ಶಿಬಿರ ಸೇರಿದ ಸಂದೀಪ್, ಸರ್ದಾರ್

ಶನಿವಾರ, ಮೇ 25, 2019
32 °C

ಶಿಬಿರ ಸೇರಿದ ಸಂದೀಪ್, ಸರ್ದಾರ್

Published:
Updated:

ಬೆಂಗಳೂರು: ನಿಷೇಧದಿಂದ ಮುಕ್ತರಾಗಿರುವ ಸಂದೀಪ್ ಸಿಂಗ್ ಹಾಗೂ ಸರ್ದಾರ್ ಸಿಂಗ್ ಅವರು ಶುಕ್ರವಾರ ಇಲ್ಲಿನ ಭಾರತ ಕ್ರೀಡಾ ಪ್ರಾಧಿಕಾರ (ಎಸ್‌ಎಐ)ದಲ್ಲಿ ನಡೆಯುತ್ತಿರುವ ಭಾರತ ಹಾಕಿ ತಂಡದ ಶಿಬಿರ ಸೇರಿಕೊಂಡಿದ್ದಾರೆ.`ಮತ್ತೆ ತಂಡ ಸೇರಲು ನಮಗೆ ಖುಷಿಯಾಗುತ್ತಿದೆ. ಮನೆಯಲ್ಲಿ ಸಮಸ್ಯೆ ಇದ್ದ ಕಾರಣ ನಾವು ಶಿಬಿರ ತೊರೆದಿದ್ದೆವು. ಈಗ ಸಮಸ್ಯೆ ಬಗೆ ಹರಿದಿದೆ. ಒಲಿಂಪಿಕ್ಸ್ ಅರ್ಹತಾ ಸುತ್ತಿನಲ್ಲಿ ನಾವು ಜಯ ಗಳಿಸಬೇಕು~ ಎಂದು ಅವರು ತಿಳಿಸಿದರು.ಚೀನಾದ ಓರ್ಡೋಸ್‌ನಲ್ಲಿ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಚಾಂಪಿಯನ್ ಆದ ತಂಡದ 18 ಮಂದಿ ಆಟಗಾರರು ನವದೆಹಲಿಗೆ ತೆರಳಲಿದ್ದಾರೆ. ಭಾನುವಾರ ಮಧ್ಯಾಹ್ನ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ. ಆ ಸಂದರ್ಭದಲ್ಲಿ ಆಟಗಾರರಿಗೆ ಕೇಂದ್ರ ಸರ್ಕಾರ ತಲಾ 1.5 ಲಕ್ಷ ಹಣ ನೀಡಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry