ಭಾನುವಾರ, ಮೇ 16, 2021
28 °C

ಶಿಕಾರಿಪುರ ಉತ್ಸವಕ್ಕೆ ಅದ್ದೂರಿ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಕಾರಿಪುರ: ಬರಗಾಲದ ಜನರ ಬವಣೆ ಅರಿಯಲು ನಾನು ಈಗ ಮೌನ ಮುರಿದಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.ಗುರುವಾರದಿಂದ ಆರಂಭವಾದ ಶಿಕಾರಿಪುರ ಸಾಂಸ್ಕೃತಿಕ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಆಗಿ ವಿಧಾನಸೌಧದಲ್ಲಿ ಮುಂದಿನ ಸಾಲಿನಲ್ಲಿ ಕುಳಿತವನು, ಕಳೆದ 7 ತಿಂಗಳು ಹಿಂದೆ ಕುಳಿತು ಮೌನವಾಗಿದ್ದನ್ನು ಕೆಲವರು ಅಪಾರ್ಥವಾಗಿ ತಿಳಿದಿದ್ದಾರೆ. ಆದರೆ, ಇದೀಗ ನಾನು ಮೌನವನ್ನು ಮುರಿದಿದ್ದು ಬರಗಾಲದ ಜನರ ಕಷ್ಟವನ್ನು ಹೇಳುವ ಮೂಲಕ ಮೌನ ಮುರಿದಿದ್ದೇನೆ ಎಂದ ಅವರು, ಜನರ ಸಮಸ್ಯೆಯೊಂದಿಗೆ ಬೆಳೆದ ನನಗೆ ಪುನಃ ಅಧಿಕಾರ ಪಡೆಯುವ ಶಕ್ತಿಯನ್ನೂ ಇದು ನೀಡುತ್ತದೆ ಎಂದು ಹೇಳಿದರು.ನಾನು ಕಳ್ಳತನ, ಮೋಸ ಮಾಡಿದ್ದಕ್ಕಾಗಿ ಜೈಲಿಗೆ ಹೋಗಿಲ್ಲ; ಬದಲಿಗೆ ನಮ್ಮವರೇ ಕಾಲನ್ನು ಎಳೆದಿದ್ದಕ್ಕಾಗಿ; 24 ದಿನಗಳ ಕಾಲ ಕತ್ತಲೆಯಲ್ಲಿ ಕಳೆದಿದ್ದು ಇದಕ್ಕೆ ಪಶ್ಚಾತ್ತಾಪ ಪಡುವುದಿಲ್ಲ. ಬದಲಿಗೆ ಆಪಾದನೆ ಮಾಡಿದವರೇ ಮತ್ತೊಮ್ಮೆ ಹೊಗಳುವಂತೆ ಬದುಕಿ ತೋರಿಸುತ್ತೇನೆ ಎಂದರು. ಜನರ ಕಷ್ಟವನ್ನು ವಿಧಾನಸೌಧದಲ್ಲಿ ಕುಳಿತು ಚರ್ಚಿಸುವುದು ಸರಿಯಲ್ಲ; ಇದಕ್ಕಾಗಿ ನಾನೇ ಬರಗಾಲದ ನಾಡಿಗೆ ತೆರಳಿ ಜನರ ಕಷ್ಟವನ್ನು ಕೇಳಿದ್ದೇನೆ. ಇದನ್ನು ಇಲ್ಲಿಗೆ ನಿಲ್ಲಿಸುವುದಿಲ್ಲ ಪ್ರವಾಸವನ್ನು ಮುಂದುವರಿಸುತ್ತೇನೆ. ಇದನ್ನು ಅಪಾರ್ಥ ಮಾಡಿಕೊಳ್ಳುವುದು ಸರಿಯಲ್ಲ ಎಂದರು.ಸಭಾಪತಿ ಡಿ.ಎಚ್. ಶಂಕರಮೂರ್ತಿ ಮಾತನಾಡಿ, ಹೋರಾಟಗಳ ಮೂಲಕ ರಾಜಕೀಯವಾಗಿ ಬೆಳೆದು ಬಂದಿರುವ ಯಡಿಯೂರಪ್ಪ ಇದೀಗ ಶಿಕಾರಿಪುರ ಉತ್ಸವದ ಮೂಲಕ ಜನತೆಗೆ ಸಂಸ್ಕೃತಿಯನ್ನು ಉಣ ಬಡಿಸುತ್ತಿರುವುದು ಶ್ಲಾಘನೀಯ ಎಂದರು.ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ, `ಕಾಡಾ~ ಅಧ್ಯಕ್ಷ ಕೆ. ಶೇಖರಪ್ಪ, ಉರ್ದು ಅಕಾಡೆಮಿ ಅಧ್ಯಕ್ಷ ಅಮ್ಜದ್‌ಹುಸೇನ್, ಜಿ.ಪಂ. ಅಧ್ಯಕ್ಷೆ ಶುಭಾ ಕಷ್ಣಮೂರ್ತಿ, ತಾ.ಪಂ. ಅಧ್ಯಕ್ಷೆ ಜ್ಯೋತಿ ರಮೇಶ್, ಪುರಸಭೆ ಅಧ್ಯಕ್ಷೆ ವೀಣಾ ಮಲ್ಲೆೀಶಪ್ಪ ಮತ್ತಿತರರು ಉಪಸ್ಥಿತರಿದ್ದರು.

ತದನಂತರ ಗಾಯಕಿ ಎಂ.ಡಿ. ಪಲ್ಲವಿ ಹಾಡಿ, ಜನರನ್ನು ರಂಜಿಸಿದರು.

  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.