ಭಾನುವಾರ, ಮೇ 9, 2021
17 °C

ಶಿಕ್ಷಣ ಇಲಾಖೆಯಿಂದ `ಮಿಂಚಿನ ಸಂಚಾರ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೊಳಕಾಲ್ಮುರು: ಪ್ರಸಕ್ತ ಶೈಕ್ಷಣಿಕ ಸಾಲಿಗೆ ತಾಲ್ಲೂಕಿನಲ್ಲಿ ಶಾಲೆಗಳು ಶುಕ್ರವಾರ ಪುನರಾರಂಭವಾಗಿದ್ದು, ಎಲ್ಲಾ ಶಾಲೆಗಳನ್ನು ತಳಿರು- ತೋರಣಗಳಿಂದ ಅಲಂಕಾರ ಮಾಡಿ ಮಧ್ಯಾಹ್ನ ಬಿಸಿಯೂಟ ಜತೆ ಸಿಹಿ ನೀಡಲಾಯಿತು.ಶಿಕ್ಷಕರ ತೀವ್ರ ಸಮಸ್ಯೆ ಮಧ್ಯೆಯೂ ಸಮಸ್ಯೆ ಇರುವ ಶಾಲೆಗಳಿಗೆ ಶಿಕ್ಷಕರನ್ನು ತಾತ್ಕಾಲಿಕವಾಗಿ ನಿಯೋಜನೆ ಮಾಡಿದ ಪರಿಣಾಮ ಯಾವುದೇ ಗೊಂದಲಗಳು, ಪ್ರತಿಭಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ.ಶಾಲೆಯ ಬಿಸಿಯೂಟ ಸೌಲಭ್ಯ, ಶಿಕ್ಷಕರ ಕಾರ್ಯವೈಖರಿ, ಶಾಲೆಗಳ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಹಾಜರಾತಿ ಸೇರಿದಂತೆ ಶಾಲೆಗೆ ಸಂಬಂಧಪಟ್ಟ ಸಮಸ್ಯೆಗಳ ಬಗ್ಗೆ ಅರಿಯಲು ಶಿಕ್ಷಣ ಇಲಾಖೆ ಶುಕ್ರವಾರದಿಂದ ಜೂನ್ 8ರ ವರೆಗೆ `ಮಿಂಚಿನ ಸಂಚಾರ' ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಉಮಾದೇವಿ ತಿಳಿಸಿದರು.ಜೂನ್ 8ರ ಒಳಗೆ ತಾಲ್ಲೂಕಿನ ಎಲ್ಲಾ ಶಾಲೆಗಳಿಗೆ ತಂಡ ಭೇಟಿ ನೀಡಲಿದೆ. ಅದಕ್ಕಾಗಿ ಕ್ಷೇತ್ರ ಶಿಕ್ಷಣಾಧಿಕಾರಿ, ಸಮನ್ವಯ ಶಿಕ್ಷಣಾಧಿಕಾರಿ, ಶಿಕ್ಷಣ ಸಂಯೋಜಕರ ನೇತೃತ್ವದಲ್ಲಿ ಒಟ್ಟು 8 ತಂಡಗಳನ್ನು ರಚಿಸಲಾಗಿದೆ. ಭೇಟಿ ನಂತರ ತಂಡದ ಮುಖ್ಯಸ್ಥರು ನೀಡುವ ವರದಿ ಆಧರಿಸಿ, ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.