ ಮಿಠಾಯಿ ಹುಡುಗಿ.

ಮಿಠಾಯಿ ಎಂದ ತಕ್ಷಣ ಊರ ಜಾತ್ರೆ ನೆನಪಾಗುತ್ತದೆ. ಅದರಲ್ಲೂ ಬೊಂಬಾಯಿ ಮಿಠಾಯಿ ಗೊಂಬೆ ನೋಡುವುದೇ ಚಂದ. ಬಣ್ಣದ ಅಂಗಿ ತೊಟ್ಟು ಅಲಂಕಾರ ಮಾಡಿದ ಮುದ್ದಾದ ಹುಡುಗಿ ಗೊಂಬೆಯನ್ನು ಮಿಠಾಯಿ ಕೋಲಿಗೆ ಸಿಕ್ಕಿಸಿ ಬಹುದೂರದವರೆಗೂ ಕಾಣುವಂತೆ ಮಾಡಿ ಮಕ್ಕಳನ್ನು ಆಕರ್ಷಿಸುವ ಪರಿ ನಿಜಕ್ಕೂ ಖುಷಿ ನೀಡುತ್ತದೆ. ಮಿಠಾಯಿವಾಲಾ ನಗರದ ಕೆಲವು ಶಾಲೆಗಳ ಬಳಿ ತನ್ನ ಗೊಂಬೆ ಹುಡುಗಿಯ ಜೊತೆ ನಿಂತು ಮಕ್ಕಳು ಹೊರ ಬರುವುದನ್ನೇ ಕಾದು ಕುಳಿತಿರುವುದು ನೋಡಿದಾಗ ಜಾತ್ರೆಯ ನೆನಪು ಮರುಕಳಿಸುವಂತೆ ಮಾಡುತ್ತಿದೆ.

ರಾಜಾಜಿನಗರದ ಒಂದನೇ ಮುಖ್ಯರಸ್ತೆಯಲ್ಲಿರುವ ಜಗದ್ಗುರು ರೇಣುಕಾಚಾರ್ಯ ಹೈಸ್ಕೂಲಿನ ಮುಂದೆ ಬಣ್ಣದ ಮಿಠಾಯಿ ಹಂಚಲು ಕಾಯುತ್ತಿದ್ದ ಮುರುಗೇಶ್ ಕೊಳ್ಳೇಗಾಲದ ಮಲೆ ಮಹದೇಶ್ವರ ಬೆಟ್ಟದ ಊಗ್ಯ ಹಳ್ಳಿಯವರು. ಸುಮಾರು 24 ವರ್ಷಗಳಿಂದ ಬೆಂಗಳೂರಿನ ಸುತ್ತಮುತ್ತ ಮಿಠಾಯಿ ವ್ಯಾಪಾರ ಮಾಡಿಯೇ ಬದುಕುತ್ತಿದ್ದಾರೆ. ಚಾಮರಾಜಪೇಟೆಯಲ್ಲಿ ವಾಸವಾಗಿರುವ ಇವರ ಅಜ್ಜನ ಕಾಲದಿಂದಲೂ ಇದೇ ಕಸುಬು ಮುಂದುವರಿದಿದೆಯಂತೆ.

