ಶನಿವಾರ, ಏಪ್ರಿಲ್ 17, 2021
31 °C

ಶಿಲ್ಪಿಗಳಿಗಿದೋ ಕಾರ್ಯಾಗಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮನೆಯ ಗೋಡೆಗಳ ಮೇಲೆ ಸುಂದರವಾದ ಶಿಲ್ಪಕಲಾಕೃತಿಗಳು ಅಥವಾ ಪೇಂಟಿಂಗ್ ನಿಮ್ಮ ಮನೆಯ ಗೋಡೆಗಳನ್ನು ಅಲಂಕರಿಸಿದರೆ, ಅತಿಥಿಗಳು ಅದನ್ನು ನಿಮ್ಮ ಮುಂದೆಯೇ ಪ್ರಶಂಸಿದರೆ ಸಂತೋಷವಾಗುತ್ತದೆ. ಅಲ್ಲವೇ?

ಮನೆಯ ಗೋಡೆ, ಟೀಪಾಯಿ, ಕುರ್ಚಿ ಹೀಗೆ ಮನೆಯಲ್ಲಿರುವ ಎಲ್ಲ ವಸ್ತುಗಳನ್ನೂ ಸುಂದರವಾಗಿ ಸಿಂಗರಿಸುವಂತಾದರೆ, ಈ ವಯ್ಯಾರವನ್ನು ನೀವೇ ನಿಮ್ಮ ಕೈಯಾರೆ ಮಾಡುವಂತಾದರೆ, ಮನೆಯನ್ನು ಸಿಂಗರಿಸಿದ ಆನಂದ ನಿಮಗೆ ದೊರೆಯುತ್ತದೆ. ಮನೆ ಅಲಂಕರಿಸುವ ಪ್ರೀತಿ ನಿಮಗಿದ್ದರೆ ಇಲ್ಲಿ ಕೇಳಿ...

ಕಳೆದ ಮೂವತ್ತು ವರ್ಷಗಳಿಂದ ದೇಶದಾದ್ಯಂತ 3ಡಿ ಮ್ಯೂರಲ್ ಆರ್ಟ್ ಅಂದರೆ ಭಿತ್ತಿ ಚಿತ್ರಗಳ ಕುರಿತಾದ ತರಬೇತಿ ನೀಡುತ್ತಿರುವ ಶಿಲ್ಪಿ ಹಾಗೂ ವಿನ್ಯಾಸಗಾರ ಭರತ್ ರಾವಲ್ ಇದೀಗ ಬೆಂಗಳೂರಿನಲ್ಲಿ ಈ ಕುರಿತಾದ ಕಾರ್ಯಾಗಾರ ನಡೆಸಲಿದ್ದಾರೆ.

ಮ್ಯೂರಲ್ ಆರ್ಟ್ (ಭಿತ್ತಿ ಚಿತ್ರ) ನಲ್ಲಿ 3 ಡಿ ಸೆರಾಮಿಕ್, 3 ಡಿ ಸಿಪೋರೆಕ್ಸ್, 3 ಡಿ ಗ್ಲಾಸ್ ಹಾಗೂ 3 ಡಿ ಮಿಕ್ಸ್ ಮೀಡಿಯಾ ಎಂಬ ವಿಧಗಳಿವೆ. ಆಸಕ್ತರು ಇವುಗಳಲ್ಲಿ ಯಾವುದನ್ನಾದರೂ ಕಲಿಯಬಹುದು. ತರಬೇತಿಯ ಅವಧಿ 2ರಿಂದ 4 ಗಂಟೆ. ಚಿತ್ರ ಕಲಾವಿದರು, ಕುಶಲಕರ್ಮಿಗಳು, ವಿದ್ಯಾರ್ಥಿಗಳು, ಮಹಿಳೆಯರು, ಹಾಗೂ ಕಲೆಯಲ್ಲಿ ಆಸಕ್ತಿ ಉಳ್ಳವರು ಇದರಲ್ಲಿ ಭಾಗವಹಿಸಬಹುದು.

