ಬುಧವಾರ, ಜನವರಿ 22, 2020
28 °C

ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: `ಜಿಲ್ಲೆಯು ರಾಜ್ಯ ದಲ್ಲಿಯೇ 10ನೇ ತರಗತಿಯಲ್ಲಿ ಉತ್ತಮ ಫಲಿತಾಂಶ ಹೊಂದಲು ಎಲ್ಲ ರೀತಿಯ ಪ್ರಯತ್ನ ಅಗತ್ಯ. ಇದಕ್ಕಾಗಿ ಎಲ್ಲ ಸಹಕಾರ ನೀಡಲಾಗುವುದು” ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಡಿವೆಪ್ಪ ಮನಮಿ ಹೇಳಿದರು.ಜಿಲ್ಲಾ ಪಂಚಾಯತಿಯ ಸಭಾಂಗ ಣದಲ್ಲಿ ಬುಧವಾರ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತ ನಾಡಿದ ಅವರು, ಕಳೆದ ವರ್ಷ ಜಿಲ್ಲೆಯು 10ನೇ ತರಗತಿ ಫಲಿತಾಂಶ ದಲ್ಲಿ 13ನೇ ಸ್ಥಾನದಲ್ಲಿತ್ತು. ಈ ಬಾರಿ ಇದು ಸುಧಾರಿಸಬೇಕು. ತರಬೇತಿ ಹೊಂದಿದ ಶಿಕ್ಷಕರಿಂದ ಮಕ್ಕಳಿಗೆ ಪಾಠ ಹೇಳಿಸುವುದು, ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ಆದ್ಯತೆ ನೀಡ ಬೇಕಾಗಿದೆ ಎಂದರು.ಗುಣಮಟ್ಟವುಳ್ಳ ಪಠ್ಯಪುಸ್ತಕಗಳನ್ನು ನೀಡಿ ಈ ಬಗ್ಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಸಾರ್ವ ಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಸೂಚಿಸ ಲಾಯಿತು. ಜಿಲ್ಲೆಯಲ್ಲಿ 1460 ಶಾಲೆಗಳಿದ್ದು, 63 ಶಾಲೆಗಳಿಗೆ ಕುಡಿಯುವ ನೀರಿನ ಅನಕೂಲ ಹಾಗೂ 43 ಶೌಚಾಲ ಯಗಳ ಅವಶ್ಯಕತೆ ಇದೆ ಎಂದು ಡಿಡಿಪಿಐ ಕೆ.ಆನಂದ ಸಭೆಗೆ ತಿಳಿಸಿದರು.`ಈ ಸೌಲಭ್ಯಗಳ ಜೊತೆಗೆ ಶಿಕ್ಷಣ ಅಭಿವೃದ್ಧಿಗೆ ಇನ್ನೂ ಏನಾದರೂ ಅನು ಕೂಲಗಳು ಬೇಕಾಗಿದ್ದರೆ ಪೂರೈಸೋಣ. ಆದರೆ ನಮ್ಮ ಜಿಲ್ಲೆಯಲ್ಲಿ ಶಿಕ್ಷಣದಲ್ಲಿ ಶೇ. 100 ರಷ್ಟು ಪ್ರಗತಿಯಾಗಬೇಕು. ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಫಲಿತಾಂಶದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು~ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎ.ಮೇಘಣ್ಣವರ ಹೇಳಿದರು.ಹೆಸ್ಕಾಂ ಅಧಿಕಾರಿಗಳು ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಸಸರಬರಾಜು ಬಗ್ಗೆ ತೀವ್ರ ನಿರ್ಲಕ್ಷ ವಹಿಸುತ್ತಿದ್ದಾರೆ ಎಂದು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ಕರಡಿಕೊಪ್ಪ ಸಭೆಯ ಗಮನಕ್ಕೆ ತಂದರು.