ನಗರದ ಕೋರಮಂಗಲ, ಹೊಸಕೋಟೆ, ಹೊಸೂರು ರಸ್ತೆ, ದಾಸರಹಳ್ಳಿ ಹೀಗೆ ಅನೇಕ ಕಡೆಗಳಲ್ಲಿ ವ್ಯಾಪಾರ ಮಾಡುತ್ತಾರೆ. ಲಾಲ್ಬಾಗ್ ಫಲಪುಷ್ಪ ಪ್ರದರ್ಶನ ಮತ್ತಿತರ ಜನ ಸೇರುವ ಸಂದರ್ಭಗಳು ಸೃಷ್ಟಿಯಾದರೆ ಅಲ್ಲೆಲ್ಲಾ ಆಕರ್ಷಣೆಯ ಕೇಂದ್ರವಾಗುತ್ತಾರೆ. ಗೊಂಬೆಯ ಕೈಯಲ್ಲಿ ತಾಳಗಳಿರುತ್ತವೆ. ಅದರ ಗುಂಡಿ ಒತ್ತಿದೆ ಸಾಕು ಎರಡು ತಾಳ ಸೇರಿ ಸದ್ದಾಗುತ್ತದೆ. ಮಿಠಾಯಿ ಮಾರಬೇಕಾದರೆ ಅವರು ಮಾಡಿಕೊಳ್ಳುವ ಇಂತಹ ಪುಟ್ಟಪುಟ್ಟ ವ್ಯವಸ್ಥೆಗಳೇ ಹೆಚ್ಚು ಆಸಕ್ತಿಕರವೆನಿಸುತ್ತದೆ.

ಬೊಂಬಾಯಿ ಮಿಠಾಯಿ ಮಾರಾಟದ ವೈಖರಿ ನಿಜಕ್ಕೂ ವಿಭಿನ್ನ. ಪುಟ್ಟ ದ್ವಿಚಕ್ರ ವಾಹನಕ್ಕೆ ಮಿಠಾಯಿ ಗೊಂಬೆಯನ್ನು ಜೋಡಿಸಿದ್ದಾರೆ. ಈಗ ಜಾತ್ರೆಗಳೆಲ್ಲ ಮುಗಿದಿವೆ. ಹಾಗಾಗಿ ಶಾಲೆಗಳ ಬಳಿ ಬಂದು ಅವರು ವ್ಯಾಪಾರ ಮಾಡುತ್ತಿದ್ದಾರೆ. ಸಕ್ಕರೆ ಪಾಕಕ್ಕೆ ಬಣ್ಣ ಲೇಪಿಸಿದ ಅಂಟಿನ ಮಿಠಾಯಿಯನ್ನು ಬಿದಿರಿನ ಕಡ್ಡಿಗೆ ಸುತ್ತಿ ಬೇಕಾದ ಆಕಾರ ಮಾಡಿಕೊಡುವ ರೀತಿಯೂ ಸೃಜನಶೀಲವಾಗಿರುತ್ತದೆ. ನಿಮಿಷ ಮಾತ್ರದಲ್ಲಿ ಬಣ್ಣಬಣ್ಣದ ಹಕ್ಕಿ, ಸೈಕಲ್, ಗುಲಾಬಿ, ವಿಮಾನ, ನಕ್ಷತ್ರ, ನವಿಲು, ವಾಚು, ನೆಕ್ಲೇಸ್ ಮಾಡಿ ಕೊಡುವಾಗ ಅಪ್ಪಟ ಕಲಾವಿದರಂತೆಯೇ ಕಾಣುತ್ತಾರೆ.

`ಮೊದಲೆಲ್ಲ ಮಿಠಾಯಿ ಮಾರುವವರ ಸಂಖ್ಯೆ ತುಂಬಾ ಇತ್ತು. ಆದರೆ ಈಗಿನ ಯುವಕರು ಈ ವೃತ್ತಿಯಿಂದ ಹಿಂದೆ ಸರಿದಿದ್ದಾರೆ. ಸದ್ಯ ಬೆಂಗಳೂರು ಸುತ್ತಮುತ್ತ ಕೇವಲ ಐದಾರು ಜನ ಮಿಠಾಯಿ ತಯಾರಿಸುವ ಜನ ಇದ್ದೇವೆ. ಮುಂದೆ ನಮ್ಮ ಜೊತೆಗೇ ಬೊಂಬಾಯಿ ಮಿಠಾಯಿಯ ಕಾಲ ಕೂಡ ಮುಗಿದು ಹೋಗಲಿದೆ' ಎಂದು ಹೇಳುವಾಗ ಮುರುಗೇಶ್ ಮುಖದಲ್ಲಿ ವಿಷಾದದ ಛಾಯೆ.

