ಶನಿವಾರ, ಜನವರಿ 18, 2020
20 °C

ಶಿಕ್ಷಕರಿಗೆ ನ್ಯಾಯ ಒದಗಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕ ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಡಿಯಲ್ಲಿ ಕಾರ್ಯನಿರ್ವಹಿಸುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ನೇರ ನೇಮಕಾತಿ ಮೂಲಕ ಮಾಡಿಕೊಳ್ಳಲು ಸಂಘ ಮುಂದಾಗಿದೆ.ಈ ಶಾಲೆಗಳಲ್ಲಿ ಐದಾರು ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಾಂಶುಪಾಲರು ಮತ್ತು ಶಿಕ್ಷಕರು ಮತ್ತಿತರರು ಇದರಿಂದ ಬೀದಿಗೆ ಬರುವಂತಾಗಿದೆ.ಅವರನ್ನೇ ನಂಬಿಕೊಂಡಿರುವ ಅವರ ಕುಟುಂಬಗಳ ಗತಿ ಏನು? ಈ ಶಾಲೆಗಳನ್ನು ಕಟ್ಟಿ ಬೆಳೆಸಿದವರು ಈ (ನಾವು) ಶಿಕ್ಷಕರೇ.ಇಷ್ಟು ವರ್ಷಗಳ ಕಾಲ ಅವರನ್ನು ದುಡಿಸಿಕೊಂಡು ಈಗ ಹೊರ ಹಾಕುವುದು ಸರಿಯಲ್ಲ. ಸರ್ಕಾರ ಅವರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸುತ್ತೇವೆ. 

ಪ್ರತಿಕ್ರಿಯಿಸಿ (+)