ಗಂಗಾ ಕಲ್ಯಾಣ ಯೋಜನೆಯಡಿ ಕೊರೆಯಿಸಿದ 122 ಕೊಳವೆ ಬಾವಿ ಗಳಿಗೆ ಇನ್ನೂವರೆಗೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ ಎಂದು ಡಾ. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿಗಳು ತಿಳಿಸಿದರು.122 ರಲ್ಲಿ 73 ಕೊಳವೆ ಬಾವಿಗಳಿಗೆ ವಿದ್ಯುತ್ ಸರಬರಾಜು ಅನುಮತಿ ದೊರೆತಿದೆ. 49 ಕೊಳವೆ ಬಾವಿಗಳಿಗೆ ಇಲಾಖೆಯಿಂದ ಠೇವಣಿ ತುಂಬಿಲ್ಲ. ಈ ವರ್ಷದ ಅಂತ್ಯಕ್ಕೆ 22 ಕಾಮಗಾರಿ ಗಳಲ್ಲಿ 7 ಕಾಮಗಾರಿಗಳನ್ನು ಜನೆವರಿ ಅಂತ್ಯದೊಳಗೆ ಮುಗಿಸಲಾಗುವುದು. ಇನ್ನುಳಿದ 15 ಕಾಮಗಾರಿಗಳನ್ನು ಬಜೆಟ್ ಬಂದ ನಂತರ ಫೆಬ್ರುವರಿ 15ರ ನಂತರ ಪ್ರಾರಂಭಿಸಲಾಗುವುದು ಎಂದು ಹೆಸ್ಕಾಂ ಅಧಿಕಾರಿಗಳು ಹೇಳಿದರು.ವಿಶೇಷ ಅಭಿವೃದ್ಧಿ ಯೋಜನೆಯ ಮಾಹಿತಿ ನೀಡಲು ವಿವಿಧ ಇಲಾಖೆ ಗಳಲ್ಲಿ ವೆಬ್‌ಸೈಟ್‌ಗಳನ್ನು ಹೊಂದ ಲಾಗಿದೆ. ಆದರೆ ಅವು ಕಾಲೋಚಿತ (ಅಪ್‌ಡೇಟ್) ಇರುವುದಿಲ್ಲ, ಕಾರಣ ಎಲ್ಲ ಕಚೇರಿಯ ಮುಖ್ಯಸ್ಥರು ತಾಲ್ಲೂಕು ಅಧಿಕಾರಿಗಳಿಗೆ ಇಲಾಖೆಯ ಮಾಹಿತಿಯನ್ನು ಕಾಲಕಾಲಕ್ಕೆ ಭರ್ತಿ ಮಾಡಬೇಕು. ಕೆಲವು ಇಲಾಖೆಗಳಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನ ವಿಳಂಬವಾಗುತ್ತಿದೆ.

 

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಜಿಲ್ಲೆಗೆ ನೀಡಿರುವ ಅನುದಾನವನ್ನು ಅವ್ಯ ವಹಾರ ಹಾಗೂ ವಿಳಂಬಕ್ಕೆ ಅವಕಾಶ ಕೊಡದಂತೆ ಸದ್ವಿನಿಯೋಗ ಮಾಡ ಬೇಕು. ಅಧಿಕಾರಿಗಳು ದಕ್ಷತೆಯಿಂದ ಹಾಗೂ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಪಿ.ಎ.ಮೇಘಣ್ಣವರ ಹೇಳಿದರು.ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ಮಮತಾಜಬಿ ನದಾಫ್, ಪ್ರೇಮಾ ಕೊಮಾರದೇಸಾಯಿ, ರತ್ನವ್ವ ಕಳ್ಳಿ ಮನಿ, ಉಪಕಾರ್ಯದರ್ಶಿ ಎಸ್.ಬಿ.ಮುಳ್ಳೊಳ್ಳಿ, ಎಂ.ಡಿ.ಪವಾರ, ಹೊಸಮನಿ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)