ಶುಕ್ರವಾರ, ಮಾರ್ಚ್ 5, 2021
16 °C

ಶಾಹಿದ್ ಅಫ್ರಿದಿಗೆ ರೂ. 45 ಲಕ್ಷ ದಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಾಹಿದ್ ಅಫ್ರಿದಿಗೆ ರೂ. 45 ಲಕ್ಷ ದಂಡ

ಲಾಹೋರ್ (ಪಿಟಿಐ): ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸ್ಥಾನದಿಂದ ವಜಾಗೊಂಡಿರುವ ಶಾಹಿದ್ ಅಫ್ರಿದಿ ಅವರಿಗೆ 45 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಅವರು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕೆ ಶಿಸ್ತು ಸಮಿತಿ ಈ ಕ್ರಮ ಕೈಗೊಂಡಿದೆ. ಆದರೆ ಅವರಿಗೆ ವಿದೇಶದಲ್ಲಿ ಆಡಲು ಅನುಮತಿ ನೀಡಲಾಗಿದೆ.

ಈ ಕಾರಣ ಅಫ್ರಿದಿ ಇಂಗ್ಲೆಂಡ್‌ನ ದೇಸಿ ಟ್ವೆಂಟಿ-20 ಲೀಗ್ ಹಾಗೂ ಶ್ರೀಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಪಾಲ್ಗೊಳ್ಳಬಹುದು. ಪಿಸಿಬಿಯ ನೀತಿಸಂಹಿತೆಯನ್ನು ಉಲ್ಲಂಘಿಸಿದ್ದಕ್ಕೆ ಅಫ್ರಿದಿ ಅವರನ್ನು ನಾಯಕಸ್ಥಾನದಿಂದ ಕೆಳಗಿಳಿಸಲಾಗಿತ್ತು. ಮಾತ್ರವಲ್ಲ ಅವರ ವಿರುದ್ಧ ತನಿಖೆಗೆ ಪಿಸಿಬಿ ಶಿಸ್ತು ಸಮಿತಿಯನ್ನು ನೇಮಿಸಿತ್ತು.

ಅಫ್ರಿದಿ ಗುರುವಾರ ಸಮಿತಿಯ ಮುಂದೆ ಹಾಜರಾಗಿ ತಮ್ಮ ವಾದ ಮಂಡಿಸಿದರು. `ನಾನು ತಪ್ಪು ಮಾಡಿರುವುದು ಹೌದು ಎಂಬುದನ್ನು ಒಪ್ಪಿಕೊಳ್ಳುವೆ. ಆದರೆ ಪರಿಸ್ಥಿತಿ ನನ್ನನ್ನು ಅದಕ್ಕೆ ಪ್ರೇರೇಪಿಸಿದೆ. ಆದರೆ ನಾನು ಕ್ಷಮೆಯಾಚಿಸುವುದಿಲ್ಲ~ ಎಂದು ಅಫ್ರಿದಿ ಸಮಿತಿಯ ಮುಂದೆ ಹಾಜರಾದ ಬಳಿಕ ಪ್ರತಿಕ್ರಿಯಿಸಿದ್ದರು.

`ನಾಲ್ಕು ಸದಸ್ಯರ ಸಮಿತಿಯು ಅಫ್ರಿದಿಗೆ 45 ಲಕ್ಷ ರೂ. ದಂಡ ವಿಧಿಸಿದೆ. ಅವರು ಪಿಸಿಬಿಯ ನೀತಿ ಸಂಹಿತೆ ಉಲ್ಲಂಘಿಸಿರುವುದು ಸಾಬೀತಾಗಿದೆ~ ಎಂದು ಪಿಸಿಬಿ ಕಾನೂನು ಸಲಹೆಗಾರ ತಫಜ್ಜುಲ್ ರಿಜ್ವಿ ಹೇಳಿದ್ದಾರೆ.

`ಮಂಡಳಿ ಜೊತೆ ಭಿನ್ನಾಭಿಪ್ರಾಯ ತಲೆದೋರಲು ಉಂಟಾದ ಎಲ್ಲ ಕಾರಣಗಳನ್ನು ಸ್ಪಷ್ಟವಾಗಿ ವಿವರಿಸಿದ್ದೇನೆ. ಅದೇ ರೀತಿ ತಂಡದ ಆಡಳಿತದ ಜೊತೆ ಏಕೆ ವೈಮನಸ್ಸು ಉಂಟಾಗಿದೆ ಎಂಬುದನ್ನೂ ತಿಳಿಸಿದ್ದೇನೆ~ ಎಂದು ಅಫ್ರಿದಿ ಹೇಳಿದ್ದರು.

ನಾಯಕಸ್ಥಾನದಿಂದ ವಜಾಗೊಂಡ ಬಳಿಕ ಅಫ್ರಿದಿ ಹಾಗೂ ಪಿಸಿಬಿ ನಡುವಿನ ಸಂಬಂಧದಲ್ಲಿ ಬಿರುಕು ಉಂಟಾಗಿತ್ತು. ತನಗೆ ಅಗೌರವ ತೋರಿಸಲಾಗಿದೆ ಎನ್ನುವ ಮೂಲಕ ಅವರು ಕ್ರಿಕೆಟ್‌ಗೆ ವಿದಾಯ ಹೇಳಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.