ಬುಧವಾರ, ಮಾರ್ಚ್ 3, 2021
22 °C

ಶಿಲ್ಪ ಉದ್ಯಾನ ನೋಡಿ ಖುಷಿಪಟ್ಟ ಒಲಾಂಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಲ್ಪ ಉದ್ಯಾನ ನೋಡಿ ಖುಷಿಪಟ್ಟ ಒಲಾಂಡ್‌

ಚಂಡೀಗಡ (ಐಎಎನ್‌ಎಸ್): ಪ್ರಧಾನಿ ನರೇಂದ್ರ ಮೋದಿ ಮತ್ತು ಮೂರು ದಿನಗಳ ಭಾರತ ಪ್ರವಾಸಕ್ಕೆ ಆಗಮಿಸಿರುವ ಫ್ರಾನ್ಸ್ ಅಧ್ಯಕ್ಷ ಫ್ರಾಂಸ್ವಾ ಒಲಾಂಡ್ ಅವರು ಇಲ್ಲಿನ ಖ್ಯಾತ ಶಿಲ್ಪೋದ್ಯಾನಕ್ಕೆ ಭೇಟಿ ನೀಡಿದರು.ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವ ಒಲಾಂಡ್  ಮಧ್ಯಾಹ್ನ ಒಂದು ಗಂಟೆಗೆ ಇಲ್ಲಿಗೆ ಆಗಮಿಸಿದರು. ಒಲಾಂಡ್ ಆಗಮಿಸಿದ 80 ನಿಮಿಷಗಳ ನಂತರ ಮೋದಿ ಚಂಡೀಗಡ ತಲುಪಿದರು. ಈ ಇಬ್ಬರು ಮುಖಂಡರು ಪರಸ್ಪರ ಕೈಕುಲುಕಿ ಆಲಂಗಿಸಿಕೊಂಡರು.ಒಲಾಂಡ್ ಅವರನ್ನು ಪಂಜಾಬಿ ಗಿಧಾ ಜನಪದ ನೃತ್ಯದ ಮೂಲಕ ಹಾರ್ದಿಕವಾಗಿ ಸ್ವಾಗತಿಸಲಾಯಿತು.  ನಂತರ ಒಲಾಂಡ್  ಮತ್ತು ಮೋದಿ ಅವರು ನೇಕ್ ಚಂದ್ ನಿರ್ಮಿಸಿರುವ ಶಿಲ್ಪೋದ್ಯಾನಕ್ಕೆ ತೆರಳಿದರು. ಕೈಗಾರಿಕೆ ಮತ್ತು ಮನೆ ತ್ಯಾಜ್ಯಗಳನ್ನು ಬಳಸಿ ಉದ್ಯಾನದ ಮೂಲಸೌಕರ್ಯ ಮತ್ತು ಕಲಾಕೃತಿಗಳನ್ನು ನಿರ್ಮಿಸಿರು ವುದನ್ನು ಕಂಡು ಒಲಾಂಡ್ ಮೆಚ್ಚುಗೆ ವ್ಯಕ್ತಪಡಿಸಿದರು.ಸೆರಾಮಿಕ್, ಬಳೆ, ಸ್ನಾನದ ಕೊಠಡಿಯ ಸಲಕರಣೆಗಳನ್ನು ಬಳಸಿ ನಿರ್ಮಿಸಲಾಗಿರುವ ಮಾನವ ಮತ್ತು ಪ್ರಾಣಿಗಳ ಕಲಾಕೃತಿಗಳನ್ನು ಆಸಕ್ತಿಯಿಂದ ವೀಕ್ಷಿಸಿದ  ಒಲಾಂಡ್ ಅವರು ಅವುಗಳ ವಿವರಗಳನ್ನು ಪಡೆದರು. ಉದ್ಯಾನಕ್ಕೆ ಭೇಟಿ ನೀಡಿದ ಸಾರ್ವಜನಿಕರು ಈ ಇಬ್ಬರು ಮುಖಂಡರ ಜತೆ ಫೋಟೊ ಮತ್ತು ಸೆಲ್ಫಿ  ತೆಗೆದು ಕೊಂಡು ಖುಷಿ ಪಟ್ಟರು.ಶಿವಾಲಿಕ್ ಪರ್ವತದಲ್ಲಿ ಭಾರತ ಮತ್ತು ಫ್ರಾನ್ಸ್ ಪ್ರಾಚ್ಯವಸ್ತು ತಜ್ಞರು ಪತ್ತೆ ಮಾಡಿರುವ ಪಳೆಯುಳಿಕೆಗಳನ್ನು ಒಲಾಂಡ್ ಅವರಿಗೆ ತೋರಿಸಲಾಯಿತು. ಈ ಇಬ್ಬರು ಮುಖಂಡರು  20 ನಿಮಿಷ ಉದ್ಯಾನದಲ್ಲಿ ಇದ್ದರು. ಈ ಸಂದರ್ಭದಲ್ಲಿ ಭಾರಿ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೊಬಾಲ್ ಸಹ ಪ್ರಧಾನಿ ಜತೆ ಇದ್ದರು.ನಂತರ ಪ್ರಧಾನಿ ಮತ್ತು ಒಲಾಂಡ್ ಅವರು ಪಕ್ಕದಲ್ಲಿಯೇ ಇರುವ ಕ್ಯಾಪಿಟಲ್ ಸಂಕೀರ್ಣದ ಕರಕುಶಲ ವಸ್ತುಗಳ ಸಂಗ್ರಹಾಲಯ, ಸಚಿವಾಲಯ, ಹೈಕೋರ್ಟ್, ವಿಧಾನಸೌದ ಕಟ್ಟಡಕ್ಕೆ ಭೇಟಿ ನೀಡಿದರು.ಫ್ರಾನ್ಸ್‌ನ ವಾಸ್ತುಶಿಲ್ಪಿ ಲಾ ಕೊರ್ಬೈಸರ್ ಅವರು ಈ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಕ್ಯಾಪಿಟಲ್ ಸಂಕೀರ್ಣದ  ಎದುರು ಪಂಜಾಬ್‌ನ ಸಾಂಪ್ರದಾಯಿಕ ಬಾಂಗ್ರಾ ನೃತ್ಯದ ಮೂಲಕ ಈ ನಾಯಕರನ್ನು ಸ್ವಾಗತಿಸಲಾಯಿತು.ನೇಕ್ ಚಂದ್ ಪುತ್ರನಿಗೆ ಗೇಟ್‌ಪಾಸ್: ಫ್ರಾನ್ಸ್  ಅಧ್ಯಕ್ಷ ಒಲಾಂಡ್ ಮತ್ತು ಪ್ರಧಾನಿ ಮೋದಿ ಅವರು ಆಗಮಿಸುವ ಸ್ವಲ್ಪ ಮೊದಲು ಶಿಲ್ಪೋದ್ಯಾನಕ್ಕೆ ನಿರ್ಮಾಪಕ ನೇಕ್ ಚಂದ್ ಅವರ ಪುತ್ರ ಅನುಜ್ ಸೈನಿ ಅವರನ್ನು ಭದ್ರತಾ ಪಡೆಯ ಸಿಬ್ಬಂದಿ ಹೊರಗೆ ಕಳುಹಿಸಿದ ಘಟನೆ ನಡೆಯಿತು.ವಾರ್ಷಿಕ ₹1.8 ಕೋಟಿ ಆದಾಯ: ನೇಕ್ ಚಂದ್ ಸೈನಿ ಅವರು 1976ರಲ್ಲಿ 40 ಎಕರೆ ಪ್ರದೇಶದಲ್ಲಿ  ಸ್ಥಾಪಿಸಿರುವ ಕಲಾ ಗ್ಯಾಲರಿಯಲ್ಲಿ ತ್ಯಾಜ್ಯ ವಸ್ತುಗಳನ್ನು ಬಳಸಿ ಸಾವಿರಾರು ಕಲಾಕೃತಿಗಳನ್ನು ರಚಿಸಿದ್ದಾರೆ.  ಪ್ರತಿವರ್ಷ ಈ ಕಲಾ ಗ್ಯಾಲರಿಗೆ ದೇಶ, ವಿದೇಶಗಳ 2.5 ಲಕ್ಷ ಜನರು ಭೇಟಿ ನೀಡುತ್ತಾರೆ. ವಾರ್ಷಿಕ ₹ 1.8 ಕೋಟಿ ಆದಾಯವಿದೆ.ಪೂರ್ವಾನ್ವಯ ತೆರಿಗೆ  ಮುಗಿದ ಅಧ್ಯಾಯ: ಪೂರ್ವಾನ್ವಯ ತೆರಿಗೆ ಪದ್ಧತಿ ಮುಗಿದ ಅಧ್ಯಾಯ. ಮತ್ತೆ ಅಂತಹ ವ್ಯವಸ್ಥೆಗೆ ಅವಕಾಶವೇ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಇಲ್ಲಿ ವಿದೇಶಿ ಹೂಡಿಕೆದಾರರಿಗೆ ಸ್ಪಷ್ಟ ಭರವಸೆ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.