ಬೆಂಗಳೂರು: ಶಿಕ್ಷಕರ ಕಿರುಕುಳ ತಾಳಲಾರದೆ ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಕರಣ ಸಂಬಂಧ ಸಮಗ್ರ ತನಿಖೆ ನಡೆಸಿ ಶಾಲಾ ಆಡಳಿತ ಮಂಡಳಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಮೃತ ವಿದ್ಯಾರ್ಥಿನಿಯರ ಪೋಷಕರು ಹಾಗೂ ಸಂಬಂಧಿಕರು ಬುಧವಾರ ಲಕ್ಕಸಂದ್ರದ ಮೇರಿ ಇಮ್ಯಾಕ್ಯುಲೇಟ್ ಶಾಲೆ ಮುಂದೆ ಶವಗಳನ್ನಿಟ್ಟು ಪ್ರತಿಭಟನೆ ಮಾಡಿದರು.

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಪ್ರಿಯಾಂಕ (15) ಹಾಗೂ ಒಂಬತ್ತನೇ ತರಗತಿಯ ಸೊನಾಲಿ (14) ಎಂಬ ವಿದ್ಯಾರ್ಥಿನಿಯರು ಮಂಗಳವಾರ ನಗರದ ಸ್ಯಾಂಕಿ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಬ್ಯಾಗ್ನಲ್ಲಿ ಸಿಕ್ಕ ಪತ್ರದಲ್ಲಿ, ‘ಶಿಕ್ಷಕರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ’ ಎಂದು ಬರೆದಿತ್ತು. ಈ ಸಂಗತಿ ತಿಳಿದ ಪೋಷಕರು, ಕುಟುಂಬ ಸದಸ್ಯರು ಹಾಗೂ ಇತರೆ ವಿದ್ಯಾರ್ಥಿಗಳ ಪೋಷಕರು ಆ ಶಾಲೆಯನ್ನು ಮುಚ್ಚಬೇಕೆಂದು ಒತ್ತಾಯಿಸಿದ್ದರು.

ವಿದ್ಯಾರ್ಥಿನಿಯರ ಸಾವಿನ ಹಿನ್ನೆಲೆಯಲ್ಲಿ ಬುಧವಾರ ಶಾಲೆಗೆ ರಜೆ ಘೋಷಿಸಲಾಗಿತ್ತು. ಮಧ್ಯಾಹ್ನ 1 ಗಂಟೆ ಸುಮಾರಿಗೆ ಶವಗಳೊಂದಿಗೆ ಶಾಲೆ ಬಳಿ ಬಂದ ಪೋಷಕರು ಹಾಗೂ ಸಂಬಂಧಿಕರು, ‘ಶವಗಳನ್ನು ಶಾಲೆ ಆವರಣದಲ್ಲಿಟ್ಟು ಪ್ರತಿಭಟನೆ ಮಾಡುತ್ತೇವೆ’ ಎಂದು ಒತ್ತಾಯಿಸಿದರು. ಈ ವೇಳೆ ಪೊಲೀಸರು ಅವರನ್ನು ಅಡ್ಡಗಟ್ಟಿದ್ದರಿಂದ ಕೆಲ ಕಾಲ ಮಾತಿನ ಚಕಮಕಿ ನಡೆಯಿತು.

‘ಮಕ್ಕಳ ಶವಗಳನ್ನು ರಸ್ತೆಯಲ್ಲಿಡಲು ಅವರೇನು ಬೀದಿಯಲ್ಲಿ ಓದಿಲ್ಲ. ಶಾಲೆ ಆವರಣದಲ್ಲಿ ಶವಗಳನ್ನಿಡಲು ಅವಕಾಶ ಮಾಡಿಕೊಡಿ. ಇಲ್ಲದಿದ್ದರೆ ಪ್ರವೇಶ ದ್ವಾರವನ್ನು ಧ್ವಂಸ ಮಾಡಿ ಒಳಗೆ ನುಗ್ಗಬೇಕಾಗುತ್ತದೆ’ ಎಂದು ಪ್ರತಿಭಟನಾನಿರತರು ಎಚ್ಚರಿಕೆ ನೀಡಿದರು.
ಪ್ರತಿಭಟನಾಕಾರರು ಏಕಾಏಕಿ ಒಳಗೆ ನುಗ್ಗಲು ಯತ್ನಿಸಿದ್ದರಿಂದ ನೂಕು ನುಗ್ಗಲು ಉಂಟಾಗಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ನಂತರ ಪೊಲೀಸರ ಮನವಿಗೆ ಸ್ಪಂದಿಸಿದ ಅವರು ಪ್ರವೇಶದ್ವಾರದ ಬಳಿಯೇ ಪೆಂಡಾಲ್ ಹಾಕಿ ಒಂದು ತಾಸಿಗೂ ಹೆಚ್ಚು ಕಾಲ ಶವಗಳನ್ನಿಟ್ಟು ಶಾಲೆ ವಿರುದ್ಧ ಘೋಷಣೆಗಳನ್ನು ಕೂಗಿದರು.

