ಭಾನುವಾರ, ಮೇ 16, 2021
22 °C

ಶಾಲೆ ಮುಖ್ಯಶಿಕ್ಷಕ ಪಾಟೀಲ ಅಮಾನತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಶಾಲೆಯ ಸ್ವಚ್ಛತೆಗೆ ಮಕ್ಕ ಳನ್ನು ಬಳಕೆ ಮಾಡಿಕೊಂಡ ತಾಲ್ಲೂಕಿನ ನಾಗನೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಎಚ್.ಎನ್.ಪಾಟೀಲ ಅವರನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಶುಕ್ರವಾರ ಸೇವೆಯಿಂದ ಅಮಾನತು ಗೊಳಿಸಿ ಆದೇಶ ಹೊರಡಿಸಿದ್ದಾರೆ.ಶಾಲಾ ಪ್ರಾರಂಭೋತ್ಸವದ ಹಿನ್ನೆಲೆ ಯಲ್ಲಿ ಶಾಲಾ ಸ್ವಚ್ಛತೆಗೆ ಕೂಲಿಗಳನ್ನು ಬಳಸದೇ ಶಾಲಾ ಮಕ್ಕಳಿಂದಲೇ ಶಾಲೆಯ ಕಸ ಗೂಡಿಸುವುದು, ಅದನ್ನು ಬೇರೆಡೆಗೆ ಸಾಗಿಸುವುದು ಅಲ್ಲದೇ ರಜೆಯ ಅವಧಿಯಲ್ಲಿ ಒಡೆದು ಶಾಲೆಯ ಮೇಲ್ಛಾವಣಿ ಹೆಂಚುಗಳನ್ನು ಬದಲಾವಣೆ ಮಾಡಿಸಲಾಗಿದೆ ಎಂಬ ವಿಷಯವನ್ನು  ಮೇ 31 ರಂದು `ಪ್ರಜಾವಾಣಿ' ಪತ್ರಿಕೆ `ಶಾಲೆಗೆ ಬರುವ ಮುನ್ನವೇ ಸ್ವಚ್ಛತೆ ಶಿಕ್ಷೆ' ಎಂಬ ಶೀರ್ಷಿಕೆ ಯಡಿ ಚಿತ್ರ ಸಹಿತ ವರದಿ ಪ್ರಕಟಿಸಿತ್ತು.ಮಕ್ಕಳನ್ನು ಶಾಲಾ ಸ್ವಚ್ಛತಾ ಕಾರ್ಯಕ್ರಮಕ್ಕೆ ಬಳಕೆ ಮಾಡಿಕೊಳ್ಳುವ ಮೂಲಕ ಮುಖ್ಯ ಶಿಕ್ಷಕರು ಕರ್ತವ್ಯಲೋಪ ಎಸಗಿರುವುದು ಹಾಗೂ ಸರ್ಕಾರಿ ನೌಕರಿಗೆ ಭೂಷಣ ವಲ್ಲದ ರೀತಿತಯಲ್ಲಿ ವರ್ತಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ರಾಮಶೆಟ್ಟಿ ಆದೇಶದಲ್ಲಿ ತಿಳಿಸಿದ್ದಾರೆ.ಸರ್ಕಾರಿ ನೌಕರರಾದ ಮುಖ್ಯ ಶಿಕ್ಷಕರು, 2009 ರ ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ ಮತ್ತುಯ ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯ ಮಗಳು 1966 ರ ನಿಯಮ 3(1) (2) (3) ರ ಉಲ್ಲಂಘನೆ ಮಾಡಿರು ವುದರಿಂದ ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿ ಅನ್ವಯ ಸೇವೆಯಿಂದ ಅಮಾನತು ಗೊಳಿಸ ಲಾಗಿದೆಯಲ್ಲದೇ, ಈ ಕುರಿತು ಇಲಾಖೆ ವಿಚಾರಣೆಯನ್ನು ಕಾಯ್ದಿರಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.ಅಮಾನತುಗೊಂಡ ಶಿಕ್ಷಕರು ಇಲಾಖೆಯ ಪೂರ್ವನುಮತಿ ಪಡೆ ಯದೇ ಕೇಂದ್ರ ಸ್ಥಾನ ಬಿಟ್ಟು ತೆರಳು ವಂತಿಲ್ಲ ಎಂದು ಆದೇಶದಲ್ಲಿ ಸೂಚಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.