ಸರ್ಕಾರಿ ಶಾಲೆಗಳ ಶಿಕ್ಷಕರ ವರ್ಗಾವಣೆ ನಿಯಮಗಳನ್ನು ನೋಡಿದರೆ ನಿರುದ್ಯೋಗಿಗಳನ್ನು ಮದುವೆಯಾಗುವುದೇ ಅಪರಾಧ ಎನ್ನುವಂತಾಗಿದೆ.

ಪತಿ- ಪತ್ನಿಯರು ಒಂದೇ ಕಡೆ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡುವ ಭರದಲ್ಲಿ ಶಿಕ್ಷಣ ಇಲಾಖೆ ಉಳಿದ ಶಿಕ್ಷಕರು ವರ್ಗಾವಣೆಗೆ ಅನರ್ಹರು ಎಂಬ ಧೋರಣೆ ತಾಳಿದೆ. ಸರ್ಕಾರಿ ನೌಕರಿಯಲ್ಲಿರುವ ಶಿಕ್ಷಕ, ಶಿಕ್ಷಕಿಯರು ನಿರುದ್ಯೋಗಿಗಳನ್ನು ವಿವಾಹವಾಗಲು ಹಿಂದೇಟು ಹಾಕುವಂಥ ವಾತಾವರಣ ಇದೆ.

ಪತಿ-ಪತ್ನಿ ಒಂದೇ ಊರಿನಲ್ಲಿ ಇರಬಹುದೆಂಬ ನಿಯಮದ ಅಡಿಯಲ್ಲಿ ಅರ್ಜಿ ಸಲ್ಲಿಸಿದವರಿಗೆ ಎರಡೇ ವರ್ಷಗಳಲ್ಲಿ ವರ್ಗಾವಣೆಗಳು ಆಗುತ್ತಿವೆ. ಕೆಲವು ಶಿಕ್ಷಕರು 15-20 ವರ್ಷಗಳ ಸೇವಾ ಹಿರಿತನ ಹೊಂದಿದ್ದರೂ ಅವರಿಗೆ ವರ್ಗಾವಣೆ ನಿರಾಕರಿಸಲಾಗುತ್ತಿದೆ.

ಕೆಲ ಶಿಕ್ಷಕರು ನಿವೃತ್ತಿ ತನಕ ಒಂದೇ ಶಾಲೆಯಲ್ಲಿ ಇರಬೇಕಾದ ಪರಿಸ್ಥಿತಿ ಇದೆ. ಕನಿಷ್ಠ ಐದು ವರ್ಷಕ್ಕೊಮ್ಮೆಯಾದರೂ ಶಿಕ್ಷಕರನ್ನು ಕಡ್ಡಾಯವಾಗಿ ವರ್ಗಾವಣೆ ಮಾಡುವಂತಿರಬೇಕು.

ಇದರಿಂದ ಅವರಿಗೆ ಉತ್ಸಾಹದಿಂದ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಶಿಕ್ಷಕರ ಸೇವಾ ಹಿರಿತನ ಹಾಗೂ ಮಾನವೀಯ ಕಾರಣಗಳ ಆಧಾರದ ಮೇಲೆ ವರ್ಗಾವಣೆಗೆ ಅವಕಾಶ ಕಲ್ಪಿಸಲು ಈಗಿನ ನಿಮಯಗಳನ್ನು ಸರ್ಕಾರ ಪರಿಷ್ಕರಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.