ಪರಿಕರಗಳು ದುಬಾರಿ
ನಮ್ಮ ತಾತನ ಕಾಲದಿಂದಲೂ ಇದೇ ವ್ಯಾಪಾರ ಮಾಡುತ್ತಾ ಬಂದಿದ್ದೇವೆ. ರಾಮನಗರದದಿಂದ ಹಿಡಿದು ಬೆಂಗಳೂರಿನ ಸುತ್ತಮುತ್ತ ಎಲ್ಲೆಲ್ಲಿ ಜಾತ್ರೆ ನಡೆಯುತ್ತದೋ ಅಲ್ಲೆಲ್ಲ ಹೋಗುತ್ತೇನೆ. ಒಮ್ಮೆಲೆ ಐದು ಕೆ.ಜಿ. ಮಿಠಾಯಿ ತಯಾರಿಸುತ್ತೇವೆ. ಐದು ಕೆ.ಜಿ. ಸಕ್ಕರೆ ಪಾಕಕ್ಕೆ ಎರಡು ನಿಂಬೆ ಹಣ್ಣಿನ ರಸ ಬೆರೆಸುತ್ತೇವೆ. ನಂತರ ಎರಡು ಅಥವಾ ಮೂರು ಬಣ್ಣಗಳ ಟ್ರೇಗಳಲ್ಲಿ ಪ್ರತ್ಯೇಕ ಪಾಕ ಸುರಿದು ತಣಿದ ನಂತರ ಎಲ್ಲವನ್ನೂ ಒಂದೇ ಸುರುಳಿ ಸುತ್ತಿ ಗೊಂಬೆಯ ಕೋಲಿಗೆ ಅಂಟಿಸಲಾಗುತ್ತದೆ.

ಆ ಕಾಲದಲ್ಲಿ ಎರಡು ಮೂರು ಪೈಸೆಗೆ ಮಾರುತ್ತಿದ್ದೆವು. ಈಗ ಐದು, ಹತ್ತು ರೂಪಾಯಿಗೆ ಮಾರುತ್ತೇವೆ. ಸಕ್ಕರೆ ಬೆಲೆ ಹೆಚ್ಚಾಗಿದೆ. ಬಿದಿರಿನ ಕಡ್ಡಿಯೂ ದುಬಾರಿಯಾಗಿದೆ. ಅಡುಗೆಗೆ ಬಳಸುವ ಬಣ್ಣಗಳನ್ನೇ ಬಳಸುತ್ತೇವೆ. ಇದೂ ಸ್ವಲ್ಪ ದುಬಾರಿಯೇ. ಆದರೆ ಮಿಠಾಯಿ ಎಂದರೆ ಆಕರ್ಷಕವಾಗಿಯೇ ಇರಬೇಕಾಗುತ್ತದೆ. ಅಲ್ಲದೆ ವಿವಿಧ ಆಕಾರಗಳಲ್ಲಿ ಮಿಠಾಯಿಯನ್ನು ಕೊಡುವಾಗ ಬಣ್ಣವಿಲ್ಲದಿದ್ದರೆ ಬೇಡಿಕೆ ಬರುವುದಿಲ್ಲ. ಬಣ್ಣ ಬಳಸುವ ಬಗ್ಗೆ ಸರಿಯಾದ ಕ್ರಮ ಅನುಸರಿಸಿದರೆ ತೊಂದರೆಯಾಗದು. ಮಿಠಾಯಿಯನ್ನು ಪುಟ್ಟಮಕ್ಕಳೇ ಇಷ್ಟಪಡುವ ಕಾರಣ ಮಾರುವಾಗ ಇದರ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸುತ್ತೇನೆ.
-ಮುರುಗೇಶ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.