ಮಕ್ಕಳು ಚೆನ್ನಾಗಿ ಓದುವುದಿಲ್ಲ ಎಂದು ನಿಂದಿಸುತ್ತಿದ್ದ ಶಿಕ್ಷಕರು, ಈ ಬಾರಿ ಪರೀಕ್ಷಾ ಪ್ರವೇಶ ಪತ್ರ ನೀಡುವುದಿಲ್ಲ ಎಂದು ಬೆದರಿಸಿದ್ದರು. ಅಲ್ಲದೆ, ಹೋಳಿ ಹಬ್ಬವನ್ನು ಆಚರಿಸಿದ ಕಾರಣಕ್ಕೆ ಮಕ್ಕಳಿಗೆ ತರಗತಿಗೆ ಸೇರಿಸದೆ ಶಿಕ್ಷೆ ನೀಡಿದ್ದರು. ಈ ಕಾರಣಗಳಿಂದ ನೊಂದ ಮಕ್ಕಳು, ಸ್ಯಾಂಕಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಸಾವಿಗೆ ಶಿಕ್ಷಕರು ಹಾಗೂ ಶಾಲಾ ಆಡಳಿತ ಮಂಡಳಿಯೇ ಕಾರಣ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ಮಗಳಿಗೆ ಬಂದಂತಹ ಸ್ಥಿತಿ ಬೇರೆ ಮಕ್ಕಳಿಗೆ ಬರಬಾರದು. ಮಗಳ ಸಾವಿಗೆ ಕಾರಣರಾದ ಶಿಕ್ಷಕಿಯರನ್ನು ಬಂಧಿಸಿ ನಮಗೆ ನ್ಯಾಯ ಕೊಡಿಸಬೇಕು. ಅವರು ಕಿರುಕುಳ ನೀಡುತ್ತಿರುವ ಬಗ್ಗೆ ಮಗಳು ಹಲವು ಬಾರಿ ದೂರಿದ್ದಳು. ಆದರೆ, ಆ ವಿಷಯವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ’ ಎಂದು ಪ್ರಿಯಾಂಕ ತಂದೆ ಜನಾರ್ದನ್ ಕಣ್ಣೀರಿಟ್ಟರು.

‘ಪ್ರಜಾವಾಣಿ’ ಜತೆ ಮಾತನಾಡಿದ ಸೊನಾಲಿ ಸೋದರ ಬ್ರೂನೊ ಮಿಚೆಲ್, ‘ಏಪ್ರಿಲ್ ತಿಂಗಳಲ್ಲಿ ಸೊನಾಲಿಯ ಹುಟ್ಟು ಹಬ್ಬವಿತ್ತು. ಹೀಗಾಗಿ ಬಟ್ಟೆ ಹಾಗೂ ಶೂ ಕೊಡಿಸುವಂತೆ ಬೇಡಿಕೆ ಇಟ್ಟಿದ್ದಳು. ಭಾನುವಾರವಷ್ಟೇ ಇಬ್ಬರೂ ಶಾಪಿಂಗ್ ಮಾಡಿ ಬಟ್ಟೆ, ಶೂಗಳನ್ನು ಖರೀದಿಸಿದ್ದೆವು. ಆದರೆ, ಈಗ ಆಕೆಯೇ ಇಲ್ಲವಾಗಿದ್ದಾಳೆ’ ಎಂದು ರೋದಿಸಿದರು.

‘ಸೊನಾಲಿ ಮತ್ತು ಪ್ರಿಯಾಂಕ ಆತ್ಮೀಯ ಸ್ನೇಹಿತರಾಗಿದ್ದರು. ಅವರಿಬ್ಬರನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಹೋಗುವಾಗ ಪ್ರವಾಸಕ್ಕೆ ಹೊರಟ ಅನುಭವ ಆಗುತ್ತಿತ್ತು. ವಾಹನದಲ್ಲಿ ಕುಣಿದು ಕುಪ್ಪಳಿಸುತ್ತಿದ್ದ ಅವರು ಸಹಪಾಠಿಗಳ ಜತೆಗೂ ಸಂತಸದಿಂದಲೇ ಕಾಲ ಕಳೆಯುತ್ತಿದ್ದರು. ಅವರ ಸಾವು ಆಘಾತ ಉಂಟು ಮಾಡಿದೆ’ ಎಂದು ಶಾಲಾ ವಾಹನದ ಚಾಲಕ ನರಸಿಂಹಮೂರ್ತಿ ಹೇಳಿದರು.

ನಮ್ಮ ತಪ್ಪಿಲ್ಲ: ‘ಮಕ್ಕಳು ಚೆನ್ನಾಗಿ ಓದಬೇಕು ಎಂಬುದು ಎಲ್ಲ ಶಿಕ್ಷಕರ ಉದ್ದೇಶವಾಗಿರುತ್ತದೆ. ನಾವೂ ಸಹ ಅದೇ ಉದ್ದೇಶವನ್ನು ಹೊಂದಿದ್ದೇವೆ. ಸಮಯ ವ್ಯಯ ಮಾಡದೆ ವ್ಯಾಸಂಗದ ಕಡೆ ಗಮನ ಕೊಡುವಂತೆ ಪ್ರಿಯಾಂಕ ಮತ್ತು ಸೊನಾಲಿಗೆ ಬುದ್ದಿಮಾತು ಹೇಳಿದ್ದೆವು. ಈ ಪ್ರಕರಣದಲ್ಲಿ ನಮ್ಮ ತಪ್ಪೇನೂ ಇಲ್ಲ. ಶಿಕ್ಷಕರಾಗಿ ನಮ್ಮ ಕರ್ತವ್ಯವನ್ನು ಮಾಡಿದ್ದೇವೆ’ ಎಂದು ಮುಖ್ಯ ಶಿಕ್ಷಕಿ ಫಿಲೋಮಿನಾ ಮತ್ತು ಮರಿಯಾ ಲೈನಾ ಪೊಲೀಸ್ ವಿಚಾರಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.