ಶುಕ್ರವಾರ, ಮೇ 20, 2022
21 °C
ನ್ಯಾಯಮೂರ್ತಿ ಸದಾಶಿವ ವರದಿ ಅಂಗೀಕಾರಕ್ಕೆ ಒತ್ತಾಯ

ಶಾಸಕ ಹಂಪನಗೌಡ ನಿವಾಸ ಎದುರು ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂಧನೂರು: ಜು.12ರಿಂದ ಆರಂಭವಾಗಲಿರುವ ವಿಧಾನಸಭಾ ಅಧಿವೇಶನ ದಲ್ಲಿ ನ್ಯಾ. ಎ.ಜೆ.ಸದಾಶಿವ ವರದಿಯನ್ನು ಅಂಗೀಕರಿಸಿ ಪರಿಶಿಷ್ಟ ಜಾತಿಗಳಿಗೆ ಜನಸಂಖ್ಯಾವಾರು ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ಮಾದಿಗ-ಚಲವಾದಿ ಮೀಸಲಾತಿ ಹೋರಾಟ ಸಮಿತಿಯಿಂದ ಬುಧವಾರ ಶಾಸಕ ಹಂಪನಗೌಡ ಬಾದರ್ಲಿ ನಿವಾಸದ ಮುಂದೆ ಧರಣಿ ನಡೆಸಿ ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.ನಗರಸಭೆ ಸದಸ್ಯ ಶೇಖರಪ್ಪ ಗಿಣಿವಾರ, ಬಿಜೆಪಿ ನೇತೃತ್ವದ ಸರ್ಕಾರ ನೇಮಿಸಿದ ಸದಾಶಿವ ಸಮಿತಿಯು ಜೂ.14, 2012ರಂದು 200 ಪುಟಗಳ ವರದಿಯನ್ನು ಆಗಿನ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರಿಗೆ ಸಲ್ಲಿಸಿದ್ದೆ. ಮಾದಿಗ ಸಂಬಂಧಿತ ಸಮುದಾಯಕ್ಕೆ ಶೇ.6, ಛಲವಾದಿ ಸಂಬಂಧಿತ ಸಮುದಾಯಕ್ಕೆ ಶೇ.5 ಹಾಗೂ ಸ್ಪೃಶ್ಯ ಸಮುದಾಯದ ಭೋವಿ, ಬಂಜಾರ, ಭಜಂತ್ರಿಗಳಿಗೆ ಶೇ.3 ಮತ್ತು ಇತರರಿಗೆ ಶೇ.1 ಮೀಸಲಾತಿ ವರ್ಗೀಕರಿಸಲಾಗಿದೆ.ತಾನೇ ನೇಮಿಸಿದ ಸಮಿತಿ ನೀಡಿದ ವರದಿಯನ್ನು ಬಿಜೆಪಿ ನೇತೃತ್ವದ ಸರ್ಕಾರ ಜಾರಿಗೊಳಿಸಲು ಮೀನಾಮೇಷ ಮಾಡಿರುವುದಲ್ಲದೆ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ವರದಿ ಅಂಗೀಕಾರಕ್ಕಾಗಿ ಚಳವಳಿ ಮಾಡಿದ ಸಂದರ್ಭದಲ್ಲಿ ಸಾವಿರಾರು ಮಕ್ಕಳು, ಮಹಿಳೆಯರ ಮೇಲೆ ಮನಸೋಇಚ್ಛೆ ಲಾಠಿ ಪ್ರಹಾರ ನಡೆಸಿತ್ತು ಎಂದರು. .ವೀರಭದ್ರಪ್ಪ ಮಲ್ಲಾಪುರ, ಎಚ್.ಎನ್.ಬಡಿಗೇರ, ಯಮನಪ್ಪ ಮಲ್ಲಾಪುರ ಮತ್ತಿತರರು ಮಾತನಾಡಿದರು. ರಾಜ್ಯದಲ್ಲಿ ಖಾಲಿ ಇರುವ ಸಾವಿರಾರು ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿಗೊಳಿಸಬೇಕು. ಮಹಾನಗರ ಪಾಲಿಕೆ, ನಗರಸಭೆ ಹಾಗೂ ಪುರಸಭೆಗಳಲ್ಲಿ ಕಳೆದ 15 ವರ್ಷಗಳಿಂದ ಖಾಯಂ ಸ್ವರೂಪದ ಕೆಲಸಗಳನ್ನು ಗುತ್ತಿಗೆ ಆಧಾರದ ಮೇಲೆ ಪಡೆಯುತ್ತಿದ್ದು ಗುತ್ತಿಗೆ ಪದ್ಧತಿಯನ್ನು ಖಾಯಂಗೊಳಿಸುವಂತೆ ಹಾಗೂ ಅಸ್ಪೃಶ್ಯ ಜಾತಿಗಳ ಅಭಿವೃದ್ಧಿಗೆ ಪ್ರತ್ಯೇಕ ನಿಗಮವನ್ನು ಸ್ಥಾಪಿಸುವಂತೆ ಮುಖಂಡರು ಒತ್ತಾಯಿಸಿದರು.ಶಾಸಕರ ಅನುಪಸ್ಥಿತಿಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಪಂಪನಗೌಡ ಬಾದರ್ಲಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾಫರ್ ಜಾಗೀರದಾರ ಮನವಿ ಸ್ವೀಕರಿಸಿದರು.ಮೆರವಣಿಗೆ : ನಗರದ ಪ್ರವಾಸಿ ಮಂದಿರದಿಂದ ಗಾಂಧಿ ವೃತ್ತ, ಸುಕಾಲಪೇಟೆ ಕ್ರಾಸ್ ಮೂಲಕ ಶಾಸಕ ಹಂಪನಗೌಡ ನಿವಾಸಕ್ಕೆ ಮೆರವಣಿಗೆ ನಡೆಸಲಾಯಿತು.ದಲಿತಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಆರ್.ಅಂಬ್ರೂಸ್, ನಗರಸಭೆ ಮಾಜಿ ಅಧ್ಯಕ್ಷ ಸುಭಾಷ ಫ್ರಾಂಕ್ಲಿನ್, ರೈತ ಸಂಘದ ಅಧ್ಯಕ್ಷ ಎಚ್.ಎನ್.ಬಡಿಗೇರ, ಪಿ.ಹನುಮಂತಪ್ಪ, ನಿರುಪಾದಿ  ಕಟ್ಟಿಮನಿ ಮತ್ತಿತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.