ಭಾನುವಾರ, ಏಪ್ರಿಲ್ 18, 2021
25 °C

ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಟ್ಟಿ ಚಿನ್ನದ ಗಣಿ: ಇಲ್ಲಿಗೆ ಸಮೀಪದ ಗುರುಗುಂಟಾ ಗ್ರಾಮ ಸೇರಿದಂತೆ ಇನ್ನತರ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ಜಲನಿರ್ಮಲ ಯೋಜನೆಯಡಿ ಮಂಜೂರು ಮಾಡದ ಒಟ್ಟು 21.19 ಕೋಟಿ ವೆಚ್ಚದ ಕಾಮಗಾರಿಗೆ ಗುರುವಾರ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಲಿಂಗಪ್ಪ ಹೂಗಾರ ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು ಶಾಶ್ವತ ಕುಡಿಯುವ ನೀರಿನ ಬೇಡಿಕೆ ಬಹುದಿನಗಳದಾಗಿತ್ತು. ಈ ಯೋಜನೆ ಗುರುಗುಂಟಾ ಸೇರಿದಂತೆ ಪೈದೊಡ್ಡಿ, ಕೋಠಾ, ಹಟ್ಟಿ ಗ್ರಾಮಗಳು ಒಳಗೊಂಡಿದೆ. ಈ ಯೋಜನೆ ಬರಲು ಶಾಸಕರ ಆಸಕ್ತಿಯೇ ಕಾರಣ ಎಂದು ಈ ಸಂದರ್ಭದಲ್ಲಿ ಶಾಸಕರ ಸೇವೆ ಶ್ಲಾಘಿ ಸಿದರು.ಈ ಯೋಜನೆಯು ಎರಡು ಪ್ಯಾಕೇಜ್ ಹೊಂದಿದೆ. ಟ್ಯಾಂಕ್ ನಿರ್ಮಿಸಲು 13.19 ಕೋಟಿ ಮತ್ತು ಪೈಪ್ ಲೈನ್ ಅಳವಡಿಸಲು 8 ಕೋಟಿ. ಐದು ಗ್ರಾಮಗಳ ನಡುವೆ ಒಟ್ಟು 19 ಕಿ.ಮೀ. ಪೈಪ ಲೈನ್ ಹಾಕಲಾಗುವುದು. ನಿಗದಿ ಪಡಿಸಿದ ಗಡುವಿನೊಳಗೆ ಕಾಮಗಾರಿ ಮುಗಿಸುವಂತೆ ಗುತ್ತಿಗೇದಾರರಿಗೆ ಸೂಚಿಸಿದರು.ಗ್ರಾಮ ಪಂಚಾಯಿತಿ ಸದಸ್ಯರಾದ ರಾಜಾ ಸೋಮನಾಥ ನಾಯಕ, ಗುತ್ತಿಗೆದಾರ ಅಮರಗುಂಡಪ್ಪ ಮೇಡಿ, ವಾಸುದೇವ ನಾಯಕ, ಗೋವಿಂದ ನಾಯಕ, ದಿಡ್ಡಿಮನಿ, ಅಮರೇಶ ತಾತಾ, ತಿರುಮಲ, ಕೋಠಾ ಗ್ರಾಮದ ಶಿವಣ್ಣ ನಾಯಕ, ಜಲ ನಿರ್ಮಲ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಕುಮಾರ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.