`ಸುಮಾರು ಮೂವತ್ತು ವರ್ಷಗಳಿಂದ ಮ್ಯೂರಲ್ ಆರ್ಟ್ಸ್ ಕಲಿಸುತ್ತ ಬಂದಿದ್ದೇನೆ. ಇಡೀ ಭಾರತದಾದ್ಯಂತ ಸುಮಾರು 6000 ವಿದ್ಯಾರ್ಥಿಗಳು ಈ ಕಲಾಕೃತಿಗಳ ಕಲಿಕೆಯಲ್ಲಿ ಆಸಕ್ತಿ ತೋರಿ ಕಲಿತಿದ್ದಾರೆ. ಅದರಲ್ಲಿ ಕೆಲವರು ಇದನ್ನೇ ವೃತ್ತಿಯನ್ನಾಗಿ ಮಾಡಿಕೊಂಡು ಬಂದಿದ್ದಾರೆ. ಈ ಕಾರ್ಯಾಗಾರವನ್ನು ವಾಣಿಜ್ಯೀಕರಣದ ಉದ್ದೇಶದಿಂದ ನಡೆಸುತ್ತಿಲ್ಲ. ಕಲೆಯನ್ನು ಆರಾಧಿಸುವವರಿಗೆ ಪ್ರೋತ್ಸಾಹ ನೀಡಲು ಈ ತರಬೇತಿ ಕಾರ್ಯಾಗಾರವನ್ನು ನಡೆಸುತ್ತಿದ್ದೇನೆ. ಈ ತರಬೇತಿಯಿಂದ ಅನೇಕ ಮಹಿಳೆಯರು ಈ ಕಲೆಯನ್ನೇ ವೃತ್ತಿಯಾಗಿಸಿಕೊಂಡು ಸ್ವಉದ್ಯೋಗ ಕಂಡುಕೊಂಡಿದ್ದಾರೆ.

ಯುವಜನತೆಗೆ ಕಲೆಯಲ್ಲಿ ಆಸಕ್ತಿ ಬೆಳೆಸುವುದು ಮತ್ತು ಕಲೆಯ ಮಹತ್ವವನ್ನು ತಿಳಿಸುವುದೇ ಕಾರ್ಯಾಗಾರದ ಉದ್ದೇಶವಾಗಿದೆ~.

`ಕಳೆದ 30 ವರ್ಷಗಳ ವೃತ್ತಿ ಪಯಣ ಸಂತಸ ತಂದಿದೆ. ಪುಣೆಯಲ್ಲಿ ಶಿಲ್ಪ ವಿನ್ಯಾಸಗಾರನಾಗಿ ಕೆಲಸ ನಿರ್ವಹಿಸುತ್ತ ಬಂದಿರುವೆ. ಅದೇ ರೀತಿ ಕಾರ್ಯಾಗಾರಗಳನ್ನು ನಡೆಸುತ್ತ ಬಂದಿದ್ದೇನೆ. ಜನರ ಪ್ರತಿಕ್ರಿಯೆಯೂ ಚೆನ್ನಾಗಿದೆ~ ಎಂದು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.

ಕಾರ್ಯಾಗಾರವು ಆಗಸ್ಟ್ 1ರಿಂದ 9 ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 7 ಗಂಟೆಯವರೆಗೆ ಮಹಾವೀರ ಸೇವಾ ಸದನ, ನಂ. 157, 5ನೇ ಮುಖ್ಯ ರಸ್ತೆ, ಚಾಮರಾಜಪೇಟೆ ಇಲ್ಲಿ ನಡೆಯಲಿದೆ. ಕಾರ್ಯಾಗಾರವು ಸಂಪೂರ್ಣವಾಗಿ ಉಚಿತವಾಗಿದೆ.

ವಿವರಗಳಿಗೆ: www.bharatrawal.com ಅಥವಾ ಮೊಬೈಲ್ ಸಂಖ್ಯೆ- 98861 70724 ಸಂಪರ್ಕಿಸಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.